ಹೈದರಾಬಾದ್ : ಸಿಐಡಿ ಪೊಲೀಸರು ನನ್ನನ್ನು ಥಳಿಸಿದ್ದಾರೆ ಎಂದು ವೈಎಸ್ಆರ್ಪಿಸಿ ಸಂಸದ ರಘುರಾಮ್ ಕೃಷ್ಣರಾಜ ನ್ಯಾಯಾಧೀಶರ ಮುಂದೆ ಗಂಭೀರವಾಗಿ ಆರೋಪಿಸಿದ್ದಾರೆ.
ಓದಿ:ರಾಜಧಾನಿಯ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100 ಬೆಡ್‌ಗಳ ಹೈಟೆಕ್ ಆಸ್ಪತ್ರೆ: ಡಿಸಿಎಂ
ಸಿಐಡಿ ಅಧಿಕಾರಿಗಳು ರಿಮಾಂಡ್ ವರದಿಯನ್ನು ಸರಿಪಡಿಸಿ ನ್ಯಾಯಾಧೀಶರ ಮುಂದೆ ಇಟ್ಟಿದ್ದರು. ಪರಿಶೀಲಿಸಿದ ನ್ಯಾಯಾಧೀಶರು ರಘುರಾಮ್ ಕೃಷ್ಣರಾಜರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕೆಂದು ಆದೇಶಿಸಿದ್ದಾರೆ.
ರಘುರಾಮ್ರನ್ನು ಯಾವುದೇ ಕ್ಷಣದಲ್ಲಾದರೂ ಆಸ್ಪತ್ರೆಗೆ ಸ್ಥಳಾಂತರಿಸಬಹುದು. ಈ ನಡುವೆ ರಘುರಾಮ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲ್ಲ ಎಂದಿದ್ದಾರೆ.