ಜಾರ್ಖಂಡ್: ದೇಶಕ್ಕೆ ಕೀರ್ತಿ ತಂದುಕೊಡಲು ಟೋಕಿಯೋ ಒಲಿಂಪಿಕ್ಗೆ ತೆರಳಲಿರುವ ಎಲ್ಲ ಕ್ರೀಡಾಪಟುಗಳಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಸಿಎಂ ಹೇಮಂತ್ ಸೊರೆನ್ ಅವರು ನಿನ್ನೆ ಬಿಲ್ಲುಗಾರ್ತಿ ದೀಪಿಕಾ ಕುಮಾರಿ, ಕೊಮೊಲಿಕಾ ಬ್ಯಾರಿ, ಅಂಕಿತಾ ಭಗತ್ ಮತ್ತು ಕೋಚ್ ಪೂರ್ಣಿಮಾ ಮಹತೋ ಮತ್ತು ಮಹಿಳಾ ಹಾಕಿ ತಂಡದ ಸದಸ್ಯೆಯರಾದ ಜಾರ್ಖಂಡ್ನ ಸಲೀಮಾ ಟೆಟೆ ಮತ್ತು ನಿಕ್ಕಿ ಪ್ರಧಾನ್ ಅವರೊಂದಿಗೆ ಸಂವಾದ ನಡೆಸಿ ಕ್ರೀಡಾಪಟುಗಳನ್ನು ಪ್ರೇರೇಪಿಸಿದರು. ಜೊತೆಗೆ ಮಹಿಳಾ ಹಾಕಿ ಆಟಗಾರರಿಗೆ ಶುಭ ಹಾರೈಸಿದರು.
ಸಂವಾದದ ವೇಳೆ ಮುಖ್ಯಮಂತ್ರಿಗಳು ಚಿನ್ನದ ಪದಕ ಗೆಲ್ಲುವ ಆಟಗಾರರಿಗೆ 2 ಕೋಟಿ ರೂ., ಬೆಳ್ಳಿ ಪದಕ ಗೆಲ್ಲುವ ಆಟಗಾರರಿಗೆ 1 ಕೋಟಿ ಮತ್ತು ಕಂಚಿನ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ 75 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.