ETV Bharat / bharat

ಕೊಯಮತ್ತೂರು ಸ್ಫೋಟ: ಎನ್​ಐಎ, ತಮಿಳುನಾಡು ಪೊಲೀಸರ ಶೋಧಕಾರ್ಯ ಮುಂದುವರಿಕೆ

ಕಾನೂನುಬಾಹಿರ ಕೃತ್ಯ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಆರೋಪದಡಿಯಲ್ಲಿ ಫಿರೋಜ್ ಇಸ್ಮಾಯಿಲ್ ಎಂಬಾತನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಈತನನ್ನು 2019 ರಲ್ಲಿ ಯುಎಇ ಸರ್ಕಾರವು, ಆ ದೇಶದಲ್ಲಿ ತಂಗಿದ್ದಾಗ ಇಸ್ಲಾಮಿಕ್ ಸ್ಟೇಟ್ಸ್ (ಐಎಸ್) ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಗಡಿಪಾರು ಮಾಡಿತ್ತು.

ಎನ್​ಐಎ, ತಮಿಳುನಾಡು ಪೊಲೀಸರ ಶೋಧಕಾರ್ಯ ಮುಂದುವರಿಕೆ
Coimbatore blast TN police NIA raids continue
author img

By

Published : Nov 4, 2022, 12:53 PM IST

ಚೆನ್ನೈ: ಕೊಯಮತ್ತೂರು ಸ್ಫೋಟ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ರಾಜ್ಯದಾದ್ಯಂತ ದಾಳಿಗಳನ್ನು ಮುಂದುವರೆಸಿವೆ. ಕಳೆದ ಹತ್ತು ದಿನಗಳಿಂದ ನಗರ ಮತ್ತು ಉಪನಗರಗಳಲ್ಲಿ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಕೊಯಮತ್ತೂರು ನಗರ ಪೊಲೀಸ್ ಮೂಲಗಳು ತಿಳಿಸಿವೆ. ಸ್ಫೋಟದಲ್ಲಿ ಪರೋಕ್ಷವಾಗಿ ಭಾಗಿಯಾಗಿರುವ ಹಲವರ ಮೇಲಿನ ಕಣ್ಗಾವಲು ಕೂಡ ಮುಂದುವರಿದಿದೆ. ಏತನ್ಮಧ್ಯೆ, ಸ್ಫೋಟದಲ್ಲಿ ಭಾಗಿಯಾಗಿರುವ ಏಳು ಮಂದಿ ಸ್ನೇಹಿತರು ಮತ್ತು ಸಂಬಂಧಿಕರ ನಿವಾಸಗಳು, ಸ್ಥಳಗಳ ಮೇಲೆ ಎನ್ಐಎ ದಾಳಿ ಮಾಡಿ ಶೋಧ ನಡೆಸಿದೆ.

ಕಾನೂನುಬಾಹಿರ ಕೃತ್ಯ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಆರೋಪದಡಿಯಲ್ಲಿ ಫಿರೋಜ್ ಇಸ್ಮಾಯಿಲ್ ಎಂಬಾತನನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಈತನನ್ನು 2019 ರಲ್ಲಿ ಯುಎಇ ಸರ್ಕಾರವು, ಆ ದೇಶದಲ್ಲಿ ತಂಗಿದ್ದಾಗ ಇಸ್ಲಾಮಿಕ್ ಸ್ಟೇಟ್ಸ್ (ಐಎಸ್) ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಗಡೀಪಾರು ಮಾಡಿತ್ತು.

ಈ ಬಗ್ಗೆ ಮಾತನಾಡಿದ ಫಿರೋಜ್ ತಾಯಿ ಮೈಮುನಾ ಬೇಗಂ, ಫಿರೋಜ್ ಮತ್ತು ಆತನ ಸಹೋದರ ಮೊಹಮ್ಮದ್ ನವಾಜ್ ಇಸ್ಮಾಯಿಲ್ (ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತನಾದ ಮತ್ತೊಬ್ಬ) ನಿರಪರಾಧಿಗಳಾಗಿದ್ದು, ಫಿರೋಜ್​ನನ್ನು ಯುಎಇಯಿಂದ ಗಡೀಪಾರು ಮಾಡಿರಲಿಲ್ಲ. ಆತನ ವೀಸಾ ಅವಧಿ ಮುಗಿದ ಕಾರಣಕ್ಕೆ ಆತ ವಾಪಸ್ ಬಂದಿದ್ದಾರೆ ಎಂದು ಹೇಳಿದ್ದಾರೆ.

ಮೃತ ಜಮೀಶಾ ಮುಬಿನ್ ಮತ್ತು ಆತನ ಸಹಚರರಾದ ಅಫ್ಸರ್ ಖಾನ್, ಮೊಹಮ್ಮದ್ ಅಜರುದ್ದೀನ್ ಇ-ಕಾಮರ್ಸ್ ಸೈಟ್‌ಗಳ ಮೂಲಕ ರಾಸಾಯನಿಕ ವಸ್ತುಗಳನ್ನು ಖರೀದಿಸಿರುವ ಬಗ್ಗೆ ಕೊಯಮತ್ತೂರು ನಗರ ಪೊಲೀಸರು ಈಗಾಗಲೇ ಇ-ಕಾಮರ್ಸ್ ಪೋರ್ಟಲ್‌ನಿಂದ ಮಾಹಿತಿ ಪಡೆದಿದ್ದಾರೆ. ಐಇಡಿ ಬಾಂಬ್‌ಗಳನ್ನು ತಯಾರಿಸಲು ಬಳಸಬಹುದಾದ ಪೊಟ್ಯಾಸಿಯಮ್ ನೈಟ್ರೇಟ್, ಅಲ್ಯೂಮಿನಿಯಂ ಪೌಡರ್ ಸಲ್ಫರ್ ಮತ್ತು ಇದ್ದಿಲು ಮುಂತಾದ ರಾಸಾಯನಿಕಗಳನ್ನು ಮೃತ ಮುಬಿನ್ ಈತನ ನಿವಾಸದಿಂದ ವಶಪಡಿಸಿಕೊಳ್ಳಲಾಗಿರುವುದು ಗಮನಾರ್ಹ.

ಇದನ್ನೂ ಓದಿ: ಕೊಯಮತ್ತೂರು ಸ್ಫೋಟ ಪ್ರಕರಣ: ಕಾರಿಗೆ ಸಿಲಿಂಡರ್ ಕೊಂಡೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.