ನವದೆಹಲಿ : ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ನಾಲ್ಕು ಕಾಟ್ರಿಡ್ಜ್‌ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮೂರರಲ್ಲಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಯುನೈಟೆಡ್ ಏರ್ಲೈನ್ಸ್ ಫ್ಲೈಟ್ ನಂಬರ್ (ಯುಎ 868) ನಲ್ಲಿ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಮಾಡಬೇಕಿತ್ತು.
ಬಂಧಿತನ್ನು ಕಪಿಲ್ ವೈಶ್ಯ ಎಂದು ಗುರುತಿಸಲಾಗಿದೆ. ವಿಮಾನ ಪ್ರಯಾಣದಲ್ಲಿ ಮದ್ದು, ಗುಂಡುಗಳನ್ನು ಸಾಗಿಸಲು ಯಾವುದೇ ಅಧಿಕೃತ ದಾಖಲೆಗಳು ಇಲ್ಲದ ಕಾರಣ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅವನಿಂದ ವಶಪಡಿಸಿಕೊಂಡ ನಾಲ್ಕು ಕಾಟ್ರೇಜ್ಗಳನ್ನು ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿದೆ.
ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಲು ಕಪಿಲ್ ಸೋಮವಾರ ಮುಂಜಾನೆ ಐಜಿಐ ವಿಮಾನ ನಿಲ್ದಾಣದ ಟಿ-3 ಟರ್ಮಿನಲ್‌ಗೆ ಆಗಮಿಸಿದ್ದರು.
ದೆಹಲಿ ವಿಮಾನ ನಿಲ್ದಾಣದ ಭದ್ರತಾ ಪರೀಕ್ಷೆಯ ವೇಳೆ ಅವರ ಬ್ಯಾಗ್ನಲ್ಲಿದ್ದ ಕಾಟ್ರಿಡ್ಜ್ಗಳು ಇರುವುದು ಕಂಡು ಬಂದಿದೆ. ಕಪಿಲ್ನನ್ನು ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿದ್ದು, ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಾಯಿ ವಿಚಾರವಾಗಿ ಗಲಾಟೆ: ಪಕ್ಕದ ಮನೆಯವರಿಂದ ತಾಯಿ - ಮಗಳ ಮೇಲೆ ಹಲ್ಲೆ