ಲೋನಕ ಸರೋವರ (ಸಿಕ್ಕಿಂ): ಸಿಕ್ಕಿಂನಲ್ಲಿ ಮೇಘಸ್ಪೋಟದಿಂದ ಪ್ರವಾಹ ಉಂಟಾಗಿದೆ. ಉತ್ತರ ಸಿಕ್ಕಿಂನ ಲೋನಕ ಸರೋವರದ ಬಳಿ ಹಠಾತ್ ಮೇಘಸ್ಪೋಟ ಸಂಭವಿಸಿದ ಪರಿಣಾಮ ಇಲ್ಲಿಯ ತೀಸ್ತಾ ನದಿಯ ನೀರಿನ ಮಟ್ಟ ದಿಢೀರ್ ಏರಿಕೆ ಕಂಡಿದೆ ಮತ್ತು ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ದಿಢೀರ್ ಮೇಘಸ್ಫೋಟಕ್ಕೆ ಮೂವರು ಬಲಿಯಾಗಿದ್ದಾರೆ. ಏಕಾಏಕಿ ನೀರು ಹೆಚ್ಚಾದ್ದರಿಂದ ನದಿ ಪ್ರಾಂತ್ಯದಲ್ಲಿ ನಿರ್ಮಿಸಲಾಗಿದ್ದ ಸೇನಾ ನೆಲೆಗಳಿಗೂ ನೀರು ನುಗ್ಗಿವೆ. ಪ್ರವಾಹದಲ್ಲಿ 23 ಯೋಧರು ನಾಪತ್ತೆಯಾಗಿದ್ದಾರೆ. ಕೆಲ ಸೇನಾ ವಾಹನಗಳು ಕೊಚ್ಚಿಹೋಗಿವೆ ಎಂದು ವರದಿಯಾಗಿದೆ. ಆದರೆ ಇದರಲ್ಲಿ 7 ಯೋಧರ ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
-
NDRF rescued 7 persons from Sikkim's Singtam where a cloudburst caused a flood-like situation. NDRF's one team is deployed at Gangtok and two teams at adjoining areas of Sikkim in West Bengal. https://t.co/3EGDXDH7J0 pic.twitter.com/0Ao1QLgA4T
— ANI (@ANI) October 4, 2023 " class="align-text-top noRightClick twitterSection" data="
">NDRF rescued 7 persons from Sikkim's Singtam where a cloudburst caused a flood-like situation. NDRF's one team is deployed at Gangtok and two teams at adjoining areas of Sikkim in West Bengal. https://t.co/3EGDXDH7J0 pic.twitter.com/0Ao1QLgA4T
— ANI (@ANI) October 4, 2023NDRF rescued 7 persons from Sikkim's Singtam where a cloudburst caused a flood-like situation. NDRF's one team is deployed at Gangtok and two teams at adjoining areas of Sikkim in West Bengal. https://t.co/3EGDXDH7J0 pic.twitter.com/0Ao1QLgA4T
— ANI (@ANI) October 4, 2023
ಪ್ರವಾಹದ ಬಳಿಕ ಚುಂಗ್‌ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದರಿಂದ ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆ ಕಂಡಿದೆ. ಸದ್ಯ ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು ನಾಪತ್ತೆಯಾದ ಯೋಧರಿಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ. ತಗ್ಗು ಪ್ರದೇಶಗಳಲ್ಲಿನ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಲ್ಲಿನ ಆಡಳಿತ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ ಮೆಲ್ಲಿಯ ರಾಷ್ಟ್ರೀಯ ಹೆದ್ದಾರಿ 10 ಕೂಡ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
-
#WATCH | Sikkim: A flood-like situation arose in Singtam after a cloud burst.
— ANI (@ANI) October 4, 2023 " class="align-text-top noRightClick twitterSection" data="
(Video source: Central Water Commission) pic.twitter.com/00xJ0QX3ye
">#WATCH | Sikkim: A flood-like situation arose in Singtam after a cloud burst.
— ANI (@ANI) October 4, 2023
(Video source: Central Water Commission) pic.twitter.com/00xJ0QX3ye#WATCH | Sikkim: A flood-like situation arose in Singtam after a cloud burst.
— ANI (@ANI) October 4, 2023
(Video source: Central Water Commission) pic.twitter.com/00xJ0QX3ye
ಘಟನೆ ಬಗ್ಗೆ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಮಾತನಾಡಿದ್ದು, ಮೇಘಸ್ಪೋಟ ಸಂಭವಿಸಿದ್ದರಿಂದ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ನದಿ ಪ್ರಾಂತ್ಯದಲ್ಲಿದ್ದ ನಿರ್ಮಿಸಲಾಗಿದ್ದ ಸೇನಾ ನೆಲೆಗಳಿಗೆ ನೀರು ನುಗ್ಗಿವೆ. ಘಟನೆಯಲ್ಲಿ 23 ಯೋಧರು ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ.
ಸಿಕ್ಕಿಂ ಸಿಎಂ ಪ್ರೇಮ್ ಸಿಂಗ್ ತಮಾಂಗ್ ಪ್ರವಾಹ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಏಕಾಏಕಿ ಪ್ರವಾಹದಿಂದ ನದಿ ಪಾತ್ರದಲ್ಲಿರುವ ಮನೆಗಳಗೆ ಹಾನಿ ಉಂಟಾಗಿದೆ. ಸಿಂಗ್ಟಮ್ನನಲ್ಲಿ ಹಲವಾರು ಜನ ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ತಗ್ಗು ಪ್ರದೇಶದ ಜನರಿಗೂ ಸುರಕ್ಷ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದೇವೆ. ಅಧಿಕಾರಿಗಳಿಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಮೇಘಸ್ಪೋಟದಿಂದ ಉಂಟಾದ ಪ್ರವಾಹ ಗಜೋಲ್ಡೋಬಾ, ಡೊಮೊಹಾನಿ, ಮೆಖ್ಲಿಗಂಜ್ ಮತ್ತು ಘಿಶ್‌ನಂತಹ ತಗ್ಗು ಪ್ರದೇಶಗಳು ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲಿಯ ಜನರಿಗೆ ಎಚ್ಚರವಹಿಸುವಂತೆ ಹವಮಾನ ಇಲಾಖೆ ತಿಳಿಸಿದೆ. ಉತ್ತರ ಸಿಕ್ಕಿಂನ ಚುಂಗ್ತಾಂಗ್ ಪಟ್ಟಣ ಸೇರಿ ಕೆಲ ಊರುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನೀರನಲ್ಲಿ ಕೊಚ್ಚಿಹೋಗಿದೆ. ಇದರಿಂದ ಸಂಚಾರ ಸ್ಥಗಿತಗೊಂಡಿದೆ. ತೀಸ್ತಾ ನದಿಯ ದಡದಲ್ಲಿ ವಾಸಿಸುವ ಜನರನ್ನೂ ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಮುಲ್ಲಾಪುರ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ತಪ್ಪಿದ ಭಾರಿ ಅನಾಹುತ