ETV Bharat / bharat

CISCE ಪರೀಕ್ಷೆ: 10ನೇ ತರಗತಿಯಲ್ಲಿ ಶೇ. 98, 12ನೇ ತರಗತಿಯಲ್ಲಿ ಶೇ.96ರಷ್ಟು ಫಲಿತಾಂಶ - CISCE ಪರೀಕ್ಷಾ ಫಲಿತಾಂಶ ಪ್ರಕಟ

CISCE ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, 10 ನೇ ತರಗತಿಯಲ್ಲಿ ಶೇ.98.94, 12ನೇ ತರಗತಿಯಲ್ಲಿ 96.93 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

CISCE RESULTS
CISCE RESULTS
author img

By

Published : May 14, 2023, 6:53 PM IST

ನವದೆಹಲಿ : ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್‌ಸಿಇ) ಇಂದು 10ನೇ ತರಗತಿ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದೆ. 10ನೇ ತರಗತಿಯಲ್ಲಿ ಶೇ 98.94 ಮತ್ತು 12ನೇ ತರಗತಿಯಲ್ಲಿ ಶೇ 96.93 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಕಾರ್ಯದರ್ಶಿ ಗೆರ್ರಿ ಅರಾಥೂನ್ ಅವರು ಫಲಿತಾಂಶವನ್ನು ಘೋಷಿಸಿದರು. 10 ನೇ ತರಗತಿ (ಐಸಿಎಸ್​ಇ) ಯಲ್ಲಿ ಒಟ್ಟು 63 ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 21 ಭಾರತೀಯ, 14 ವಿದೇಶಿ ಮತ್ತು ಎರಡು ಶಾಸ್ತ್ರೀಯ ಭಾಷೆಗಳ ಪರೀಕ್ಷೆ ನಡೆಸಲಾಗಿತ್ತು. ಜೊತೆಗೆ 12ನೇ ತರಗತಿ (ಐಎಸ್​​ಸಿ)ಯಲ್ಲಿ ಒಟ್ಟು 47 ಲಿಖಿತ ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 12 ಭಾರತೀಯ ಭಾಷೆಗಳು ಮತ್ತು ಮೂರು ವಿದೇಶಿ ಭಾಷೆಗಳು ಮತ್ತು ಒಂದು ಶಾಸ್ತ್ರೀಯ ಭಾಷೆಯ ಪರೀಕ್ಷೆ ನಡೆಸಲಾಗಿತ್ತು ಎಂದು ಮಾಹಿತಿ ನೀಡಿದರು.

  • #WATCH | "I didn't think that I'm going to top India at all...my school helped us, they did whatever they could...": Manya Gupta, All India topper of ISC exam pic.twitter.com/0M65HdSCyg

    — ANI (@ANI) May 14, 2023 " class="align-text-top noRightClick twitterSection" data=" ">

ಎರಡೂ ಪರೀಕ್ಷೆಗಳಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. 10ನೇ ತರಗತಿ ಪರೀಕ್ಷೆಯಲ್ಲಿ ಒಂಬತ್ತು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 12ನೇ ತರಗತಿಯಲ್ಲಿ ಐವರು ವಿದ್ಯಾರ್ಥಿಗಳು ಪ್ರಥಮ ರ‍್ಯಾಂಕ್ ಹಂಚಿಕೊಂಡಿದ್ದಾರೆ.

10ನೇ ತರಗತಿಯಲ್ಲಿ ರುಶಿಲ್ ಕುಮಾರ್, ಅನನ್ಯಾ ಕಾರ್ತಿಕ್, ಶ್ರೇಯಾ ಉಪಾಧ್ಯಾಯ, ಅದ್ವಯ್ ಸರ್ದೇಸಾಯಿ, ಯಶ್ ಮನೀಶ್ ಭಾಸೇನ್, ತನಯ್ ಸುಶೀಲ್ ಶಾ, ಹಿಯಾ ಸಂಘವಿ, ಅವಿಶಿ ಸಿಂಗ್ ಮತ್ತು ಸಂಬಿತ್ ಮುಖೋಪಾಧ್ಯಾಯ ಎಂಬ ವಿದ್ಯಾರ್ಥಿಗಳು ಶೇ.99.80 ಅಂಕಗಳೊಂದಿಗೆ ಅಗ್ರ ಶ್ರೇಣಿಯನ್ನು ಹಂಚಿಕೊಂಡಿದ್ದಾರೆ.

12ನೇ ತರಗತಿಯಲ್ಲಿ ರಿಯಾ ಅಗರ್ವಾಲ್, ಇಪ್ಶಿತಾ ಭಟ್ಟಾಚಾರ್ಯ, ಮೊಹಮ್ಮದ್ ಆರ್ಯನ್ ತಾರಿಕ್, ಸುಭಮ್ ಕುಮಾರ್ ಅಗರ್ವಾಲ್ ಮತ್ತು ಮಾನ್ಯ ಗುಪ್ತಾ ಎಂಬ ವಿದ್ಯಾರ್ಥಿಗಳು ಶೇ.99.75 ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ಶಾಸಕಾಂಗ ಪಕ್ಷದ ಸಭೆ ನಂತರ ಸಿಎಂ ಬಗ್ಗೆ ಹೈಕಮಾಂಡ್​ ನಿರ್ಧಾರ: ಮಲ್ಲಿಕಾರ್ಜುನ್ ಖರ್ಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.