ETV Bharat / bharat

ಏರ್​ಪೋರ್ಟ್​ನಲ್ಲಿ ಹಣೆಗೆ ಗುಂಡು ಹಾರಿಸಿಕೊಂಡು ಸಿಐಎಸ್​ಎಫ್ ಅಧಿಕಾರಿ ಆತ್ಮಹತ್ಯೆ

ಸಿಐಎಸ್​ಎಫ್​ ಅಧಿಕಾರಿಯೊಬ್ಬರು ಪಶ್ಚಿಮಬಂಗಾಳದ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಸಿಐಎಸ್​ಎಫ್ ಅಧಿಕಾರಿ ಆತ್ಮಹತ್ಯೆ

author img

By

Published : Jul 23, 2022, 11:38 AM IST

ಕೋಲ್ಕತ್ತಾ(ಪಶ್ಚಿಮಬಂಗಾಳ): ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಅಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಿಐಎಸ್​ಎಫ್​ ಸಬ್​ಇನ್‌ಸ್ಪೆಕ್ಟರ್ ಪಂಕಜ್​ಕುಮಾರ್ ಮೃತ ಅಧಿಕಾರಿ.

ಶುಕ್ರವಾರ ರಾತ್ರಿ 7.45ರ ಸುಮಾರಿನಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗೆಂದೇ ಮೀಸಲಾದ ನೆಲಮಾಳಿಗೆಯ ಶೌಚಾಲಯದಲ್ಲಿ ಅಧಿಕಾರಿಯ ಶವ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ಪಂಕಜ್​ಕುಮಾರ್​ ಶೌಚಾಲಯಕ್ಕೆ ತೆರಳಿದಾಗ ಗುಂಡು ಹಾರಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ವೇಳೆ ಸದ್ದು ಕೇಳಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಶೌಚಾಲಯಕ್ಕೆ ಧಾವಿಸಿ ನೋಡಿದಾಗ ಅಧಿಕಾರಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹಣೆಯ ಮೇಲೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ವೀಸ್ ಪಿಸ್ತೂಲ್ ಶವದ ಪಕ್ಕದಲ್ಲಿ ಬಿದ್ದಿರುವುದು ಕಂಡುಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಪಂಕಜ್​ಕುಮಾರ್​ ಸಹೋದ್ಯೋಗಿಗಳು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಓದಿ: Salman Khan applies for gun license.. ಬಂದೂಕು ಲೈಸೆನ್ಸ್​ಗಾಗಿ ಬಜರಂಗಿ​ ಭಾಯಿಜಾನ್​ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.