ಕುಲು(ಹಿಮಾಚಲ ಪ್ರದೇಶ): ಇಲ್ಲಿನ ಮಣಿಕರ್ನ್ ಪ್ರದೇಶದಲ್ಲಿ ಮೇಘ ಸ್ಫೋಟ ಉಂಟಾಗಿದ್ದು, 6 ಜನರು ನಾಪತ್ತೆಯಾಗಿದ್ದಾರೆ. ಹಲವು ಮನೆಗಳು ಪ್ರವಾಹಕ್ಕೀಡಾಗಿವೆ. 6ಕ್ಕೂ ಅಧಿಕ ಹೇಸರಗತ್ತೆಗಳು, ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಣಿಕರ್ನ್ ಕಣಿವೆಯಲ್ಲಿ ಮೇಘಸ್ಫೋಟವಾಗಿದೆ. ನೀರು ರಭಸವಾಗಿ ನುಗ್ಗಿ ಮನೆಗಳು, ಕಚೇರಿಗಳನ್ನು ಆಪೋಷನ ಪಡೆದಿದೆ. ಭೋಜ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೂಡ ಹಾನಿಯಾಗಿದೆ. ಮಾಹಿತಿ ಪಡೆದ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿದೆ.
ಮೇಘಸ್ಫೋಟದಿಂದಾಗಿ ಭಾರಿ ಪ್ರವಾಹ ಉಂಟಾಗಿದೆ. ಜನರು ಎಚ್ಚರಿಕೆ ವಹಿಸಬೇಕು. ನದಿ, ತೊರೆಗಳ ದಡಕ್ಕೆ ಹೋಗುವುದನ್ನು ತಪ್ಪಿಸುವಂತೆ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರವಾಹ, ಭೂಕುಸಿತ ಮತ್ತು ಮೇಘಸ್ಫೋಟಗಳು ವರದಿಯಾಗುತ್ತಿವೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ವರುಣಾರ್ಭಟ.. ಆರೆಂಜ್ ಅಲರ್ಟ್ ಘೋಷಣೆ