ETV Bharat / bharat

ಅತಿ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಕೋಲ್ ಇಂಡಿಯಾ ಗುರಿಯಾಗಿರಲಿ: ಸಿಐಎಲ್​ ಮುಖ್ಯಸ್ಥ

author img

By

Published : Jan 15, 2023, 5:07 PM IST

ಸರ್ಕಾರಿ ಸ್ವಾಮ್ಯದ ಕಂಪನಿ ಕೋಲ್ ಇಂಡಿಯಾ ಮೂರೂ ನಿಯತಾಂಕಗಳಲ್ಲಿ ತನ್ನ ಗುರಿಯನ್ನು ಸಾಧಿಸಿದೆ ಎಂದು ಸಿಐಎಲ್​ ಮುಖ್ಯಸ್ಥ ಪ್ರಮೋದ್ ಅಗರವಾಲ್ ಹೇಳಿದ್ದಾರೆ. ದೇಶಕ್ಕೆ ಅತಿಕಡಿಮೆ ದರದಲ್ಲಿ ವಿದ್ಯುತ್​ ಪೂರೈಸುವುದು ಕೋಲ್ ಇಂಡಿಯಾ ಗುರಿಯಾಗಿರಬೇಕೆಂದು ಅವರು ಕರೆ ನೀಡಿದ್ದಾರೆ.

ಅತಿ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಕೋಲ್ ಇಂಡಿಯಾ ಗುರಿಯಾಗಿರಲಿ: ಸಿಐಎಲ್​ ಮುಖ್ಯಸ್ಥ
coal-india-should-aim-to-supply-electricity-at-the-lowest-rates-cil-chief

ನವದೆಹಲಿ: ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಕಂಪನಿ ಕೋಲ್ ಇಂಡಿಯಾ ಉತ್ಪಾದಿಸುವ ಶೇ 80ರಷ್ಟು ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಿಗಾಗಿ ಮೀಸಲಾಗಿರುವುದರಿಂದ ಕಂಪನಿಯು ದೇಶಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿರಬೇಕೆಂದು ಕೋಲ್ ಇಂಡಿಯಾ ಮುಖ್ಯಸ್ಥ ಪ್ರಮೋದ್ ಅಗರವಾಲ್ ಹೇಳಿದ್ದಾರೆ. ಕೋಲ್ ಇಂಡಿಯಾ (ಸಿಐಎಲ್) ದೇಶೀಯ ಕಲ್ಲಿದ್ದಲು ಪೂರೈಕೆಯಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಪಾಲು ಹೊಂದಿದೆ ಮತ್ತು ದೇಶದ ವಿದ್ಯುತ್ ಉತ್ಪಾದನೆಯ ಮುಕ್ಕಾಲು ಭಾಗ ಕಲ್ಲಿದ್ದಲು ಆಧಾರಿತವಾಗಿದೆ.

ಸಿಐಎಲ್​​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಅಗರವಾಲ್ ತನ್ನ ಉದ್ಯೋಗಿಗಳಿಗೆ ಇತ್ತೀಚೆಗೆ ನೀಡಿದ ಸಂದೇಶದಲ್ಲಿ - ನಮ್ಮ ಪಾತ್ರವು ಕೈಗೆಟುಕುವ ವೆಚ್ಚದಲ್ಲಿ ಖಚಿತವಾದ ಶಕ್ತಿಯನ್ನು ಪೂರೈಸುವುದು ಎಂದು ಹೇಳಿದರು. ಮುಂದಿನ ಕೆಲ ದಶಕಗಳವರೆಗೆ ದೇಶದಲ್ಲಿ ಇಂಧನ ವಿಸ್ತರಣೆಗೆ ಸಾಕಷ್ಟು ಅವಕಾಶವಿದೆ ಎಂದು ಹೇಳಿದ ಅವರು, ಕಂಪನಿಯು ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಿದರು.

ಹಣಕಾಸಿನ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಇನ್ನೂ ಎತ್ತರದ ಗುರಿಯನ್ನು ತಲುಪುವ ಮೂಲಕ ವಾರ್ಷಿಕ ಗುರಿಗಳನ್ನು ಸಾಧಿಸಿ ಮತ್ತು 2023ರ ಹಣಕಾಸು ವರ್ಷವನ್ನು ಮಹತ್ವಪೂರ್ಣವಾಗಿಸಿ. ಈ ಸಮಯದಲ್ಲಿ ವಿಶ್ರಾಂತಿ ಪಡೆಯಬೇಡಿ. ಒಮ್ಮೆ ನಾವು 700 MT ಉತ್ಪಾದನಾ ಗುರಿಯನ್ನು ಸಾಧಿಸಿದರೆ ಅದು ಮುಂದಿನ ಬೆಳವಣಿಗೆಗೆ ಬೆಂಚ್‌ಮಾರ್ಕ್ ಬೇಸ್ ಆಗಿರಬೇಕು ಎಂದ ಅವರು, ಅವಿರತ ಬದ್ಧತೆಯೊಂದಿಗೆ ದೇಶದ ಶಕ್ತಿ ಮತ್ತು ಅಭಿವೃದ್ಧಿ ಗುರಿಗಳನ್ನು ಪೂರೈಸುವಲ್ಲಿ ಸಂಘಟಿತ ಪ್ರಯತ್ನ ಮಾಡುವಂತೆ ನೌಕರರಿಗೆ ವಿನಂತಿಸಿದರು.

