ಅಗರ್ತಲಾ (ತ್ರಿಪುರ): ರಾಜ್ಯದಲ್ಲಿ ‘ದೆವ್ವಗಳು ಇನ್ನೂ ಅಸ್ತಿತ್ವದಲ್ಲಿವೆ’ ಎಂದು ಮುಖ್ಯಮಂತ್ರಿ ಬಿಪ್ಲಾಬ್ ಕುಮಾರ್ ಅವರು ಪಕ್ಷದ ಕಾರ್ಯಕರ್ತರನ್ನು ಎಚ್ಚರಿಸಿದ್ದಾರೆ.
"ಪಕ್ಷದ ಕಾರ್ಯಕರ್ತರು, ಪ್ರಮುಖ್ ಅಥವಾ ರಾಜ್ಯ ಮಟ್ಟದ ನಾಯಕರೇ ಆಗಿರಲಿ, ಸಿಪಿಐ-ಎಂ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ ಎಂದು ಭಾವಿಸಬಾರದು. ದೆವ್ವಗಳು ಎಂದಿಗೂ ಸಾಯುವುದಿಲ್ಲ." ಎಂದು ಎಚ್ಚರಿಸಿದರು.
ಹಿಂದಿನ ಸರ್ಕಾರವು ಎಡಿಸಿ (ಅಟೋನಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್) ಗೆ ಸರಿಯಾದ ಬಜೆಟ್ ಘೋಷಣೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಡಪಂಥೀಯರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದರು. ಎಡಪಂಥೀಯರು ರಾಜ್ಯದಲ್ಲಿ ಮತ್ತು ಟಿಟಿಎಎಡಿಸಿಯಲ್ಲಿ ದೀರ್ಘಕಾಲ ಅಧಿಕಾರದಲ್ಲಿದ್ದರು. ಆದರೆ ಎಡಿಸಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಯಾವುದೇ ಅಭಿವೃದ್ಧಿಯಾಗುವಂತಹ ಯೋಜನೆಗಳನ್ನು ನೀಡಿಲ್ಲ ಎಂದು ಅವರು ಹೇಳಿದರು.
"ಎಡಿಸಿ ಪ್ರದೇಶಗಳ ಸರ್ವತೋಮುಖ ಬೆಳವಣಿಗೆಗೆ ನಮ್ಮ ಸರ್ಕಾರ ಹೆಚ್ಚುವರಿ ಬಜೆಟ್ ತಂದಿತು" ಎಂದು ದೇಲೈ ಜಿಲ್ಲೆಯ ಮನುಘಾಟ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಹೇಳಿದರು.
ಇದನ್ನು ಓದಿ: ಕಾರಿನ ಮೇಲೆ ಟಿಪ್ಪರ್ ಮಗುಚಿ ಇಬ್ಬರ ದಾರುಣ ಸಾವು
"ಎಡಿಸಿಯಲ್ಲಿ ರಸ್ತೆಗಳ ನಿರ್ಮಾಣವು 2006 ರಿಂದ ದೀರ್ಘಕಾಲದವರೆಗೆ ಸ್ಥಗಿತಗೊಂಡಿತ್ತು. ಕಾರ್ಯಕ್ಕಾಗಿ ವಹಿಸಿಕೊಟ್ಟ ಏಜೆನ್ಸಿ ಹಣವನ್ನು ತೆಗೆದುಕೊಂಡ ನಂತರ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಆದರೆ, ಈ ನಿಧಿಯನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಸತ್ಯ" ಎಂದು ಹೇಳಿದರು.
"2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿಪುರವನ್ನು ಕಮ್ಯುನಿಸ್ಟರ ದುಷ್ಕೃತ್ಯದಿಂದ ಮುಕ್ತಗೊಳಿಸಿದರು" ಎಂದರು.