ETV Bharat / bharat

ಯುಪಿ ಜೈಲುಗಳಲ್ಲಿ ಇರುವ ಟಾಪ್ 10 ಕ್ರಿಮಿನಲ್‌ಗಳ ಪಟ್ಟಿ ತಯಾರಿಕೆಗೆ ಸೂಚನೆ.. 24 ಗಂಟೆಗಳ ನಿಗಾಕ್ಕೆ ಯೋಗಿ ನಿರ್ದೇಶನ - ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಯೋಗಿ ಖಡಕ್​ ಸೂಚನೆ

ಉತ್ತರಪ್ರದೇಶದ ಜೈಲುಗಳಲ್ಲಿ ಬಂಧಿಯಾಗಿರುವ ಮಾಫಿಯಾಗಳಿಗೆ ಕಡಿವಾಣ ಹಾಕಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಶಾಸಕ ಅಬ್ಬಾಸ್ ಅನ್ಸಾರಿ ಪ್ರಕರಣದ ನಂತರ ಸಿಎಂ ಯೋಗಿ ಟಾಪ್ 10 ಕ್ರಿಮಿನಲ್‌ಗಳ ಪಟ್ಟಿ ರೆಡಿ ಮಾಡಲು ಎಲ್ಲ ಜಿಲ್ಲಾ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

cm-yogi-summoned-list-of-top-10-criminals

author img

By

Published : Feb 20, 2023, 9:43 AM IST

ಲಖನೌ(ಉತ್ತರಪ್ರದೇಶ): ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ಮೇರೆಗೆ ರಾಜ್ಯದ 30 ಜೈಲುಗಳಲ್ಲಿ ಸಿಸಿಟಿವಿಗಳ ಸಂಖ್ಯೆ ಹೆಚ್ಚಿಸುವ ಹಾಗೂ ಈಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಾದ ಬಳಿಕ ರಾಜ್ಯದ ಜೈಲುಗಳಲ್ಲಿ ಬಂಧಿಯಾಗಿರುವ ಟಾಪ್ 10 ಕ್ರಿಮಿನಲ್‌ಗಳ ಕುರಿತು ಕೇಂದ್ರ ಕಚೇರಿಯಿಂದಲೇ 24 ಗಂಟೆಗಳ ಕಾಲ ನಿಗಾ ಕಾರ್ಯವೂ ಆರಂಭವಾಗಲಿದೆ.

ಯುಪಿಯ ಜೈಲುಗಳಲ್ಲಿ ಬಂಧಿತರಾಗಿರುವ ಭಯಾನಕ ಕ್ರಿಮಿನಲ್‌ಗಳು, ಮಾಫಿಯಾ ಮತ್ತು ಅವರ ಹಿಂಬಾಲಕರ ಮೇಲೆ ಯೋಗಿ ಆದಿತ್ಯನಾಥ ಸರ್ಕಾರ ತನ್ನ ಕುಣಿಕೆಯನ್ನು ಬಿಗಿಗೊಳಿಸಲು ಭರ್ಜರಿ ಯೋಜನೆ ರೂಪಿಸಿದೆ. ರಾಜ್ಯದ ಎಲ್ಲ ಜೈಲುಗಳಲ್ಲಿ ಬಂಧಿಯಾಗಿರುವ ಟಾಪ್ 10 ಕ್ರಿಮಿನಲ್‌ಗಳ ಪಟ್ಟಿಯನ್ನು ಕೇಂದ್ರ ಕಚೇರಿ ಮಟ್ಟದಲ್ಲಿ ರಚನೆ ಮಾಡಲು ನಿರ್ಧರಿಸಲಾಗಿದೆ. ಮತ್ತೊಂದೆಡೆ, ಯಾರಾದರೂ ಜೈಲು ಸಿಬ್ಬಂದಿಗೆ ಬೆದರಿಕೆ ಹಾಕಿದರೆ, ತಕ್ಷಣ ಆ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಯೋಗಿ ಖಡಕ್​ ಸೂಚನೆ ನೀಡಿದ್ದಾರೆ.