ಕಾರ್ಯಕ್ಷಮತೆಯ ಎಲ್ಲ ಮೂರು ನಿಯತಾಂಕಗಳಾದ ಉತ್ಪಾದನೆ - 479 ಮಿಲಿಯನ್ ಟನ್‌ಗಳು, ಪೂರೈಕೆ - 508 ಮಿಲಿಯನ್​​ ಟನ್​ಗಳು ಮತ್ತು ಓಬಿಆರ್ 1,155 Cu.M ಡಿಸೆಂಬರ್​​ವರೆಗೆ ಸಾಧಿಸಲಾಗಿದ್ದು, ಆಯಾ ಪ್ರಗತಿಯ ಗುರಿಗಳಿಗಿಂತ ಮುಂದಿದೆ. ಈ ಮೈಲಿಗಲ್ಲು ವಿಶೇಷ ಹಾಗೂ ಅಸಾಧಾರಣವಾಗಿದೆ. ಆದಾಗ್ಯೂ, ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ ಎಂದು ಕೋಲ್ ಇಂಡಿಯಾ ಮುಖ್ಯಸ್ಥ ಪ್ರಮೋದ್ ಅಗರವಾಲ್ ನೌಕರರಿಗೆ ನೀಡಿದ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. 2025-26ರ ವೇಳೆಗೆ ಕೋಲ್ ಇಂಡಿಯಾ ಲಿಮಿಟೆಡ್ 1 ಬಿಲಿಯನ್​ ಟನ್​ ಕಲ್ಲಿದ್ದಲು ಉತ್ಪಾದಿಸುವ ಗುರಿಯನ್ನು ಸಾಧಿಸಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಿಐಎಲ್‌ನ ಕಲ್ಲಿದ್ದಲು ಉತ್ಪಾದನೆಯು 700 ಮಿಲಿಯನ್ ಟನ್ ಆಗುವ ನಿರೀಕ್ಷೆಯಿದೆ ಮತ್ತು ಇತರ ಮೂಲಗಳಿಂದ 200 ಮಿಲಿಯನ್ ಟನ್ ಹೆಚ್ಚುವರಿ ಉತ್ಪಾದನೆಯಾಗಲಿದೆ ಎಂದು ಕಲ್ಲಿದ್ದಲು ಸಚಿವಾಲಯ ಈ ಹಿಂದೆ ತಿಳಿಸಿತ್ತು.

ಎಂ ಸ್ಯಾಂಡ್ ಉತ್ಪಾದಿಸಲಿದೆ ಕೋಲ್ ಇಂಡಿಯಾ ಅಂಗಸಂಸ್ಥೆ: ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾದ ಅಂಗಸಂಸ್ಥೆ ಎನ್‌ಸಿಎಲ್ ಶೀಘ್ರದಲ್ಲೇ ನಿರ್ಮಾಣ ಕಾರ್ಯಗಳಿಗೆ ಬಳಸುವ ಎಂ-ಸ್ಯಾಂಡ್ ಮರಳಿನ ಉತ್ಪಾದನೆಯನ್ನು ಪ್ರಾರಂಭಿಸಲಿದೆ. ನಾರ್ದರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಎನ್‌ಸಿಎಲ್) ಮಧ್ಯಪ್ರದೇಶದಲ್ಲಿ ತನ್ನ ಅಮ್ಲೋಹ್ರಿ ಯೋಜನೆಗಾಗಿ ಎಂ-ಸ್ಯಾಂಡ್ ಅಥವಾ ಮ್ಯಾನುಫ್ಯಾಕ್ಚರ್ಡ್ ಸ್ಯಾಂಡ್ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎಂದು ಕಲ್ಲಿದ್ದಲು ಸಚಿವಾಲಯದ ಹೇಳಿಕೆಯಲ್ಲಿ ಮಂಗಳವಾರ ತಿಳಿಸಲಾಗಿದೆ. ಎಂ-ಸ್ಯಾಂಡ್ ಇದು ಕೃತಕವಾಗಿ ತಯಾರಿಸಿ ಮರಳಾಗಿದೆ. ಗಟ್ಟಿಯಾದ ಕಲ್ಲುಗಳನ್ನು ಸಣ್ಣ ಮರಳಿನ ಗಾತ್ರದ ಕೋನೀಯ ಆಕಾರದ ಕಣಗಳಾಗಿ ಪುಡಿಮಾಡಿ, ತೊಳೆದು ಮತ್ತು ನುಣ್ಣಗೆ ವರ್ಗೀಕರಿಸಿ ಕಟ್ಟಡ ನಿರ್ಮಾಣದಲ್ಲಿ ಮರಳಾಗಿ ಬಳಸಲಾಗುತ್ತದೆ. ಇದು ನಿರ್ಮಾಣ ಕಾರ್ಯಗಳಿಗೆ ನದಿ ಮರಳಿನ ಪರ್ಯಾಯವಾಗಿದೆ.

ಇದನ್ನೂ ಓದಿ: ಮೊದಲ ಸಲ ಕೋವಿಡ್​ ಲೆಕ್ಕ ಕೊಟ್ಟ ಚೀನಾ: 35 ದಿನದಲ್ಲಿ 60 ಸಾವಿರ ಮಂದಿ ಬಲಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.