ETV Bharat / bharat

ಸಿಎಂ ಯೋಗಿ ಟ್ವಿಟರ್ ಖಾತೆಗೆ 2.5 ಕೋಟಿ ಫಾಲೋವರ್ಸ್​: ಈ ಸಾಧನೆ ಮಾಡಿದ ಮೊದಲ ಸಿಎಂ! - ಯೋಗಿ ಆದಿತ್ಯನಾಥ್ ಅವರ ಫಾಲೋವರ್​ಗಳ ಸಂಖ್ಯೆ

ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಟ್ವಿಟರ್​ನಲ್ಲಿ ಯೋಗಿ ಆದಿತ್ಯನಾಥ್ ಅವರ ಫಾಲೋವರ್​ಗಳ ಸಂಖ್ಯೆ 25 ಮಿಲಿಯನ್ ದಾಟಿದ್ದು, ಹೊಸ ದಾಖಲೆ ಸೃಷ್ಟಿಯಾಗಿದೆ.​

ಸಿಎಂ ಯೋಗಿ ಟ್ವಿಟರ್ ಖಾತೆಗೆ 2.5 ಕೋಟಿ ಫಾಲೋವರ್ಸ್​: ಈ ಸಾಧನೆ ಮಾಡಿದ ಮೊದಲ ಸಿಎಂ
Yogi's Twitter following tops 25 mn mark
author img

By

Published : Jun 14, 2023, 1:42 PM IST

ಲಖನೌ (ಉತ್ತರ ಪ್ರದೇಶ) : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನಪ್ರಿಯತೆಯ ಹೊಸ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ 25 ಮಿಲಿಯನ್ (ಎರಡೂವರೆ ಕೋಟಿ) ಫಾಲೋವರ್ಸ್ ಮಾರ್ಕ್ ಅನ್ನು ದಾಟಿದೆ. ಯೋಗಿ ಆದಿತ್ಯನಾಥ್ ಅವರ ಜನಪ್ರಿಯತೆಯು ಯಾವ ಮಟ್ಟಕ್ಕೇರಿದೆ ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಸಾಮಾಜಿಕ ಮಾಧ್ಯಮದಲ್ಲಿರುವ ಹಲವಾರು ನಾಯಕರು ಮತ್ತು ಸೆಲೆಬ್ರಿಟಿಗಳು ಕೂಡ ಇನ್ನೂ ಇಷ್ಟೊಂದು ದೊಡ್ಡ ಪ್ರಮಾಣದ ಫಾಲೋವರ್ ಸಂಖ್ಯೆಯನ್ನು ತಲುಪಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.

ಯೋಗಿ ಆದಿತ್ಯನಾಥ್ ಟ್ವಿಟರ್‌ನಲ್ಲಿ ಈ ಸಂಖ್ಯೆಯನ್ನು ದಾಟಿದ ಮೊದಲ ಮುಖ್ಯಮಂತ್ರಿ ಕೂಡ ಹೌದು. ಎಂಟು ವರ್ಷಗಳ ಅವಧಿಯಲ್ಲಿ ಯೋಗಿ ಈ ಸಾಧನೆ ಮಾಡಿದ್ದಾರೆ. ಅವರು ಸೆಪ್ಟೆಂಬರ್ 2015 ರಲ್ಲಿ ಟ್ವಿಟರ್‌ನಲ್ಲಿ ತಮ್ಮ ಅಧಿಕೃತ ಹ್ಯಾಂಡಲ್ ಅನ್ನು ಪ್ರಾರಂಭಿಸಿದ್ದರು. 2017 ರಲ್ಲಿ ಉತ್ತರ ಪ್ರದೇಶದ ಅಧಿಕಾರವನ್ನು ವಹಿಸಿಕೊಂಡ ನಂತರ, ಅವರು ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ತಂದ ಹಿನ್ನೆಲೆಯಲ್ಲಿ ಅವರ ಜನಪ್ರಿಯತೆಯಲ್ಲಿ ಅನೇಕ ಪಟ್ಟು ಹೆಚ್ಚಳವಾಗಿದೆ.

