ETV Bharat / bharat

3ನೇ ತರಗತಿ ಬಾಲಕಿ ಮೇಲೆ ಕ್ರೀಡಾ ಶಿಕ್ಷಕನಿಂದ ಅತ್ಯಾಚಾರ! - Delhi Police

ಪುಟ್ಟ ಬಾಲೆಯ ಮೇಲೆ ಸರ್ಕಾರಿ ಶಾಲೆಯ ಕ್ರೀಡಾ ಶಿಕ್ಷಕನೇ ಕ್ರೌರ್ಯ ಮೆರೆದ ಪ್ರಕರಣ ದೆಹಲಿಯಲ್ಲಿ ನಡೆದಿದೆ.

Delhi Police
ಶಾಲೆಯ ಆವರಣದಲ್ಲಿ ದೆಹಲಿ ಪೊಲೀಸರಿಂದ ಭದ್ರತೆ
author img

By

Published : Feb 8, 2023, 7:34 PM IST

ನವದೆಹಲಿ: ಪೂರ್ವ ದೆಹಲಿಯ ಸರ್ಕಾರಿ ಶಾಲೆಯೊಂದರಲ್ಲಿ 3ನೇ ತರಗತಿ ಓದುತ್ತಿದ್ದ ಎಂಟು ವರ್ಷದ ಬಾಲಕಿಯ ಮೇಲೆ ಶಾಲಾ ಆವರಣದಲ್ಲಿಯೇ ಅತ್ಯಾಚಾರ ಎಸಗಿದ ಗಂಭೀರದ ಆರೋಪದಡಿ 40 ವರ್ಷದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯೂ ಅಶೋಕ್ ನಗರ ಪ್ರದೇಶದಲ್ಲಿರುವ ಶಾಲೆಯಲ್ಲಿ ಆರೋಪಿ 2016ರಿಂದ ಕೆಲಸ ಹೊಂದಿದ್ದರು. ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

ಈ ಘಟನೆ ಕಳೆದ ವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಗುವಿಗೆ ಆಮಿಷವೊಡ್ಡಿದ್ದ ಕ್ರೀಡಾ ಶಿಕ್ಷಕ ಶಾಲೆಯೊಳಗಿನ ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗುವಿನ ವರ್ತನೆಯ ಬಗ್ಗೆ ತಾಯಿಗೆ ಅನುಮಾನ ಮೂಡಿದಾಗ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ತಾಯಿಯ ಎದುರು ಬಾಲಕಿ ಘಟನೆಯನ್ನು ವಿವರಿಸಿದ್ದಾಳೆ. ಹೀಗಾಗಿ ಇಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

''ಸುಮಾರು ನಾಲ್ಕೈದು ದಿನಗಳ ಹಿಂದೆ ನಡೆದ ಘಟನೆಯ ಬಗ್ಗೆ ದೂರು ಬಂದ ನಂತರ ಸ್ಥಳಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಯಿತು. ಬಾಲಕಿಗೆ ಕೌನ್ಸಿಲಿಂಗ್ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆರೋಪಿ ಕ್ರೀಡಾ ಶಿಕ್ಷಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಹಾಗೂ ಇತರ ಸಂಬಂಧಿತ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಉಪಪೊಲೀಸ್ ಆಯುಕ್ತ (ಪೂರ್ವ) ಅಮೃತ ಗುಗುಲೋತ್ ಹೇಳಿದರು.

