ಲಖನೌ(ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಇದರ ವಿರುದ್ಧದ ಹೋರಾಟ ಮುಂದುವರೆದಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಡೆಡ್ಲಿ ವೈರಸ್ ವಿರುದ್ಧದ ಹೋರಾಟಕ್ಕಾಗಿ ಕೈ ಜೋಡಿಸಿದ್ದು 1 ಕೋಟಿ ರೂ ದೇಣಿಗೆ ನೀಡಿದ್ದಾರೆ.
ತಮ್ಮ ಶಾಸಕರ ನಿಧಿಯಿಂದ ಕೋವಿಡ್ ಕೇರ್ ಫಂಡ್ಗೆ 1 ಕೋಟಿ ರೂ. ನೀಡಿದ್ದಾರೆ. ಕಳೆದ ವರ್ಷ ಮೊದಲನೇ ಹಂತದ ಕೋವಿಡ್ ಅಲೆ ಎದ್ದಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿ ಕೋವಿಡ್ ಕೇರ್ ಫಂಡ್ ಸ್ಥಾಪನೆ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾ ಹೋರಾಟಕ್ಕೆ ಕೈ ಜೋಡಿಸಿದ ರಾಜಸ್ಥಾನ್ ರಾಯಲ್ಸ್.. 7.5 ಕೋಟಿ ರೂ. ದೇಣಿಗೆ
ಈ ಫಂಡ್ಗೆ ರಾಜ್ಯದ ಎಲ್ಲ ಶಾಸಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ತಮ್ಮ ಕೈಲಾದ ಸಹಾಯ ಮಾಡಿದ್ದರು. ಇಲ್ಲಿ ಸಂಗ್ರಹವಾಗಿರುವ ಹಣವನ್ನ ಆರೋಗ್ಯ ಸಾಧನ ಸೇರಿದಂತೆ ಕೋವಿಡ್ ರೋಗಿಗಳ ಚಿಕಿತ್ಸೆ ಬಳಕೆ ಮಾಡಲಾಗುತ್ತಿದೆ. ಈ ಸಲವೂ ಅನೇಕ ಶಾಸಕರು ತಮ್ಮ ನಿಧಿಯಿಂದ ಹಣ ದಾನ ಮಾಡಿದ್ದಾರೆ. ಇದೀಗ ಯೋಗಿ ಆದಿತ್ಯನಾಥ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಕರ್ನಾಟಕದಲ್ಲೂ ಕೋವಿಡ್ ಅಲೆ ಜೋರಾಗಿರುವ ಕಾರಣ ಕೋವಿಡ್ ಪರಿಹಾರ ನಿಧಿಗೆ ಸಚಿವರ ಒಂದು ವರ್ಷದ ವೇತನ, ಶಾಸಕರ ಒಂದು ತಿಂಗಳ ವೇತನ ದೇಣಿಗೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.