ETV Bharat / bharat

ರಾಜಸ್ಥಾನ ಸಿಎಂ ಗೆಹ್ಲೋಟ್​ಗೂ ವಕ್ಕರಿಸಿದ ಕೊರೊನಾ ಸೋಂಕು - ರಾಜಸ್ಥಾನ ಸಿಎಂ ಗೆಹ್ಲೋಟ್​ಗೂ ವಕ್ಕರಿಸಿದ ಕೊರೊನಾ

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಅವರು ಐಸೋಲೇಷನ್​ಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.

Cm ashok gehlot corona positive
Cm ashok gehlot corona positive
author img

By

Published : Jan 6, 2022, 6:53 PM IST

ಜೈಪುರ್(ರಾಜಸ್ಥಾನ): ಕೊರೊನಾ ಮಹಾಮಾರಿ ಆರ್ಭಟ ದೇಶದಲ್ಲಿ ಜೋರಾಗಿದ್ದು, ಇದೀಗ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​​ ಅವರಿಗೂ ಕೋವಿಡ್​​ ಸೋಂಕು ದೃಢಪಟ್ಟಿದೆ.

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ರಾಜಸ್ಥಾನ ಸಿಎಂ, ಇಂದು ಸಂಜೆ ಕೋವಿಡ್​ ಪರೀಕ್ಷೆಗೊಳಪಟ್ಟಿದ್ದು, ವರದಿ ಪಾಸಿಟಿವ್​ ಬಂದಿದೆ. ದೇಹದಲ್ಲಿ ಸೌಮ್ಯ ಪ್ರಮಾಣದ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಪ್ರತ್ಯೇಕಗೊಂಡು, ಕೋವಿಡ್ ಪರೀಕ್ಷೆಗೊಳಪಡುವಂತೆ ವಿನಂತಿ ಮಾಡಿದ್ದಾರೆ.

  • आज शाम मैंने अपना कोविड टेस्ट करवाया जो पॉजिटिव आया है। मेरे बेहद हल्के लक्षण हैं एवं कोई अन्य परेशानी नहीं है। आज मेरे संपर्क में आए सभी लोगों से निवेदन है कि वे स्वयं को आइसोलेट कर लें एवं अपना कोविड टेस्ट अवश्य करवाएं।

    — Ashok Gehlot (@ashokgehlot51) January 6, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಲಾಕ್​ಡೌನ್​ ಇಲ್ಲ, ಕೋವಿಡ್​ ನಿಯಮ ಉಲ್ಲಂಘಿಸುವವರಿಗೆ ಮಧ್ಯಪ್ರದೇಶದಲ್ಲಿ 'Open Jails' ಶಿಕ್ಷೆ

ರಾಜಸ್ಥಾನದಲ್ಲಿ ಸದ್ಯ ಒಮಿಕ್ರಾನ್ ಹಾಗೂ ಕೊರೊನಾ ಪ್ರಕರಣಗಳ ಆರ್ಭಟ ಹೆಚ್ಚಾಗಿದ್ದು, ನಿನ್ನೆ ಒಂದೇ ದಿನ 62 ಹೊಸ ಒಮಿಕ್ರಾನ್​ ಕೇಸ್​ಗಳು ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ ಇದೀಗ 236 ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ 1,883 ಹೊಸ ಕೋವಿಡ್​ ಪ್ರಕರಣ ಕಾಣಿಸಿಕೊಂಡಿವೆ. ಇದೇ ಕಾರಣದಿಂದಾಗಿ ರಾಜಸ್ಥಾನದಲ್ಲಿ ಈಗಾಗಲೇ ನೈಟ್​ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಶಾಲಾ-ಕಾಲೇಜ್​ ಬಂದ್​ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.