ಉತ್ತರ ಪ್ರದೇಶದ ಜೈಲುಗಳಲ್ಲಿ ಬಂಧಿಯಾಗಿರುವ ಮಾಫಿಯಾ ಮತ್ತು ಅವರ ಹಿಂಬಾಲಕರ ಮೇಲೆ ಸರ್ಕಾರ ಈಗ ತೀವ್ರ ನಿಗಾ ಇಡಲು ಮುಂದಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ಮೇರೆಗೆ ರಾಜ್ಯದ 30 ಜೈಲುಗಳಲ್ಲಿ ಸಿಸಿಟಿವಿಗಳ ಸಂಖ್ಯೆ ಹೆಚ್ಚಿಸುವ ಹಾಗೂ ಈಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಾದ ಬಳಿಕ ರಾಜ್ಯದ ಜೈಲುಗಳಲ್ಲಿ ಬಂಧಿಯಾಗಿರುವ ಟಾಪ್ 10 ಕ್ರಿಮಿನಲ್‌ಗಳ ಕುರಿತು ಕೇಂದ್ರ ಕಚೇರಿಯಿಂದಲೇ 24 ಗಂಟೆಗಳ ಕಾಲ ನಿಗಾ ಕಾರ್ಯ ಆರಂಭವಾಗಲಿದೆ.

ಸಿಎಂ ಸೂಚನೆ ಮೇರೆಗೆ ಪೊಲೀಸ್​​ ಅಧಿಕಾರಿಗಳು ತಕ್ಷಣದಿಂದಲೇ ನಿಗಾ ಪ್ರಯತ್ನ ಆರಂಭಿಸಿದ್ದಾರೆ. ಕಾರಾಗೃಹದ ಅಧಿಕಾರಿಗಳು ಮತ್ತು ನೌಕರರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೆ, ಒತ್ತಡ ಅಥವಾ ಬೆದರಿಕೆ ಹಾಕಿದರೆ, ತಕ್ಷಣವೇ ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಘಟನೆಯ ನಂತರ ಅಂತಹ ವಿಷಯಗಳು ಗಮನಕ್ಕೆ ಬಂದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಕರ್ತವ್ಯ ಲೋಪ ಕಂಡು ಬಂದರೆ, ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಉತ್ತರಪ್ರದೇಶ ಎಲ್ಲಾ ಜೈಲುಗಳ ಸೂಪರಿಂಟೆಂಡೆಂಟ್‌ಗಳಿಗೆ ಜೈಲುಗಳಲ್ಲಿ ಇರುವ ಪ್ರಮುಖ ಹತ್ತು ಅಪರಾಧಿಗಳ ಪಟ್ಟಿಯನ್ನು ಪ್ರಧಾನ ಕಚೇರಿಗೆ ನೀಡುವಂತೆ ಸರ್ಕಾರವು ಸೂಚನೆ ನೀಡಿದೆ ಎಂದು ಕಾರಾಗೃಹಗಳ ಪ್ರಧಾನ ಕಾರ್ಯದರ್ಶಿ ರಾಜೇಶ್ ಪ್ರತಾಪ್ ಸಿಂಗ್ ಹೇಳಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ಮೇರೆಗೆ ರಾಜ್ಯದ 30 ಜೈಲುಗಳಲ್ಲಿ ಸಿಸಿಟಿವಿಗಳ ಸಂಖ್ಯೆ ಹೆಚ್ಚಿಸುವ ಹಾಗೂ ಈಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಾದ ಬಳಿಕ ರಾಜ್ಯದ ಜೈಲುಗಳಲ್ಲಿ ಬಂಧಿಯಾಗಿರುವ ಟಾಪ್ 10 ಕ್ರಿಮಿನಲ್‌ಗಳ ಕುರಿತು ಕೇಂದ್ರ ಕಚೇರಿಯಿಂದಲೇ 24 ಗಂಟೆಗಳ ಕಾಲ ನಿಗಾ ಕಾರ್ಯ ಆರಂಭವಾಗಲಿದೆ.

ಇದನ್ನು ಓದಿ: ಸರ್ಕಾರಿ ನೌಕರರು ಯೂಟ್ಯೂಬ್ ಚಾನಲ್ ಆರಂಭಿಸುವಂತಿಲ್ಲ: ಕೇರಳ ಸರ್ಕಾರ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.