ETV Bharat / bharat

10ನೇ ತರಗತಿಯ ವಿದ್ಯಾರ್ಥಿಗೆ ಸಹಪಾಠಿಗಳಿಂದಲೇ ಲೈಂಗಿಕ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ.. ಚೆನ್ನೈ ಗಾಯಕಿಯ ಸರಣಿ ಟ್ವೀಟ್​ - ಚೆನ್ನೈ ಗಾಯಕಿಯ ಸರಣಿ ಟ್ವೀಟ್​

ಚೆನ್ನೈನ ಶಾಲೆಯಲ್ಲಿ 10ನೇ ತರಗತಿಯ ನಾಲ್ವರು ಬಾಲಕರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಸಹಪಾಠಿ ವಿದ್ಯಾರ್ಥಿಗೆ ನಿರಂತರವಾಗಿ ಬೆದರಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಆತ್ಮಹತ್ಯೆಗೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಸರಣಿ ಟ್ವೀಟ್​ ಮಾಡಿದ್ದಾರೆ.

class-10-student-sexual-abuse-central-govt-school-in-chennai
10ನೇ ತರಗತಿಯ ವಿದ್ಯಾರ್ಥಿಗೆ ಸಹಪಾಠಿಗಳಿಂದಲೇ ಲೈಂಗಿಕ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ... ಚೆನ್ನೈ ಗಾಯಕಿಯ ಸರಣಿ ಟ್ವೀಟ್​
author img

By

Published : Nov 24, 2022, 10:28 PM IST

ಚೆನ್ನೈ (ತಮಿಳುನಾಡು): ಕೇಂದ್ರ ಸರ್ಕಾರಿ ಶಾಲೆಯೊಂದರಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಆತನ ಸಹಪಾಠಿಗಳ ಗುಂಪೊಂದು ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಚೆನ್ನೈನಲ್ಲಿ ಕೇಳಿ ಬಂದಿದೆ. ಈ ಬಗ್ಗೆ ಚೆನ್ನೈನ ಖ್ಯಾತ ಗಾಯಕಿ ಚಿನ್ಮಯಿ ಶ್ರೀಪಾದ ಸರಣಿ ಟ್ವೀಟ್​ಗಳು ಮಾಡಿ ಮಾಹಿತಿ ಹೊರ ಹಾಕಿದ್ದಾರೆ.

ಚೆನ್ನೈನ ಅಶೋಕ್‌ನಗರದ ಶಾಲೆಯೊಂದರಲ್ಲಿ 10ನೇ ತರಗತಿಯ ನಾಲ್ವರು ಬಾಲಕರು ಕಳೆದ ಕೆಲವು ತಿಂಗಳುಗಳಿಂದ ತಮ್ಮ ಸಹಪಾಠಿ ವಿದ್ಯಾರ್ಥಿಗೆ ನಿರಂತರವಾಗಿ ಬೆದರಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಆತ್ಮಹತ್ಯೆಗೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಟ್ವೀಟ್​ ಮಾಡಿದ್ದಾರೆ.

ಬಾಲಕನಿಗೆ ದೈಹಿಕ ಹಿಂಸೆ ನೀಡಿದ್ದಾರೆ. ಇಷ್ಟೇ ಅಲ್ಲ, ಬಾಲಕನನ್ನು ಶಾಲೆಯ ಸ್ನಾನಗೃಹಕ್ಕೆ ಕರೆದೊಯ್ದು ಅಲ್ಲಿ ಬಲವಂತವಾಗಿ ಹಸ್ತಮೈಥುನ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಆ ಬಾಲಕನಿಗೆ ಥಳಿಸಿ ಚಾಕುವಿನಿಂದ ತನ್ನನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುವುದು ಇಲ್ಲವೇ, ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಮತ್ತೊಂದು ಟ್ವೀಟ್​ನಲ್ಲಿ ದೂರಿದ್ದಾರೆ.

  • Thread
    Trigger Warning - CSA, incitement to suicide
    Four 10th Standard boys in a Chennai, Ashok Nagar school have bullied, sexually harassed their classmate continually over the past few months.
    Including physical violence, they have taken the boy to the school bathroom,

    — Chinmayi Sripaada (@Chinmayi) November 24, 2022 " class="align-text-top noRightClick twitterSection" data=" ">

ಸಿಸಿ ಟಿವಿ ಕ್ಯಾಮರಾಗಳಿಲ್ಲ ಎಂದು ಹೇಳಿ ಬೆದರಿಕೆ: ಬಾಲಕನನ್ನು ಟೆರೇಸ್‌ನಿಂದ ತಳ್ಳುವುದಾಗಿ ಆರೋಪಿ ಬಾಲಕರು ಬೆದರಿಸಿದ್ದು, ಶಾಲೆಯಲ್ಲಿ ಯಾವುದೇ ಕ್ಯಾಮೆರಾಗಳು ಇಲ್ಲವಾದ್ದರಿಂದ ಇದು ಆತ್ಮಹತ್ಯೆ ಎಂದು ಬಿಂಬಿಸುತ್ತೇವೆ ಎಂದೂ ಬೆದರಿಸಿದ್ದಾರೆ. ಅಲ್ಲದೇ, ಇದನ್ನು ಬಹಿರಂಗ ಪಡಿಸಿದರೆ, ನಿಮ್ಮ ಪೋಷಕರು ಮತ್ತು ನಿನ್ನನ್ನು ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ ಎಂದು ಇನ್ನೊಂದು ಟ್ವೀಟ್​ನಲ್ಲಿ ಗಾಯಕಿ ತಿಳಿಸಿದ್ದಾರೆ.

