ETV Bharat / bharat

'ಯುಪಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆ': ಮೊದಲ ಹಂತದ ಮತದಾನದ ಬಳಿಕ ಅಖಿಲೇಶ್ ಯಾದವ್ ಭವಿಷ್ಯ - ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022

ಮಾರ್ಚ್ 10 ರಂದು ಬರಬೇಕಿದ್ದ ಫಲಿತಾಂಶ ಮೊದಲ ಹಂತದ ಮತದಾನದಿಂದಲೇ ಬಂದಿದೆ. ಯುಪಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಅಖಿಲೇಶ್​ ಯಾದವ್ ಭವಿಷ್ಯ ನುಡಿದಿದ್ದಾರೆ.

ಅಖಿಲೇಶ್ ಯಾದವ್ಅಖಿಲೇಶ್ ಯಾದವ್
ಅಖಿಲೇಶ್ ಯಾದವ್ಅಖಿಲೇಶ್ ಯಾದವ್
author img

By

Published : Feb 11, 2022, 4:43 PM IST

ಬರೇಲಿ (ಉತ್ತರ ಪ್ರದೇಶ): ನಿನ್ನೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆದಿದ್ದು, "ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವುದು ಸ್ಪಷ್ಟವಾಗಿದೆ" ಎಂದು ಸಮಾಜವಾದಿ ಪಕ್ಷ(ಎಸ್​ಪಿ)ದ ಮುಖಂಡ ಅಖಿಲೇಶ್​ ಯಾದವ್​ ಹೇಳಿಕೆ ನೀಡಿದ್ದಾರೆ.

ಮಾರ್ಚ್ 10 ರಂದು ಬರಬೇಕಿದ್ದ ಫಲಿತಾಂಶ ಮೊದಲ ಹಂತದ ಮತದಾನದಿಂದಲೇ ಬಂದಿದೆ. ಯುಪಿಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ಹೊಸ ಸರ್ಕಾರ ರಚನೆಯಾದ ನಂತರ ಆರೋಗ್ಯ ಸೇವೆಗಳ ಉತ್ತಮ ಬಜೆಟ್ ಜೊತೆಗೆ ಉಚಿತ ವಿದ್ಯುತ್‌ ನೀಡುತ್ತೇವೆ. ಬೈಕ್ ಸವಾರರಿಗೆ ಒಂದು ಲೀಟರ್ ಪೆಟ್ರೋಲ್ ಉಚಿತವಾಗಿ ಸಿಗಲಿದೆ. ಐಟಿ ವಲಯದಲ್ಲಿಯೇ 22 ಲಕ್ಷ ಉದ್ಯೋಗಗಳನ್ನು ನೀಡುತ್ತೇವೆ ಎಂದು ಅಖಿಲೇಶ್​ ಯಾದವ್ ಭರವಸೆ ನೀಡಿದರು.

ಇದನ್ನೂ ಓದಿ: ಯುಪಿ ವಿಧಾನಸಭೆ ಚುನಾವಣೆ: ಮೊದಲನೇ ಹಂತದಲ್ಲಿ ಶೇ.57.79 ರಷ್ಟು ಮತದಾನ

ಬಿಜೆಪಿಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅತಿದೊಡ್ಡ ಸುಳ್ಳುಗಾರ. ಬಿಜೆಪಿ ಸರ್ಕಾರ ರಾಜ್ಯಕ್ಕೆ ಕೊರತೆ ಬಿಟ್ಟರೆ ಏನನ್ನೂ ನೀಡಿಲ್ಲ. ಬಿಜೆಪಿ ನಾಯಕರು ಅಪಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಸುಳ್ಳು ಹೇಳಲಿಕ್ಕೇ ಅವರ ಪಕ್ಷದಲ್ಲಿ ಪೈಪೋಟಿ ಇದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

403 ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಮಾರ್ಚ್ 7ರ ವರೆಗೆ ಏಳು ಹಂತಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್​ 10 ರಂದು ಮತ ಎಣಿಕೆ ನಡೆಯಲಿದೆ. ನಿನ್ನೆ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.