ಟ್ವಿಟರ್‌ನಲ್ಲಿ 25 ಮಿಲಿಯನ್ ಫಾಲೋವರ್​ಗಳೊಂದಿಗೆ ಯೋಗಿ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ಹಿರಿಯ ನಾಯಕರನ್ನು ಒಳಗೊಂಡಿರುವ ಗುಂಪಿನ ಭಾಗವಾಗಿದ್ದಾರೆ. ಮುಖ್ಯಮಂತ್ರಿ ಆದಿತ್ಯನಾಥ್ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು Koo ಅಪ್ಲಿಕೇಶನ್‌ನಲ್ಲಿ ಹೆಚ್ಚಿನ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯ ಮುಖ್ಯಮಂತ್ರಿ ಮತ್ತು ರಾಜಕಾರಣಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಪರೀಕ್ಷೆಗಳಲ್ಲಿ ಕಠಿಣ ಪ್ರಶ್ನೆ ಬೇಡ ಎಂದ ಸಿಎಂ ಯೋಗಿ: ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ಪರೀಕ್ಷೆಗಳಲ್ಲಿ ಎಂಥ ಕಠಿಣ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂದರೆ ಅದರ ಉತ್ತರಗಳು ಪರೀಕ್ಷಕರಿಗೇ ತಿಳಿದಿರಲ್ಲ. ಇಂತಹ ಕಠಿಣ ಪ್ರಶ್ನೆಗಳನ್ನು ಕೇಳುವುದರಿಂದ ಏನು ಪ್ರಯೋಜನ? ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬಾರದು. ಪರೀಕ್ಷೆಯಲ್ಲಿನ ಪ್ರಶ್ನೆಗಳು ಸಾಮಾನ್ಯ ಸ್ವರೂಪದಲ್ಲಿರಬೇಕು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ.

ಬುಧವಾರ ಲಕ್ನೋದ ಲೋಕಭವನದಲ್ಲಿ ಆಯೋಜಿಸಿದ್ದ ಪ್ರತಿಭಾನ್ವಿತರ ಸನ್ಮಾನ ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿದರು. ಆರು ವರ್ಷಗಳ ಹಿಂದೆ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಗಳು ನಕಲು ಮಾಡಲು ಕುಖ್ಯಾತವಾಗಿದ್ದವು. ಶಾಲೆಗಳಲ್ಲಿ ಶಿಕ್ಷಣ ಕಡಿಮೆ ಇತ್ತು. ಪರೀಕ್ಷೆಗಳು ದೀರ್ಘಾವಧಿಯವರೆಗೆ ನಡೆಯುತ್ತಿದ್ದವು. ಕೆಲವೊಮ್ಮೆ ಮೂರು ತಿಂಗಳ ಕಾಲ ನಡೆಯುತ್ತಿದ್ದವು ಎಂದು ಅವರು ಹೇಳಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ನಕಲು ಮಾಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪರೀಕ್ಷಾ ಪ್ರಕ್ರಿಯೆಗೆ ನಾವು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವಂತೆ ನಾನು ಮೊದಲೇ ಇಲಾಖೆಗೆ ತಿಳಿಸಿದ್ದೆ. ಅದರಂತೆ ಪ್ರೌಢ ಶಿಕ್ಷಣ ಮಂಡಳಿಯು ಈ ಗುರಿಯನ್ನು ಸಾಧಿಸಿದೆ. ಈಗ 15 ದಿನಗಳಲ್ಲಿ ಪರೀಕ್ಷೆಗಳು ಮುಗಿದು, 14 ದಿನಗಳೊಳಗೆ ಫಲಿತಾಂಶ ಪ್ರಕಟವಾಗುತ್ತಿದೆ ಎಂದರು.

ಇದನ್ನೂ ಓದಿ : AI technology:ಎಲ್ಲ 800 ಕೋಟಿ ಜನ AI ಬಳಸಬೇಕೆಂಬುದು ನನ್ನಾಸೆ: ಸತ್ಯಾ ನಾಡೆಲ್ಲಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.