ETV Bharat / bharat

ವ್ಯಾಜ್ಯಕ್ಕೆ ಸಿಕ್ಕ ಬಾಯಿಮುಕ್ಕಳಿಸುವ ಕೊರೊನಾ ಟೆಸ್ಟ್​ ತಂತ್ರ: 3 ತಾಸಲ್ಲಿ ರೀಸಲ್ಟ್ ಔಟ್! - ನೀರಿ

ಕೋವಿಡ್ ಸೋಂಕು ಪರೀಕ್ಷೆಗೆ ಅಗ್ಗದ ವಿಧಾನವೊಂದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಅನುಮೋದನೆ ನೀಡಿದೆ. ಲವಣಯುಕ್ತ ಬಾಯಿಮುಕ್ಕಳಿಸುವಿಕೆ ಆರ್​ಟಿ-ಪಿಸಿಆರ್​ ವಿಧಾನ ಇದಾಗಿದ್ದು, ಮೂರು ಗಂಟೆಗಳಲ್ಲಿಯೇ ಫಲಿತಾಂಶ ಸಿಗಲಿದೆ.

RT-PCR
RT-PCR
author img

By

Published : May 31, 2021, 8:58 PM IST

ನವದೆಹಲಿ: ಕೋವಿಡ್ -19 ಮಾದರಿ ಪರೀಕ್ಷಿಸಲು ರೋಗಿಯು ಲವಣಯುಕ್ತ ದ್ರಾವಣವನ್ನು ಬಾಯಲ್ಲಿ ಹಾಕಿ ಮುಕ್ಕಳಿಸುವ (ಗಾರ್ಗಲ್​) ಆರ್​ಟಿ-ಪಿಸಿಆರ್ ವಿಧಾನ ಅಭಿವೃದ್ಧಿಪಡಿಸುವುದಾಗಿ ನಾಗ್ಪುರ ಮೂಲದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ನೀರಿ) ಹೇಳಿ ಕೆಲ ದಿನಗಳ ನಂತರ, ಭಾರತದ ಪ್ರತಿಷ್ಠಿತ ಆಲ್ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನ (ಏಮ್ಸ್) ಸಂಶೋಧಕರು ಮತ್ತು ವೈದ್ಯರು ಒಂದು ವರ್ಷದ ಹಿಂದೆ ಇದೇ ರೀತಿಯ ಗಾರ್ಗ್ಲ್ ಲ್ಯಾವೆಜ್ ತಂತ್ರವನ್ನು ಪ್ರಸ್ತಾಪಿಸಿ ಮತ್ತು ಅಭಿವೃದ್ಧಿಪಡಿಸಿ ಬಳಕೆಗೆ ಪ್ರಸ್ತಾಪಿಸಿದ್ದರು. ಆದರೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಯಾವುದೇ ಸ್ವೀಕೃತಿ ಬರಲಿಲ್ಲ ಎಂದಿದೆ.

ಏಮ್ಸ್ ವೈದ್ಯರು ವರ್ಷದ ಹಿಂದೆ ಗಾರ್ಗಲ್​ ಲ್ಯಾವೆಜ್ ತಂತ್ರ ಪ್ರಸ್ತಾಪಿಸಿದರು ಮತ್ತು ಅಭಿವೃದ್ಧಿಪಡಿಸಿದರು. ಆದರೆ ಡಾ. ಹರ್ಷವರ್ಧನ್ ಮತ್ತು ಐಸಿಎಂಆರ್ ಅವರಿಂದ ಯಾವುದೇ ಸ್ವೀಕೃತಿ ಇರಲಿಲ್ಲ. ಸರಿಯಾದ ವಿವರಣೆ ನೀಡದೇ ನೀರಿ ಪ್ರಸ್ತುತಪಡಿಸುತ್ತಿರುವುದು ತಪ್ಪು. ಏಮ್ಸ್​ ಯುವ ವೈದ್ಯರಿಗೆ ತಂತ್ರದ ಮನ್ನಣೆ ನೀಡಬೇಕು ಎಂದು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಆರ್​ಡಿಎ-ಏಮ್ಸ್) ಅಧ್ಯಕ್ಷ ಡಾ.ಅಮಂದೀಪ್ ಸಿಂಗ್ ಹೇಳಿದ್ದಾರೆ.

