ETV Bharat / bharat

ಕೋವಾಕ್ಸಿನ್​ ರೂಪಾಂತರಿ ವೈರಸ್​ಗೂ ಪರಿಣಾಮಕಾರಿ : ಕ್ಲಿನಿಕಲ್​ ಪ್ರಯೋಗದಲ್ಲಿ ಬಹಿರಂಗ

author img

By

Published : Feb 19, 2021, 10:20 AM IST

ಯುಕೆಯಲ್ಲಿ ಕಂಡು ಬಂದ ರೂಪಾಂತರಿ ತಳಿಯನ್ನು ಕೋವಾಕ್ಸಿನ್‌ನ ತಟಸ್ಥಗೊಳಿಸುವ ಸಾಮರ್ಥ್ಯದ ಕುರಿತು ಒಂದು ಸಂಶೋಧನಾ ಪ್ರಬಂಧದಲ್ಲಿ ತಿಳಿಸಲಾಗಿದೆ..

ICMR
ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ

ತಿರುವನಂತಪುರಂ(ಕೇರಳ) : ಬ್ರಿಟನ್​, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನಿಂದ ವರದಿಯಾದ ರೂಪಾಂತರಿತ ವೈರಸ್ ತಳಿಗಳ ವಿರುದ್ಧ ಸ್ಥಳೀಯ ಕೊರೊನಾ ಲಸಿಕೆ ಕೋವಾಕ್ಸಿನ್​ ಪರಿಣಾಮಕಾರಿಯಾಗುತ್ತೆ ಎಂದು ಪ್ರಯೋಗದಲ್ಲಿ ತಿಳಿದು ಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.

ಕೇರಳ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿರುವ 'ಕೇರಳ ಆರೋಗ್ಯ : ಎಸ್‌ಡಿಜಿ ಎ ರಿಯಾಲಿಟಿ' ಎಂಬ ಅಂತಾರಾಷ್ಟ್ರೀಯ ವೆಬ್‌ನಾರ್‌ನ ಉದ್ದೇಶಿಸಿ ಐಸಿಎಂಆರ್ ಮಹಾ ನಿರ್ದೇಶಕ ಡಾ. ಬಲರಾಮ್ ಭಾರ್ಗವ ಮಾತನಾಡಿದರು. ಯುಕೆಯಲ್ಲಿ ಕಂಡು ಬಂದ ರೂಪಾಂತರಿ ತಳಿಯನ್ನು ಕೋವಾಕ್ಸಿನ್‌ನ ತಟಸ್ಥಗೊಳಿಸುವ ಸಾಮರ್ಥ್ಯದ ಕುರಿತು ಒಂದು ಸಂಶೋಧನಾ ಪ್ರಬಂಧದಲ್ಲಿ ತಿಳಿಸಲಾಗಿದೆ.

ಕೋವಾಕ್ಸಿನ್ ಬಿಬಿ 152ರ ಮೂರನೇ ಕ್ಲಿನಿಕಲ್ ಪ್ರಯೋಗವು ಪೂರ್ಣಗೊಂಡಿದೆ. ಪ್ರಯೋಗದಲ್ಲಿ ಭಾಗಿಯಾಗಿರುವ ಎಲ್ಲಾ 25,800 ಸ್ವಯಂಸೇವಕರಿಗೆ ಎರಡೂ ಪ್ರಮಾಣಗಳನ್ನು ನೀಡಲಾಗಿದೆ ಎಂದರು. ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಅಭಿವೃದ್ಧಿಪಡಿಸುವ ಪ್ರಯತ್ನಗಳ ಭಾಗವಾಗಿ ಕೋವಿಡ್ -19 ವೈರಸ್‌ನ ಪ್ರತ್ಯೇಕಿಸಿದ ವಿಶ್ವದ 5ನೇ ದೇಶ ಭಾರತ ಎಂದು ಡಾ.ಭಾರ್ಗವ್ ಹೇಳಿ ಗಮನ ಸೆಳೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.