ETV Bharat / bharat

Cloud burst: ಹಿಮಾಚಲಪ್ರದೇಶದಲ್ಲಿ ಮೇಘಸ್ಪೋಟ, ಅಪಾಯದಲ್ಲಿದ್ದ 40 ಜನರ ರಕ್ಷಣೆ - Himachal update news

ಗುಜರಾತ್​, ಮಹಾರಾಷ್ಟ್ರ ಸೇರಿದಂತೆ ವಿವಿಧ ಕರಾವಳಿ ಭಾಗಗಳಲ್ಲಿ ಬಿಪೊರ್​ಜೋಯ್​​ ರಣೋತ್ಸಾಹದಿಂದ ಬಂದಪ್ಪಳಿಸುತ್ತಿದೆ. ಇತ್ತ ಹಿಮಾಚಲಪ್ರದೇಶದಲ್ಲಿ ಮೇಘಸ್ಫೋಟವಾಗಿ ಹಾನಿ ಉಂಟಾಗಿದೆ.

ಹಿಮಾಚಲಪ್ರದೇಶದಲ್ಲಿ ಮೇಘಸ್ಪೋಟ
ಹಿಮಾಚಲಪ್ರದೇಶದಲ್ಲಿ ಮೇಘಸ್ಪೋಟ
author img

By

Published : Jun 14, 2023, 10:00 AM IST

ಮಂಡಿ(ಹಿಮಾಚಲಪ್ರದೇಶ): ಅರಬ್ಬೀ ಸಮುದ್ರದಲ್ಲಿ ಬಿಪೊರ್​ಜೋಯ್​ ಚಂಡಮಾರುತ ಭೀಕರತೆ ಪಡೆಯುತ್ತಿದ್ದರೆ, ಇತ್ತ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಮೇಘಸ್ಫೋಟ ಸಂಭವಿಸಿದೆ. ಮೇಘಸ್ಫೋಟದಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಡೋಗ್ರಿ, ಕಾರ್ಲಾ ಮತ್ತು ಹಡಬೋಯಿ ಗ್ರಾಮಗಳಲ್ಲಿ ಕೃಷಿ ಭೂಮಿ ಕೊಚ್ಚಿಕೊಂಡು ಹೋಗಿದೆ. ಆಪತ್ತಿನಲ್ಲಿ ಸಿಕ್ಕಿದ್ದ 40 ಜನರನ್ನು ಇದೇ ವೇಳೆ ರಕ್ಷಣೆ ಮಾಡಲಾಗಿದೆ.

ಮಂಡಿ ಜಿಲ್ಲೆಯ ಧನಾಯರ ಗ್ರಾಮ ಪಂಚಾಯಿತಿಯಲ್ಲಿ ಮೇಘಸ್ಫೋಟದಿಂದಾಗಿ ಎರಡು ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೆಲವು ವಾಹನಗಳನ್ನು ಕಠಿಣ ಪರಿಶ್ರಮದ ನಂತರ ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಲಾಯಿತು. ಇದಲ್ಲದೇ, ಹಸುವೊಂದು ಸಾವನ್ನಪ್ಪಿದ ಸುದ್ದಿಯೂ ವರದಿಯಾಗಿದೆ. ಮಂಗಳವಾರ ಸಂಜೆ 5:30ರ ಸುಮಾರಿಗೆ ಮೇಘಸ್ಫೋಟದಿಂದ ಭಾರಿ ಹಾನಿ ಸಂಭವಿಸಿದೆ ಎಂದು ಧನಾಯರ ಮೀರಾದೇವಿ ಅವರು ತಿಳಿಸಿದ್ದಾರೆ.

