ಹೈದರಾಬಾದ್(ತೆಲಂಗಾಣ): ಜಾರ್ಖಂಡ್ನ ರಾಂಚಿಗೆ ನಾಳೆ ಪ್ರಯಾಣ ಬೆಳೆಸಲಿರುವ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಗಲ್ವಾನ್ ವ್ಯಾಲಿ ಸಂಘರ್ಷದಲ್ಲಿ ಮೃತ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಿದ್ದಾರೆ. 2020ರ ಜೂನ್ 15ರಂದು ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಎಲ್ಲರಿಗೂ ತೆಲಂಗಾಣ ಸರ್ಕಾರ ಆರ್ಥಿಕ ನೆರವು ಘೋಷಣೆ ಮಾಡಿತ್ತು.
ಪ್ರತಿ ಕುಟುಂಬಕ್ಕೂ 10 ಲಕ್ಷ ರೂ ಪರಿಹಾರ: 2020ರ ಜೂನ್ 19ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆದ ಸರ್ವಪಕ್ಷ ಸಭೆಯಲ್ಲಿ ಕೆಸಿಆರ್ ಪರಿಹಾರ ಘೋಷಣೆ ಮಾಡಿದ್ದರು. ಸೂರಿಪೇಟ್ನ ಜಿಲ್ಲೆಯ ಕರ್ನಲ್ ಸಂತೋಷ್ ಬಾಬು ಅವರಿಗೆ 5 ಕೋಟಿ ರೂ. ಅವರ ಪತ್ನಿಗೆ ಸರ್ಕಾರಿ ನೌಕರಿ ಸೇರಿದಂತೆ ಉಳಿದ ಸೈನಿಕರ ಕುಟುಂಬಗಳಿಗೆ 10 ಲಕ್ಷ ರೂ. ಘೋಷಣೆ ಮಾಡಿದ್ದರು. ರಾಜ್ಯ ಸರ್ಕಾರ ಈಗಾಗಲೇ ಹಣ ಮಂಜೂರು ಮಾಡಿದ್ದು, ಅವರ ಕುಟುಂಬದ ಸದಸ್ಯರನ್ನು ನೇರವಾಗಿ ಭೇಟಿ ಮಾಡಿ ಪರಿಹಾರ ಚೆಕ್ ವಿತರಣೆ ಮಾಡಲಿದ್ದಾರೆ.
ಇದನ್ನೂ ಓದಿ: ಬಡ ರೈತರಿಗೆ ಭರ್ಜರಿ ಗನ್, ಇದರ ಶಬ್ದಕ್ಕೆ ಆನೆಗಳೇ ಪೇರಿಕೀಳುತ್ತವೆ: ನೀವೂ ತಯಾರಿಸಿಕೊಳ್ಳಿ
ಮೃತ ಯೋಧರ ಕುಟುಂಬಸ್ಥರ ಭೇಟಿ: ಪರಿಹಾರ ಚೆಕ್ ನೀಡಲು ತೆರಳುತ್ತಿರುವ ಮುಖ್ಯಮಂತ್ರಿ ಕೆಸಿಆರ್ ಮೃತ ಯೋಧರ ಎಲ್ಲ ಕುಟುಂಬದ ಸದಸ್ಯನ್ನ ಭೇಟಿ ಮಾಡಲಿದ್ದು, ಅವರೊಂದಿಗೆ ಕೆಲಹೊತ್ತು ಸಮಾಲೋಚನೆ ನಡೆಸಲಿದ್ದಾರೆ.