ನವದೆಹಲಿ: ದೇಶಾದ್ಯಂತ ಕೋವಿಡ್ ಕೇಸ್ಗಳ ಸಂಖ್ಯೆಯಲ್ಲಿ ಇದೀಗ ಸ್ವಲ್ಪ ಮಟ್ಟದ ಇಳಿಕೆ ಕಂಡು ಬರುತ್ತಿದ್ದು, ಅದಕ್ಕೆ ಲಾಕ್ಡೌನ್ ಹೇರಿಕೆ ಮಾಡಿರುವುದೇ ಮುಖ್ಯ ಕಾರಣ ಎಂಬ ಮಾತು ಸಹ ಕೇಳಿ ಬರಲು ಶುರುವಾಗಿದೆ.
ಕಳೆದ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಪ್ರತಿದಿನ 20 ಸಾವಿರಕ್ಕೂ ಅಧಿಕ ಸೋಂಕಿತ ಪ್ರಕರಣ ದಾಖಲಾಗುತ್ತಿದ್ದವು. ಆದರೆ ಲಾಕ್ಡೌನ್ ನಂತರ ಇದರಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 8,500 ಕೋವಿಡ್ ಪ್ರಕರಣ ಕಾಣಿಸಿಕೊಂಡಿವೆ.
ಇದನ್ನೂ ಓದಿ: ಕೋವಿಡ್ ಹೋರಾಟದಲ್ಲಿ 'ಹನುಮ ಪಡೆ'..100 ಮಂದಿ ತಂಡ ರಚಿಸಿ ನೆರವು
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಕೇಜ್ರಿವಾಲ್, ದೆಹಲಿಯಲ್ಲಿ ಶೇ. 36ರಿಂದ ಕೋವಿಡ್ ಪ್ರಕರಣ ಇದೀಗ ಶೇ. 12ಕ್ಕೆ ಇಳಿಕೆಯಾಗಿದ್ದು, ಕಳೆದ 10 ದಿನಗಳಲ್ಲಿ 3,000 ಸಾವಿರ ಬೆಡ್ ಖಾಲಿಯಾಗಿವೆ ಎಂದಿದ್ದಾರೆ. ಕಠಿಣ ಲಾಕ್ಡೌನ್ ಜಾರಿಗೊಳಿಸಿರುವುದೇ ಇಳಿಕೆ ಕಂಡು ಬರಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲೂ ಕೊರೊನಾ ಸೋಂಕಿತ ಪ್ರಕರಣ ಕಡಿಮೆಯಾಗಿದ್ದು, ಇದಕ್ಕೆ ಕಠಿಣ ಲಾಕ್ಡೌನ್ ಕ್ರಮ ಜಾರಿಗೊಳಿಸಿರುವುದೇ ಮುಖ್ಯ ಕಾರಣ ಎಂಬ ಮಾತು ಸಹ ಕೇಳಿ ಬಂದಿವೆ.