ಕಾಮುಕರ ಅಟ್ಟಹಾಸ: ಹೈದರಾಬಾದ್​ನಲ್ಲಿಯೂ ಇಂಥದ್ದೇ ಅಮಾನವೀಯ ಮತ್ತು ಹೇಯ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯ ಮೇಲೆ ಕಾಮುಕರು ಅಟ್ಟಹಾಸ ಮೆರೆದ ಘಟನೆ ಚಂದ್ರಾಯನಗುಟ್ಟ ಪ್ರದೇಶದ ಛತ್ರಿನಾಕಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಂಜಾ ಸೇವಿಸಿದ ಗುಂಗಿನಲ್ಲಿ 15 ವರ್ಷ ವಯಸ್ಸಿನ ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ, ಅತ್ಯಾಚಾರ ಎಸಗಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಕಂಡಿಕಾಲ ಬೊಯಾಗುಡಾ ಪ್ರದೇಶದಲ್ಲಿ ಬಾಲಕಿಯು ಮೆಡಿಕಲ್​ ಶಾಪ್​ಗೆ ಔಷಧಿ ತರಲು ಹೋಗಿದ್ದಳು. ಓರ್ವ ಯುವಕ ಕಡಿಮೆ ಬೆಲೆಗೆ ಔಷಧಿ ಕೊಡಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿ ಮನೆಯೊಂದಕ್ಕೆ ಕರೆದೊಯ್ದಿದ್ದ. ಆ ಮನೆಯಲ್ಲಿ ಅದಾಗಲೇ ಗಾಂಜಾ ಮತ್ತಿನಲ್ಲಿದ್ದ ಇತರೆ ಮೂವರು ಕಾಮುಕರು ಠಿಕಾಣಿ ಹೂಡಿದ್ದರು.

ಯುವಕ ಮನೆಯೊಳಗೆ ಬಾಲಕಿಯನ್ನು ಕರೆದೊಯ್ದ ನಂತರ ಅಲ್ಲಿದ್ದವರೆಲ್ಲ ಸೇರಿ ಮೊದಲು ಬಾಲಕಿಗೆ ಹುಕ್ಕಾ ಸೇದುವಂತೆ ಒತ್ತಾಯಿಸಿದ್ದಾರೆ. ಕೂಲ್​ ಡ್ರಿಂಕ್​ನಲ್ಲಿ ಮದ್ಯ ಬೆರೆಸಿ ಅದನ್ನು ಕುಡಿಯುವಂತೆ ಬೆದರಿಸಿದ್ದಾರೆ. ಇವರ ದುರ್ವರ್ತನೆಯಿಂದ ಬೆಚ್ಚಿಬಿದ್ದ ಬಾಲಕಿ ಕಿರುಚಿಕೊಳ್ಳಲು ಆರಂಭಿಸಿದ್ದಾಳೆ. ಕಿರುಚಿಕೊಳ್ಳುವ ಶಬ್ದ ಹೊರಗಡೆ ಯಾರ ಗಮನಕ್ಕೂ ಬಾರದಿರಲಿ ಎಂದು ಮ್ಯೂಸಿಕ್​ ಸೌಂಡ್ ಹೆಚ್ಚಿಸಿದ ಕಾಮುಕರು ಬಳಿಕ ಬಾಲಕಿಯ ಮೇಲೆರಗಿದ್ದಾರೆ. ಎಲ್ಲರೂ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ತಪ್ಪಿಸಿಕೊಂಡು ಬಂದ ಬಾಲಕಿ: ಕಾಮುಕರ ಕ್ರೌರ್ಯಕ್ಕೆ ನಲುಗಿರುವ ಬಾಲಕಿ ಹೇಗೋ ಆ ಸ್ಥಳದಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಮನೆಗೆ ಬಂದು ಕ್ರೌರ್ಯದ ಬಗ್ಗೆ ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಮಗಳ ಮೇಲೆ ನಡೆದ ದುಷ್ಕೃತ್ಯದ ಬಗ್ಗೆ ತಿಳಿದ ತಾಯಿಗೆ ಅರೆಕ್ಷಣ ದಿಕ್ಕೇ ತೋಚದಂತಾಗಿತ್ತು. ತಕ್ಷಣ ಅವರು ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ವಿಶೇಷ ತನಿಖಾ ತಂಡ ರಚನೆ ರಚಿಸಿ ಕಾರ್ಯಾಚರಣೆಗಿಳಿದಿದ್ದರು. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಬಗ್ಗೆ ಡಿಸಿಪಿ ಸಾಯಿ ಚೈತನ್ಯಾ ಮಾಹಿತಿ ನೀಡಿದ್ದಾರೆ. ಈ ವೇಳೆ ಮೂವರು ಕಾಮುಕರು ಸೇರಿದಂತೆ ಇನ್ನಿಬ್ಬರು ಸಹಚರರನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ.. ಬೆಂಗಳೂರಲ್ಲಿ ತಾತನಿಗೆ 20 ವರ್ಷ ಶಿಕ್ಷೆ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.