ETV Bharat / bharat

ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಪರಿಗಣಿಸಲು CJI ಬಳಿ ಇದೆ ಸುಪ್ರೀಂಕೋರ್ಟ್​ನ 48 ವಕೀಲರ ಹೆಸರು.. - lawyers

ಎಸ್​​ಸಿಬಿಎ ರಚಿಸಿದ್ದ ಶೋಧನಾ ಸಮಿತಿಯು ಸುಪ್ರೀಂಕೋರ್ಟ್​ನ 48 ವಕೀಲರ ಹೆಸರನ್ನು ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಪರಿಗಣಿಸಲು ಸಿಜೆಐಗೆ ಸಲ್ಲಿಸಿದೆ.

Supreme Court
ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಪರಿಗಣಿಸಲು CJI ಬಳಿ ಇದೆ ಸುಪ್ರೀಂಕೋರ್ಟ್​ನ 48 ವಕೀಲರ ಹೆಸರು
author img

By

Published : Aug 13, 2021, 3:45 PM IST

ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರನ್ನಾಗಿ ಪರಿಗಣಿಸಲು ಸುಪ್ರೀಂಕೋರ್ಟ್​ನ 48 ವಕೀಲರ ಹೆಸರನ್ನು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ​​(ಎಸ್​​ಸಿಬಿಎ) ಭಾರತದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರಿಗೆ ನೀಡಿದೆ.

ಎಸ್​​ಸಿಬಿಎ ರಚಿಸಿದ್ದ ಶೋಧನಾ ಸಮಿತಿಯು 69 ವಕೀಲರ ಹೆಸರುಗಳನ್ನು ಪ್ರಾಥಮಿಕವಾಗಿ ಪರಿಗಣಿಸಿತ್ತು. ಚರ್ಚೆ ಮತ್ತು ಪರಿಶೀಲನೆಯ ಬಳಿಕ 48 ಹೆಸರನ್ನು ಅಂತಿಮಗೊಳಿಸಿ, ಈ ಲಿಸ್ಟ್​ ಅನ್ನು ಸೀಲ್​ ಮಾಡಿದ ಕವರ್​ನಲ್ಲಿ ಸಿಜೆಐಗೆ ಸಲ್ಲಿಸಿದೆ. ಹಿರಿಯ ವಕೀಲರಾದ ವಿಕಾಸ್ ಸಿಂಗ್, ಪ್ರದೀಪ್ ರೈ, ಮಹಾಲಕ್ಷ್ಮಿ ಪಾವನಿ, ರಾಕೇಶ್ ದ್ವಿವೇದಿ, ಶೇಖರ್ ನಫಡೆ, ವಿಜಯ್ ಹಂಸರಿಯಾ ಮತ್ತು ವಿ ಗಿರಿ ಅವರನ್ನೊಳಗೊಂಡ ಎಸ್​​ಸಿಬಿಎ ಸಮಿತಿ ಇದಾಗಿತ್ತು.

ಇದನ್ನೂ ಓದಿ: ಇಂದಿನಿಂದ 'ಫಿಟ್ ಇಂಡಿಯಾ ಫ್ರೀಡಂ ರನ್ 2.0': ಅಭಿಯಾನಕ್ಕೆ ಕ್ರೀಡಾ ಸಚಿವರಿಂದ ಚಾಲನೆ

ಎಸ್​​ಸಿಬಿಎ ಪ್ರಸ್ತಾವನೆಗೆ ಹಲವಾರು ಹೈಕೋರ್ಟ್ ಬಾರ್ ಅಸೋಸಿಯೇಷನ್‌ಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಸಿಜೆಐಗೆ ಪತ್ರ ಬರೆದು ಹೈಕೋರ್ಟ್​ನ ಕೆಲ ವಕೀಲರೂ ನ್ಯಾಯಾಧೀಶರಾಗಲು ಅರ್ಹರಿರುವುದಾಗಿ ತಿಳಿಸಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.