ಬಾಲಕ 10ನೇ ತರಗತಿಯಲ್ಲಿರುವ ಕಾರಣ, ಆತನ ತಾಯಿ ಆರೋಪಿ ಹುಡುಗರನ್ನು ಭೇಟಿಯಾಗಿದ್ದರು. ಬಾಲಕರ ಕಾಲಿಗೆ ಬಿದ್ದು ತನ್ನ ಮಗನನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡು, ಸ್ನೇಹಿತರಾಗಿರುವಂತೆ ತಾಯಿ ಮನವಿ ಮಾಡಿದ್ದರು. ಆಗ ಆರೋಪಿ ಬಾಲಕರು ಸರಿ ಎಂದು ಹೇಳಿದ್ದರು. ಇದಾದ ನಂತರವೂ ಬಾಲಕನ ಬಳಿಗೆ ಬಂದ ಆರೋಪಿಗಳು ಆತನಿಗೆ ಪೋರ್ನ್ ವೀಕ್ಷಿಸುವಂತೆ ಒತ್ತಾಯಿಸಿದ್ದಾರೆ.

ಅಸಹ್ಯದ ಕೆಲಸ ಮಾಡುವಂತೆ ಒತ್ತಾಯ: ಜೊತೆಗೆ ನಿಮ್ಮ ತಾಯಿಯೊಂದಿಗೆ ಸಂಭೋಗ ಮಾಡಲು ಬಯಸುತ್ತೇವೆ ಎಂದು ಆರೋಪಿ ಬಾಲಕರು ಹೇಳಿದಲ್ಲದೇ, ನಿನ್ನ ತಂದೆ-ತಾಯಿ ಸಂಭೋಗ ಮಾಡುವುದನ್ನು ನೋಡುವಂತೆ ಸಂತ್ರಸ್ತ ಬಾಲಕನಿಗೆ ಒತ್ತಾಯಿಸಿದ್ದಾರೆ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಟ್ವೀಟ್​ನಲ್ಲಿ ಆರೋಪಿಸಿದ್ದಾರೆ.

ಅಲ್ಲದೇ, ಗಾಯಕಿಯ ಟ್ವೀಟ್​ ಪ್ರಕಾರ, ಸಂತ್ರಸ್ತ ಬಾಲಕನ ತಂದೆ ಅಂತಿಮವಾಗಿ ಪೊಲೀಸರ ಮೊರೆ ಹೋಗಿದ್ದರು. ಆದರೆ, ಆ ಪೊಲೀಸರು ಆರೋಪಿ ಬಾಲಕರ ಭವಿಷ್ಯವನ್ನು ಹಾಳು ಮಾಡಬೇಡಿ. ಇದನ್ನು ಬಿಟ್ಟು ಇಲ್ಲಿಗೆ ಬಿಟ್ಟು ಬಿಡಿ ಎಂದು ಪೊಲೀಸರು ಬಾಲಕನ ತಂದೆ ಹೇಳಿದ್ದಾರೆ ಎಂದು ಗಾಯಕಿ ಚಿನ್ಮಯಿ ಸರಣಿ ಟ್ವೀಟ್​ ಮಾಡಿದ್ದಾರೆ.

ಮುಂದುವರಿದು, ಸದ್ಯ ಸಂತ್ರಸ್ತ ಬಾಲಕ ವಾಂತಿ, ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರತಿಯೊಂದಕ್ಕೂ ಆ ಬಾಲಕ ಹೆದರುತ್ತಿದ್ದಾನೆ. ಯಾರಾದರೂ ಅವರ ಹತ್ತಿರಕ್ಕೆ ಬಂದರೆ ಅಥವಾ ಮುಟ್ಟಿದರೆ ಅವರನ್ನು ದ್ವೇಷಿಸುತ್ತಾನೆ. ತಂದೆ ಹೇಳಿದ ಬಹಳಷ್ಟು ವಿವರಗಳನ್ನು ನಾನು ಎಡಿಟ್​ ಮಾಡಿದ್ದೇನೆ. ಹದಿಹರೆಯದ ಬಾಲಕರು ಇದನ್ನೆಲ್ಲ ಮಾಡಿದ್ದಾರೆ ಎಂಬುವುದೇ ಭಯಾನಕವಾಗಿದೆ ಎಂದು ಗಾಯಕಿ ತನ್ನ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಆದರೆ, ಈ ಘಟನೆ ಬಗ್ಗೆ ಶಾಲೆಯ ಆಡಳಿತ ಮಂಡಳಿಯರಾಗಲಿ ಅಥವಾ ಪೊಲೀಸರಾಗಲಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ: ವಿದ್ಯಾರ್ಥಿಗೆ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.