ಕೋವಿಡ್ ಸೋಂಕು ಪರೀಕ್ಷೆಗೆ ಅಗ್ಗದ ವಿಧಾನವೊಂದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಅನುಮೋದನೆ ನೀಡಿದೆ. ಲವಣಯುಕ್ತ ಬಾಯಿಮುಕ್ಕಳಿಸುವಿಕೆ ಆರ್​ಟಿ-ಪಿಸಿಆರ್​ ವಿಧಾನ ಇದಾಗಿದ್ದು, ಮೂರು ಗಂಟೆಗಳಲ್ಲಿಯೇ ಫಲಿತಾಂಶ ಸಿಗಲಿದೆ.

ಇದನ್ನೂ ಓದಿ: 108 ಸೇನಾ ವಸ್ತುಗಳ ಆಮದಿನ ಮೇಲೆ ನಿರ್ಬಂಧ : ಭಾರತದಲ್ಲೇ ತಯಾರಾಗಲಿವೆ ಶಸ್ತ್ರಾಸ್ತ್ರಗಳು

ಕೋವಿಡ್ -19 ರೋಗನಿರ್ಣಯಕ್ಕೆ 'ಗಾರ್ಗಲ್ ಲವಣಯುಕ್ತ ನೀರು' ರೂಪದಲ್ಲಿ ಮಾದರಿಗಳನ್ನು ಸಂಗ್ರಹಿಸುವ ಒಳನೋಟವನ್ನು ತಮ್ಮ ಸಂಶೋಧಕರು ಹೊಂದಿದ್ದಾರೆ ಎಂದು ಏಮ್ಸ್ ವೈದ್ಯರು ಹೇಳಿದ್ದಾರೆ. ಇದು ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂಬುದರ ತನಿಖೆಗೆ, ಅವರು 50 ರೋಗಿಗಳಿಂದ ಮೂಗಿನ ಸ್ವ್ಯಾಬ್ ಮತ್ತು ಲವಣಯುಕ್ತ ಗಾರ್ಗಲ್ ನೀರು ಎರಡನ್ನೂ ಪಡೆದು, ಕೊರೊನಾ ಸೋಂಕು ಸಕಾರಾತ್ಮಕವೆಂದು ದೃಢಡಿಸಿದರು.

ಮೂಗಿನ ಸ್ವ್ಯಾಬ್ ಮತ್ತು ಲವಣಯುಕ್ತ ಗಾರ್ಗ್ಲ್ ನೀರು ಎರಡೂ 100 ಪ್ರತಿಶತದಷ್ಟು ಫಲಿತಾಂಶಗಳನ್ನು ನೀಡಿತು. ಎರಡು ವಿಧಾನಗಳಿಂದ ಪಡೆದ ಮಾದರಿಗಳಲ್ಲಿ ವೈರಲ್ ಲೋಡ್ ಸಹ ಬಹುತೇಕ ಹೋಲುತ್ತದೆ. ಆದರೂ ಕೋವಿಡ್ 19 ಭಾರತದ ಪರೀಕ್ಷಾ ಕಾರ್ಯತಂತ್ರ ಕ್ರಾಂತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಇದು ಹೆಚ್ಚು ಗಮನ ಸೆಳೆಯಲಿಲ್ಲ ಎಂದು ಏಮ್ಸ್ ಆರ್​ಡಿಎ ತಿಳಿಸಿದೆ.

ಕಳೆದ ವರ್ಷ ಜೂನ್‌ನಲ್ಲಿ ಏಮ್ಸ್ ತಂಡವು ಐಸಿಎಂಆರ್‌ಗೆ ಸಂಶೋಧನಾ ಪ್ರಬಂಧವನ್ನು ಮಂಡಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.