ETV Bharat / bharat

ಸಿಎಂ ಜಿಲ್ಲಾ ಪ್ರವಾಸ: ಬೆಳಗಾವಿ, ಧಾರವಾಡದಲ್ಲಿ ಕೋವಿಡ್ ಸಭೆ

ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಲಾಕ್​ಡೌನ್ ನಂತರ ತುಮಕೂರಿಗೆ ಮೊದಲ ಪ್ರವಾಸ ಕೈಗೊಂಡಿದ್ದ ಸಿಎಂ ಎರಡನೇ ಪ್ರವಾಸ ಉತ್ತರ ಕರ್ನಾಟಕಕ್ಕೆ ಕೈಗೊಂಡಿದ್ದಾರೆ.

ಸಿಎಂ ಜಿಲ್ಲಾ ಪ್ರವಾಸ
ಸಿಎಂ ಜಿಲ್ಲಾ ಪ್ರವಾಸ
author img

By

Published : Jun 2, 2021, 11:46 AM IST

ಬೆಂಗಳೂರು: ಇಷ್ಟು ದಿನ ವಿಡಿಯೋ ಸಂವಾದದ ಮೂಲಕ‌ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ಖುದ್ದಾಗಿ ಕೋವಿಡ್ ನಿಯಂತ್ರಣ ಕುರಿತು ಪ್ರಗತಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ. ತುಮಕೂರು ಭೇಟಿ ಬೆನ್ನಲ್ಲೇ ಬೆಳಗಾವಿ, ಧಾರವಾಡ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದಾರೆ.

ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಕೋವಿಡ್ ಕಾರಣಕ್ಕೆ ಪ್ರವಾಸ ರದ್ದುಗೊಳಿಸಿ ಗೃಹ ಕಚೇರಿ ಮತ್ತು ನಿವಾಸದಿಂದಲೇ ವಿಡಿಯೋ ಸಂವಾದದ ಮೂಲಕ ಸಭೆ ನಡೆಸುತ್ತಿದ್ದ ಸಿಎಂ ಇದೀಗ ಜಿಲ್ಲೆಗಳತ್ತ ಪ್ರವಾಸ ಆರಂಭಿಸಿದ್ದಾರೆ. ಲಾಕ್​ಡೌನ್ ನಂತರ ತುಮಕೂರಿಗೆ ಮೊದಲ ಪ್ರವಾಸ ಕೈಗೊಂಡಿದ್ದ ಸಿಎಂ ಎರಡನೇ ಪ್ರವಾಸ ಉತ್ತರ ಕರ್ನಾಟಕಕ್ಕೆ ಕೈಗೊಂಡಿದ್ದಾರೆ.

ಜೂನ್ 4ರಂದು ಬೆಳಗ್ಗೆ 9.30ಕ್ಕೆ ಹೆಚ್‌ಎಎಲ್​ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಲಿರುವ ಸಿಎಂ 10.40ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದ್ದಾರೆ. 11 ಗಂಟೆಗೆ ಸುವರ್ಣ ವಿಧಾನಸೌಧಲ್ಲಿ ಬೆಳಗಾವಿ ಜಿಲ್ಲಾ ಕೋವಿಡ್-19 ನಿಯಂತ್ರಣ ಹಾಗೂ ಇತರ ಅಭಿವೃದ್ಧಿ ವಿಷಯಗಳ ಕುರಿತು ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಮಧ್ಯಾಹ್ನ 1.30ಕ್ಕೆ ಸಾಂಬ್ರಾ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಿ 2 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸವಾಯ್ ಗಂಧರ್ವ ಕಲಾಮಂದಿರದಲ್ಲಿ ಧಾರವಾಡ ಜಿಲ್ಲಾ ಕೋವಿಡ್ ನಿಯಂತ್ರಣ ಹಾಗೂ ಇತರ ಅಭಿವೃದ್ಧಿ ವಿಷಯಗಳ ಕುರಿತು ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಸಂಜೆ 6 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹೊರಡಲಿರುವ ಸಿಎಂ 7 ಗಂಟೆಗೆ ಹೆಚ್​ಎಎಲ್ ನಿಲ್ದಾಣಕ್ಕೆ ವಾಪಸಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.