ತ್ರಿಪುರ / ನವದೆಹಲಿ: 'ಬಿಪ್ಲಾಬ್ ಹಟಾವೊ, ಬಿಜೆಪಿ ಬಚಾವೋ' ಘೋಷಣೆ ಕುರಿತು ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ್ದ ಅವರು, ನಾನು ಡಿಸೆಂಬರ್ 13 ರಂದು ವಿವೇಕಾನಂದ ಮೈದಾನಕ್ಕೆ ತೆರಳಲಿದ್ದೇನೆ. ತ್ರಿಪುರದ ಜನರನ್ನು ಅಲ್ಲಿಗೆ ಬರಲು ಹೇಳಿ, ನಾನು ಸಿಎಂ ಆಗಿ ಉಳಿಯಬೇಕೇ ಎಂದು ಅವರನ್ನು ಕೇಳುತ್ತೇನೆ. ಒಂದು ವೇಳೆ ಜನರು ನನ್ನನ್ನು ಬೆಂಬಲಿಸದಿದ್ದರೆ, ಪಕ್ಷದ ಹೈಕಮಾಂಡ್ಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಪುಲ್ವಾಮಾದಲ್ಲಿ ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳಿಂದ ಎನ್ಕೌಂಟರ್
ಈ ಕುರಿತಂತೆ ಮಾತನಾಡಿರುವ ಭಾರತೀಯ ಜನತಾ ಪಕ್ಷದ ತ್ರಿಪುರ ಉಸ್ತುವಾರಿ ವಿನೋದ್ ಸೋಂಕರ್, ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಮತ್ತು ನಾನು ಇಬ್ಬರೂ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡಿದ್ದೇವೆ ಎಂದು ತಿಳಿಸಿದರು. ಸಿಎಂ ಆದವರು ತ್ರಿಪುರದ ಜನರಿಗೆ ಸೇವೆ ಸಲ್ಲಿಸಬೇಕು, ಯಾವುದೇ ಸಮಸ್ಯೆಗಳಿದ್ದರೆ ಪಕ್ಷವು ಅದನ್ನು ಪರಿಶೀಲಿಸುತ್ತದೆ ಎಂದು ಹೇಳಿದರು.