ETV Bharat / bharat

ತಪ್ಪು ತಿಳುವಳಿಕೆ, ಅಹಂಕಾರ, ನಂಬಿಕೆ, ದುರಾಸೆಗಳು ಸಂಘರ್ಷಕ್ಕೆ ಕಾರಣವಾಗಬಹುದು - ಸಿಜೆಐ ಎನ್‌ ವಿ ರಮಣ - ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆ ಕೇಂದ್ರದ

ಭಾರತೀಯ ಮಹಾಕಾವ್ಯವಾದ ಮಹಾಭಾರತವು ಸಂಘರ್ಷ ಪರಿಹಾರ ಸಾಧನವಾಗಿ ಮಧ್ಯಸ್ಥಿಕೆಯಲ್ಲಿನ ಆರಂಭಿಕ ಪ್ರಯತ್ನದ ಉದಾಹರಣೆಯನ್ನು ಒದಗಿಸುತ್ತದೆ. ಅಲ್ಲಿ ಶ್ರೀಕೃಷ್ಣ ಪಾಂಡವರು ಮತ್ತು ಕೌರವರ ನಡುವಿನ ವಿವಾದವನ್ನು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದ ಎಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಹೇಳಿದ್ದಾರೆ.

CJI Justice NV Ramana participated in IAMC Curtain Raiser conclave in Hyderabad
ತಪ್ಪು ತಿಳುವಳಿಕೆ, ಅಹಂಕಾರ, ನಂಬಿಕೆ, ದುರಾಸೆಗಳು ಸಂಘರ್ಷಗಳಿಗೆ ಕಾರಣವಾಗಬಹುದು - ಸಿಜೆಐ ಎನ್‌ವಿ ರಮಣ
author img

By

Published : Dec 4, 2021, 4:10 PM IST

ಹೈದರಾಬಾದ್‌: ತಪ್ಪು ತಿಳುವಳಿಕೆ, ಅಹಂಕಾರ, ನಂಬಿಕೆ ಹಾಗೂ ದುರಾಸೆಗಳು ಸಂಘರ್ಷಗಳಿಗೆ ಕಾರಣವಾಗಬಹುದು. ಅಂತಿಮವಾಗಿ, ಸಣ್ಣ ಅಭಿಪ್ರಾಯದಲ್ಲಿನ ವ್ಯತ್ಯಾಸಗಳು ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದು. ಆದರೆ ದೊಡ್ಡ ಘರ್ಷಣೆಗಳನ್ನೂ ಸಹ ಪರಸ್ಪರ ಅರ್ಥಮಾಡಿಕೊಂಡು ಸಣ್ಣ ಪ್ರಯತ್ನದಿಂದ ಬಗೆಹರಿಸಬಹುದು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್‌ನಲ್ಲಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ವೈಯಕ್ತಿಕ ಜೀವನದಲ್ಲಿ ಘರ್ಷಣೆಗಳು ಉದ್ಭವಿಸಿದರೆ, ನೀವು ಇಷ್ಟಪಡದ ಜನರನ್ನು ತಪ್ಪಿಸುವ ಮೂಲಕ ಅವುಗಳನ್ನು ಪರಿಹರಿಸಬಹುದು ಎಂದು ಹೇಳಿದ್ದಾರೆ.

ಕುಟುಂಬದ ಸದಸ್ಯರ ಜೊತೆ ಅಥವಾ ವ್ಯವಹಾರ, ವೃತ್ತಿಪರ ಜೀವನದಲ್ಲಿ ಪ್ರತಿದಿನ ನಮ್ಮ ಜೀವನದಲ್ಲಿ ನಾವು ಘರ್ಷಣೆಗಳನ್ನು ಎದುರಿಸುತ್ತೇವೆ. ಸಂಘರ್ಷಗಳಿಲ್ಲದ ಜಗತ್ತನ್ನು ಯಾರಾದರೂ ಊಹಿಸಬಹುದೇ? ವಿವೇಚನಾಶೀಲ ವ್ಯಕ್ತಿ ಘರ್ಷಣೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ ಎಂದಿದ್ದಾರೆ.

ಮಹಾಭಾರತದಲ್ಲಿ ಶ್ರೀಕೃಷ್ಣನ ಮಧ್ಯಸ್ಥಿಕೆ ಪ್ರಸ್ತಾಪ

ಭಾರತೀಯ ಮಹಾಕಾವ್ಯವಾದ ಮಹಾಭಾರತವು ಸಂಘರ್ಷ ಪರಿಹಾರ ಸಾಧನವಾಗಿ ಮಧ್ಯಸ್ಥಿಕೆಯಲ್ಲಿನ ಆರಂಭಿಕ ಪ್ರಯತ್ನದ ಉದಾಹರಣೆಯನ್ನು ಒದಗಿಸುತ್ತದೆ. ಅಲ್ಲಿ ಶ್ರೀಕೃಷ್ಣ ಪಾಂಡವರು ಮತ್ತು ಕೌರವರ ನಡುವಿನ ವಿವಾದವನ್ನು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರು. ಮಧ್ಯಸ್ಥಿಕೆಯ ವೈಫಲ್ಯವು ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಯಿತು ಎಂಬುದನ್ನು ನೆನಪಿಸಿಕೊಳ್ಳುವುದು ಯೋಗ್ಯವಾಗಿದೆ.

ಐಎಎಂಸಿಗೆ 25,000 ಚದರ್​ ಅಡಿ ವಿಸ್ತೀರ್ಣ ಜಾಗ

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಮಾತನಾಡಿ, ಹೈದರಾಬಾದ್‌ನಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಹೊಂದಿರುವುದು ನನಗೆ ಸಂತೋಷದ ವಿಷಯವಾಗಿದೆ. ಮಧ್ಯಸ್ಥಿಕೆ ಕೇಂದ್ರಕ್ಕೆ ಹೈದರಾಬಾದ್ ಸೂಕ್ತ ಸ್ಥಳವಾಗಿದ್ದು, ಐಎಎಂಸಿಗೆ 25,000 ಚದರ್​ ಅಡಿ ವಿಸ್ತೀರ್ಣ ಜಾಗ ನೀಡಲಾಗಿದೆ. ಶಾಶ್ವತ ಕಟ್ಟಡಕ್ಕಾಗಿ ಪುಪ್ಪಲಗೂಡದಲ್ಲಿ ಶೀಘ್ರವೇ ಭೂಮಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Tamil Nadu Omicron Scare : ಲಸಿಕೆ ಪಡೆಯದವರಿಗೆ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಮಧುರೈನಲ್ಲಿ ನಿರ್ಬಂಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.