ಜೋಧಪುರ (ರಾಜಸ್ಥಾನ): ಕೆಲ ವರ್ಷಗಳ ಹಿಂದೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸಿನೆರಿಯಸ್ ಜಾತಿಯ ರಣಹದ್ದನ್ನು ಗುರುವಾರ ಚೆನ್ನೈನಿಂದ ರಾಜಸ್ಥಾನದ ಜೋಧಪುರಕ್ಕೆ ಏರ್ಲಿಫ್ಟ್ ಮಾಡಲಾಗಿದೆ. ಇಲ್ಲಿನ ಮಾಚಿಯಾ ಬಯೋಲಾಜಿಕಲ್ ಪಾರ್ಕ್‌ಗೆ ರಣಹದ್ದು ಸ್ಥಳಾಂತರಿಸಲಾಗಿದೆ.
ಐದು ವರ್ಷಗಳ ಹಿಂದೆ ಈ ರಣಹದ್ದು ತನ್ನ ಗುಂಪಿನಿಂದ ಬೇರ್ಪಟ್ಟಿತ್ತು. ತಮಿಳುನಾಡಿನ ಕನ್ಯಾಕುಮಾರಿ ಬಳಿಯ ಉದಯಗಿರಿಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಅದು ಪತ್ತೆಯಾಗಿತ್ತು. ನಂತರ ಅದನ್ನು ರಕ್ಷಣೆ ಮಾಡಿ ಉದಯಗಿರಿಯ ಪಾರ್ಕ್‌ಗೆ ತಂದು ಚಿಕಿತ್ಸೆ ನೀಡಿ ಆರೈಕೆ ಮಾಡಲಾಗಿತ್ತು. ಇದೀಗ ರಣಹದ್ದು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರಿಂದ ಜೋಧಪುರಕ್ಕೆ ಏರ್ ಇಂಡಿಯಾ ವಿಮಾನದ ಮೂಲಕ ಏರ್ಲಿಫ್ಟ್ ಮಾಡಲಾಗಿದೆ.
ರಣಹದ್ದಿಗೆ ಚಂಡಮಾರುತದ ಹೆಸರು: ವಲಸಿಗ ಸಿನೆರಿಯಸ್ ರಣಹದ್ದು 2017ರಲ್ಲಿ ಉಂಟಾದ ಓಖಿ ಚಂಡಮಾರುತದಲ್ಲಿ ತೀರವಾಗಿ ಗಾಯಗೊಂಡಿತ್ತು. ಅಲ್ಲಿಂದ ಈ ರಣಹದ್ದಿಗೆ ಹಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ, ಓಖಿ ಚಂಡಮಾರುತದ ಸಂದರ್ಭದಲ್ಲಿ ಉದಯಗಿರಿಯಲ್ಲಿ ಈ ರಣಹದ್ದು ಪತ್ತೆಯಾಗಿದ್ದರಿಂದ ಇದಕ್ಕೆ ಓಖಿ ಎಂದೇ ತಮಿಳುನಾಡು ವನ್ಯಜೀವಿ ಅಧಿಕಾರಿಗಳು ಹೆಸರಿಟ್ಟಿದ್ದರು.
-
Sharing the heartwarming real life story of a beautiful vulture"Okhi" & his incredible journey from Tamil Nadu to Rajasthan."Okhi"a migratory Cinereous vulture was injured in Okhi Cyclone in 2017 & could not fly back.Our Okhi flew @airindiain early morning today for rewilding pic.twitter.com/yqVbdE1ZKR
— Supriya Sahu IAS (@supriyasahuias) November 3, 2022 " class="align-text-top noRightClick twitterSection" data="
">Sharing the heartwarming real life story of a beautiful vulture"Okhi" & his incredible journey from Tamil Nadu to Rajasthan."Okhi"a migratory Cinereous vulture was injured in Okhi Cyclone in 2017 & could not fly back.Our Okhi flew @airindiain early morning today for rewilding pic.twitter.com/yqVbdE1ZKR
— Supriya Sahu IAS (@supriyasahuias) November 3, 2022Sharing the heartwarming real life story of a beautiful vulture"Okhi" & his incredible journey from Tamil Nadu to Rajasthan."Okhi"a migratory Cinereous vulture was injured in Okhi Cyclone in 2017 & could not fly back.Our Okhi flew @airindiain early morning today for rewilding pic.twitter.com/yqVbdE1ZKR
— Supriya Sahu IAS (@supriyasahuias) November 3, 2022
ಜೋಧಪುರಕ್ಕೆ ಯಾಕೆ ಸ್ಥಳಾಂತರ?: ಸಿನೆರಿಯಸ್ ಜಾತಿಯ ರಣಹದ್ದುಗಳು ಸ್ಪೇನ್, ಪೋರ್ಚುಗಲ್ ಮತ್ತು ದಕ್ಷಿಣ ಫ್ರಾನ್ಸ್ನಲ್ಲಿ ಕಂಡುಬರುತ್ತದೆ. ಪೋರ್ಚುಗಲ್, ಫ್ರಾನ್ಸ್‌ನಿಂದ ಉಜ್ಬೇಕಿಸ್ತಾನ್, ಮಂಗೋಲಿಯಾ ಮೂಲಕ ಅಕ್ಟೋಬರ್ ತಿಂಗಳಿನಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಇವುಗಳ ಆವಾಸಸ್ಥಾನವು ಅರಣ್ಯ ಪ್ರದೇಶದ ಗುಡ್ಡಗಾಡು ಮತ್ತು ಪರ್ವತ ಪ್ರದೇಶಗಳಾಗಿವೆ.