ಗ್ರಾಮಸ್ಥರಿಗೆ ಸೇರಿದ ಹಲವಾರು ಕೃಷಿ ಜಮೀನು ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇದೇ ವೇಳೆ, 2 ವಾಹನಗಳು ಸೇರಿದಂತೆ 3 ವ್ಯಾಪಾರಿಗಳು ಕೂಡ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ 40 ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದ ಎಲ್ಲ ಸಂಪರ್ಕ ಮಾರ್ಗಗಳು ಕಡಿತಗೊಂಡಿವೆ. ಏಕಾಏಕಿ ಘಟನೆ ಸಂಭವಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಕಷ್ಟು ತೊಂದರೆ ಉಂಟಾಗಿದ್ದು, ನಷ್ಟದ ಅಂದಾಜು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ಸಮಯದಲ್ಲಿ ಘಟನೆಯ ಕುರಿತು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಸುಂದರನಗರ ವಿವೇಕ್ ಚೌಹಾಣ್, ಧಾನ್ಯಾರದಲ್ಲಿ ಉಂಟಾದ ಹಾನಿಯ ಪರಿಸ್ಥಿತಿ ಅವಲೋಕಿಸಿದರು. ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಕರೆತರಲಾಗಿದೆ ಎಂದು ಅವರು ಹೇಳಿದರು. ಪ್ರದೇಶದಲ್ಲಿನ ನಷ್ಟವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮೌಲ್ಯಮಾಪನ ಮಾಡುತ್ತಿದ್ದಾರೆ. ಇದಾದ ಬಳಿಕ ಅವರಿಗೆ ಸಿಗುವ ಸೌಲಭ್ಯವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬಿಪೊರ್​ಜೋಯ್​ ಭೀಕರತೆ: ತೀವ್ರ ಸ್ವರೂಪ ಪಡೆದುಕೊಂಡಿರುವ ಬಿಪೊರ್ ಜೋಯ್(ವಿಪತ್ತು) ಚಂಡಮಾರುತ, ಪ್ರತಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಬೀಸುತ್ತಿದೆ. ಗುಜರಾತ್‌ನ ಕರಾವಳಿಗೆ ಬಂದು ಇದು ಅಪ್ಪಳಿಸುತ್ತಿದೆ. ಇದರಿಂದಾಗಿ ಅರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕಛ್, ಪೋರ್​ಬಂದರ್, ದೇವಭೂಮಿ ದ್ವಾರಕಾ, ಜುನಾಗಢ ಹಾಗೂ ಮೋರ್ಬಿ ಕರಾವಳಿಯಲ್ಲಿ ಅಪಾಯ ಸೃಷ್ಟಿಸುವ ಭೀತಿ ಎದುರಾಗಿದೆ. ಈ ಭಾಗದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಶುರುವಾಗಿದೆ. ಕಛ್​ನ ಕಾಂಡ್ಲಾ ಬಂದರಿನಲ್ಲಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಜಾಗ್ರತೆ ವಹಿಸಲಾಗಿದೆ.

ಚಂಡಮಾರುತದಿಂದಾಗಿ ಕಡಲ್ಕೊರೆತವುಂಟಾಗಿದ್ದು, ಸ್ಥಳೀಯರ ಸಂರಕ್ಷಣೆ, ಪ್ರವಾಹ ಪರಿಹಾರ ವಿತರಿಸಲು ಭಾರತೀಯ ಸೇನೆ ಭುಜ್, ಜಾಮ್‌ನಗರ, ಗಾಂಧಿಧಾಮ್, ಧರಂಗ್‌ಧ್ರ, ವಡೋದರಾ ಮತ್ತು ಗಾಂಧಿನಗರ ಹಾಗೂ ನಲಿಯಾ, ದ್ವಾರಕಾ ಮತ್ತು ಅಮ್ರೇಲಿಯಲ್ಲಿ ಬೀಡು ಬಿಟ್ಟಿದೆ. ಗುಜರಾತ್‌ನ ವಿವಿಧ ತಗ್ಗು ಪ್ರದೇಶಗಳಿಂದ 21,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. 220ಕ್ಕೂ ಹೆಚ್ಚು ಆಶ್ರಯ ಮನೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

69 ರೈಲು ಸಂಚಾರ ರದ್ದು: ಬಿಪೊರ್ ಜೋಯ್ ಚಂಡಮಾರುತವು ಭಾರಿ ವಿನಾಶ ಸೃಷ್ಟಿಸುವ ಭೀತಿ ಎದುರಾಗಿದ್ದು ಪಶ್ಚಿಮ ರೈಲ್ವೆ ವಲಯವು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮಂಗಳವಾರ 69 ರೈಲುಗಳನ್ನು ರದ್ದುಗೊಳಿಸಿದೆ. 32 ರೈಲುಗಳನ್ನು ಶಾರ್ಟ್ - ಟರ್ಮಿನೇಟ್ ಮಾಡಲಾಗಿದೆ. 26 ರೈಲುಗಳನ್ನು ಮುಂಜಾಗ್ರತಾ ಕ್ರಮವಾಗಿ ಅಲ್ಪಾವಧಿಗೆ ಪ್ರಾರಂಭಿಸಲಾಗುವುದು ಎಂದು ಪಶ್ಚಿಮ ರೈಲ್ವೆ CPRO ಸುಮಿತ್ ಠಾಕೂರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಪೊರ್ ಜೋಯ್ ಎಫೆಕ್ಟ್​: ಗುಜರಾತ್‌ನಲ್ಲಿ 21,000ಕ್ಕೂ ಹೆಚ್ಚು ಜನರ ಸ್ಥಳಾಂತರ, 69 ರೈಲು ಸಂಚಾರ ರದ್ದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.