ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) 12ನೇ ತರಗತಿ ಪರೀಕ್ಷೆಯನ್ನು ಜುಲೈ 22ರಂದು ಪ್ರಕಟಿಸಲಾಗುವುದು ಎಂದು ಈ ಹಿಂದೆ ಹೇಳಿತ್ತು. ಆದರೀಗ ಫಲಿತಾಂಶವನ್ನು ಜುಲೈ 25ರಂದು ಪ್ರಕಟಿಸುವುದಾಗಿ ಆದೇಶ ಹೊರಡಿಸಿದೆ.
ಸಿಬಿಎಸ್ಇ ಪರೀಕ್ಷಾ ಫಲಿತಾಂಶ ಅಂತಿಮಗೊಳಿಸುವ ದಿನಾಂಕವನ್ನು ಮುಂದೂಡಿಕೆ ಮಾಡಲಾಗಿದೆ. ಶಾಲೆಗಳ ಜೊತೆಗೆ ಮಂಡಳಿಯು ದತ್ತಾಂಶವನ್ನು ಒಟ್ಟು ಸೇರಿಸಲು ರಾತ್ರಿ ಹಗಲು ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಸಿಬಿಎಸ್ಇ ತಿಳಿಸಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆವರೆಗೂ ಸೋನಿಯಾ ಅಧ್ಯಕ್ಷೆ: ಆಜಾದ್, ಫೈಲಟ್ಗೆ ಮಹತ್ವದ ಸ್ಥಾನ?
ಫಲಿತಾಂಶ ತಯಾರಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಶಿಕ್ಷಕರು ಒತ್ತಡದಲ್ಲಿದ್ದಾರೆ. ಹೀಗಾಗಿ ಫಲಿತಾಂಶದಲ್ಲಿ ಏರುಪೇರಾಗುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಫಲಿತಾಂಶದಲ್ಲಿ ಯಾವುದೇ ತಪ್ಪುಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೊನಾ ವೈರಸ್ ಕಾರಣ ಬೋರ್ಡ್ ಪರೀಕ್ಷೆ ರದ್ಧುಗೊಳಿಸಲಾಗಿತ್ತು. ಈ ಹಿಂದೆ ವಿದ್ಯಾರ್ಥಿಗಳು ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲು ಸಿಬಿಎಸ್ ಮಂಡಳಿ ಮುಂದಾಗಿದೆ.