ಜೋಧಪುರದಲ್ಲಿ ಸಿನೆರಿಯಸ್ ರಣಹದ್ದುಗಳು ಇದ್ದು, ಅವುಗಳಿಗೆ ಬೇಕಾದ ಆಧಾರದ ಲಭ್ಯತೆಯೂ ಜೋಧಪುರದಲ್ಲಿದೆ. ಆದ್ದರಿಂದ ಈ ರಣಹದ್ದನ್ನು ತಮಿಳುನಾಡಿನಿಂದ ಜೋಧಪುರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ರಣಹದ್ದು ಜೊತೆಗೆ ಕನ್ಯಾಕುಮಾರಿಯ ವನ್ಯಜೀವಿ ಅಧಿಕಾರಿಯೂ ಜೋಧಪುರಕ್ಕೆ ಬಂದಿದ್ದಾರೆ.
ಚೆನ್ನೈನಿಂದ ಏರ್ಲಿಫ್ಟ್ ಮಾಡಲಾದ ರಣಹದ್ದನ್ನು ಮಾಚಿಯಾ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಇರಿಸಲಾಗಿದೆ. ಅಲ್ಲಿಗೆ ಸಮೀಪದಲ್ಲಿ ಬರುವ ರಣಹದ್ದುಗಳ ಗುಂಪಿನೊಂದಿಗೆ ಕೆಲವು ದಿನಗಳ ಕ್ವಾರಂಟೈನ್ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಣಹದ್ದು ಸಂಪೂರ್ಣವಾಗಿ ಆರೋಗ್ಯಯುತ ಕಂಡು ಬಂದರೆ ಸಿನೆರಿಯಸ್ ಜಾತಿಯ ರಣಹದ್ದು ಗುಂಪಿನೊಂದಿಗೆ ಅದನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಚಿಯಾ ಪಾರ್ಕ್ ಅರಣ್ಯ (ವನ್ಯಜೀವಿ) ಉಪ ಸಂರಕ್ಷಣಾಧಿಕಾರಿ ಸಂದೀಪ್ ಚೇಲಾನಿ ಹೇಳಿದರು.
ಅತ್ಯಂತ ತೂಕ ಮತ್ತು ದೊಡ್ಡ ರಣಹದ್ದು: ಸಿನೆರಿಯಸ್ ಜಾತಿಯ ರಣಹದ್ದುಗಳನ್ನು ಯುರೇಷಿಯಾ ಎಂದೂ ಕರೆಯಲಾಗುತ್ತದೆ. ಯುರೇಷಿಯಾ ಎಂದರೆ ಯುರೋಪ್ ಮತ್ತು ಏಷ್ಯಾ ಎಂಬ ಅರ್ಥವಾಗುತ್ತದೆ. ಸಿನೆರಿಯಸ್ ರಣಹದ್ದುಗಳು ಇತರ ರಣಹದ್ದುಗಳಿಂತ ಅತ್ಯಂತ ತೂಕ, ದೊಡ್ಡವು ಎಂದು ಹೇಳಲಾಗುತ್ತದೆ.
ಈ ಜಾತಿಯ ಹೆಣ್ಣು ರಣಹದ್ದುಗಳ ತೂಕವು ಏಳರಿಂದ 14 ಕೆಜಿವರೆಗೆ ಇರುತ್ತದೆ. ಆದರೆ, ಗಂಡು ರಣಹದ್ದುಗಳು ಗರಿಷ್ಠ ತೂಕ 11.5 ಕೆಜಿ ಇರುತ್ತವೆ. ಇವುಗಳು ಉದ್ದ 98 ರಿಂದ 120 ಸೆಂಟಿಮೀಟರ್ ಹಾಗೂ ರೆಕ್ಕೆಗಳು ಗರಿಷ್ಠ ಮೂರು ಮೀಟರ್ ಉದ್ದ ಇರುತ್ತದೆ. ಇದರಿಂದಾಗಿ ದೀರ್ಘ ಕಾಲ ಹಾರಾಟ ಮಾಡುತ್ತವೆ.
ಇವು ಪರ್ವತ ಪ್ರದೇಶಗಳಲ್ಲಿ 2600ರಿಂದ 12500 ಅಡಿ ಎತ್ತರ ಹಾಗೂ ಮೌಂಟ್ ಎವರೆಸ್ಟ್ನಲ್ಲಿ 22 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಕಂಡುಬರುತ್ತದೆ. ಇವುಗಳ ಗರಿಷ್ಠ ವಯಸ್ಸು 35 ವರ್ಷಗಳಾಗಿದ್ದು. ಯುರೋಪ್ನಲ್ಲಿ ಚಳಿಗಾಲದಲ್ಲಿ ಇವು ಸಾಮಾನ್ಯವಾಗಿ ಮಂಚೂರಿಯಾ, ಮಂಗೋಲಿಯಾ ಮತ್ತು ಕೊರಿಯಾದಲ್ಲಿ ತಮ್ಮ ಸಂತಾನೋತ್ಪತ್ತಿ ಸಮಯವನ್ನು ಕಳೆಯುತ್ತವೆ.
ಇದನ್ನೂ ಓದಿ: ರನ್ ವೇ ಮೂಲಕ ದೇವರ ಮೂರ್ತಿಗಳ ಮೆರವಣಿಗೆ: 5 ಗಂಟೆಗಳ ಕಾಲ ವಿಮಾನ ನಿಲ್ದಾಣವೇ ಬಂದ್