ಹಲ್ದ್ವಾನಿ(ಉತ್ತರಾಖಂಡ): ದೇಶಾದ್ಯಂತ ಮಳೆಗಾಲ ಆರಂಭಗೊಂಡಿದೆ. ಹೀಗಾಗಿ ಕೆಲವೆಡೆ ಹಾವುಗಳ ಕಾಟ ಹೆಚ್ಚಾಗುತ್ತಿದೆ. ಈ ವೇಳೆ ಪಾರ್ಕ್ ಮಾಡಿರುವ ವಾಹನಗಳ ಒಳಗೆ ಹಾವು ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಅವುಗಳನ್ನ ಹತ್ತುವ, ಹೊರತೆಗೆಯುವ ಮೊದಲು ಒಂದು ಸಲ ಪರಿಶೀಲನೆ ನಡೆಸುವುದು ಸೂಕ್ತ. ಸದ್ಯ ಅಂತಹದೊಂದು ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ.
ಉತ್ತರಾಖಂಡನ ಹಲ್ದ್ವಾನಿಯಲ್ಲಿ ಪಾರ್ಕ್ ಮಾಡಿದ್ದ ಬೈಕ್ ಸೀಟಿನ ಕೆಳಗೆ ದೈತ್ಯ ಗಾತ್ರದ ನಾಗರಹಾವು ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಬೈಕ್ ಸವಾರ ಅದನ್ನ ನೋಡಿರುವ ಕಾರಣ ಯಾವುದೇ ರೀತಿಯ ಅಪಾಯ ನಡೆದಿಲ್ಲ. ರಾಂಪುರ ರಸ್ತೆಯ ಪಂಚಾಯತ್ ಬಳಿ ಪಾರ್ಕ್ ಮಾಡಿದ್ದ ಬೈಕ್ನಲ್ಲಿ ಈ ನಾಗರಹಾವು ಪತ್ತೆಯಾಗಿದೆ. ಸ್ಥಳದಲ್ಲಿ ಸೇರಿರುವ ಕೆಲ ಯುವಕರು ಅದರ ರಕ್ಷಣೆ ಮಾಡಿ ಕಾಡಿನೊಳಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುವಕನೋರ್ವ ಹೊರಗಡೆ ಹೋಗಲು ಬೈಕ್ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಬೈಕ್ ಸೀಟಿನ ಕೆಳ ಭಾಗದಲ್ಲಿ ಶಬ್ದ ಆಗಿದೆ. ಬೈಕ್ ಸವಾರನ ಗಮನ ಸೀಟಿನ ಕೆಳಗೆ ಇದ್ದ ಹಾವಿನ ಮೇಲೆ ಬಿದ್ದಿದೆ. ತಕ್ಷಣವೇ ಅಲ್ಲಿಂದ ದೂರು ಸರಿದಿದ್ದಾನೆ. ಈ ಮಾಹಿತಿ ಸ್ಥಳದಲ್ಲಿದ್ದವರಿಗೂ ಹರಡಿದೆ. ಸ್ಥಳದಲ್ಲಿದ್ದ ಕೆಲವರು ಅದರ ರಕ್ಷಣೆ ಮಾಡಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿರಿ: ಕಂಠಪೂರ್ತಿ ಕುಡಿದ ವ್ಯಕ್ತಿಯ ದೇಹದಲ್ಲಿ ಭೂತ ಬಂದಿದೆ ಎಂದು ಹಿಗ್ಗಾಮುಗ್ಗಾ ಥಳಿಸಿದ್ರು: Viral Video