ETV Bharat / bharat

ಪೆಟ್ರೋಲ್​, ಡೀಸೆಲ್​, ಸಿಲಿಂಡರ್​ ಆಯ್ತು ಈಗ ನೈಸರ್ಗಿಕ ಅನಿಲದ ಬೆಲೆಯಲ್ಲಿ ಮತ್ತೆ ಏರಿಕೆ! - ಸಂಕುಚಿತ ನೈಸರ್ಗಿಕ ಅನಿಲ ಬೆಲೆಯನ್ನು ದಾಖಲೆಯ ಮಟ್ಟಕ್ಕೆ ಹೆಚ್ಚಿಸಿದೆ

ಕಳೆದ ತಿಂಗಳಲ್ಲಿ ಸಿಎನ್‌ಜಿ ಬೆಲೆಯಲ್ಲಿ ಇದು ಆರನೇ ಹೆಚ್ಚಳವಾಗಿದೆ. ಒಟ್ಟಿನಲ್ಲಿ ಕೆಜಿಗೆ ಸುಮಾರು 4 ರೂ.ಗಳಷ್ಟು ದರ ಏರಿಕೆಯಾಗಿದೆ. ಜಾಗತಿಕವಾಗಿ ಅನಿಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಈ ಹೆಚ್ಚಳವಾಗಿದೆ.

ಪೆಟ್ರೋಲ್​, ಡೀಸೆಲ್​, ಸಿಲಿಂಡರ್​ ಆಯ್ತು ಈಗ ನೈಸರ್ಗಿಕ ಅನಿಲದ ಬೆಲೆಯಲ್ಲಿ ಏರಿಕೆ!

author img

By

Published : Apr 1, 2022, 9:07 PM IST

ನವದೆಹಲಿ: ಸರ್ಕಾರವು ಸಂಕುಚಿತ ನೈಸರ್ಗಿಕ ಅನಿಲ ಬೆಲೆಯನ್ನು ದಾಖಲೆಯ ಮಟ್ಟಕ್ಕೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸಿಎನ್‌ಜಿ ಬೆಲೆ ಕೆಜಿಗೆ 80 ಪೈಸೆಗಳಷ್ಟು ಏರಿಕೆಯಾಗಿದೆ. ದೆಹಲಿಯ ರಾಷ್ಟ್ರೀಯ ರಾಜಧಾನಿಯಲ್ಲಿ ಕೆಜಿಗೆ 60.01 ಇದ್ದದ್ದು ಈಗ 60.81 ಕ್ಕೆ ಹೆಚ್ಚಿಸಲಾಗಿದೆ. ಈ ಬಗ್ಗೆ Indraprastha Gas Ltd (IGL) ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಕಳೆದ ತಿಂಗಳಲ್ಲಿ ಸಿಎನ್‌ಜಿ ಬೆಲೆಯಲ್ಲಿ ಇದು ಆರನೇ ಹೆಚ್ಚಳವಾಗಿದೆ. ಒಟ್ಟಿನಲ್ಲಿ ಕೆಜಿಗೆ ಸುಮಾರು ಈವರೆಗೆ 4 ರೂ.ಗಳಷ್ಟು ದರ ಏರಿಕೆಯಾಗಿದೆ. ಜಾಗತಿಕವಾಗಿ ಅನಿಲ ಬೆಲೆ ಏರಿಕೆಯ ಹಿನ್ನೆಲೆ ಈ ಹೆಚ್ಚಳ ಕಂಡುಬಂದಿದೆ. IGL ದೇಶೀಯ ಕ್ಷೇತ್ರಗಳಿಂದ ನೈಸರ್ಗಿಕ ಅನಿಲವನ್ನು ಪಡೆಯಲಾಗುತ್ತದೆ. ಇತ್ತೀಚಿನ ತಿಂಗಳುಗಳಲ್ಲಿ ಸ್ಪಾಟ್ ಅಥವಾ ಪ್ರಸ್ತುತ ಮಾರುಕಟ್ಟೆಯಲ್ಲಿ LNG ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ.

ಗುರುವಾರ ಸರ್ಕಾರವು ಸ್ಥಳೀಯ ಕ್ಷೇತ್ರಗಳಿಂದ ಉತ್ಪಾದಿಸುವ ಅನಿಲದ ಬೆಲೆಯನ್ನು USD 2.9 ರಿಂದ ಪ್ರತಿ ಮಿಲಿಯನ್ ಬ್ರಿಟಿಷ್ ಥರ್ಮಲ್ ಘಟಕಕ್ಕೆ ದಾಖಲೆಯ USD 6.10 ಗೆ ಏರಿಸಿದೆ. ಬೆಲೆ ಏರಿಕೆ ಅಗತ್ಯವಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಗ್ರಾಮಗಳಿಗೆ ಸಹಕಾರಿ ಆಂದೋಲನ ಕೊಂಡೊಯ್ಯುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಅಮಿತ್ ಶಾ

ಈ ವರ್ಷವೊಂದರಲ್ಲೇ ಕೆಜಿಗೆ ಸುಮಾರು 8.50 ರೂ. ಏರಿಕೆಯಾಗಿದೆ. ಆದಾಗ್ಯೂ, ಕಂಪನಿಯು ಅಡುಗೆ ಮಾಡಲು ಬಳಸುವ ಈ ಅನಿಲಕ್ಕೆ ಬೆಲೆ ಏರಿಕೆಯ ಬಿಸಿ ನೀಡಿಲ್ಲ. ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ರೂ. 6.40 ಹೆಚ್ಚಳವಾಗಿದೆ ಮತ್ತು ಅಡುಗೆ ಅನಿಲ ಎಲ್‌ಪಿಜಿ ದರಗಳಲ್ಲಿ ಪ್ರತಿ ಸಿಲಿಂಡರ್‌ಗೆ ರೂ. 50 ಏರಿಕೆಯಾದ ನಂತರ ಸಿಎನ್‌ಜಿ ಬೆಲೆಗಳಲ್ಲಿ ಈ ಬದಲಾವಣೆ ಕಂಡುಬಂದಿದೆ. ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಸಿಎನ್‌ಜಿ ಪ್ರತಿ ಕೆಜಿಗೆ 63.38 ರೂ., ಗುರುಗ್ರಾಮ್‌ನಲ್ಲಿ ಕೆಜಿಗೆ 69.17 ರೂ. ಇದೆ.

ವ್ಯಾಟ್‌ನಂತಹ ಸ್ಥಳೀಯ ತೆರಿಗೆಗಳ ಸಂಭವವನ್ನು ಅವಲಂಬಿಸಿ ಬೆಲೆಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆಯಲ್ಲಿ ದಾಖಲೆಯ 137 ದಿನಗಳ ವಿರಾಮವು ಮಾರ್ಚ್ 22 ರಂದು ಕೊನೆಗೊಂಡಿದೆ. ಅದೇ ದಿನ ರಾಷ್ಟ್ರ ರಾಜಧಾನಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 949.50 ರೂ.ಗೆ ಹೆಚ್ಚಿಸಲಾಗಿದೆ. ಕೆಲವೆಡೆ ಎಲ್‌ಪಿಜಿ ದರ 1000 ರೂ. ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.