ಭೋಪಾಲ್(ಮಧ್ಯಪ್ರದೇಶ) : ತಮಿಳುನಾಡಿನ ಕೂನೂರು ಬಳಿ ನಡೆದ ಸೇನಾ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಮಧ್ಯಪ್ರದೇಶದ ಲ್ಯಾನ್ಸ್ ನಾಯಕ್ ಜಿತೇಂದ್ರ ಕುಮಾರ್ ವರ್ಮಾ ಅವರ ಕುಟುಂಬಸ್ಥರಿಗೆ 1 ಕೋಟಿ ರೂಪಾಯಿ ಹಾಗೂ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಸೆಹೋರ್ ಜಿಲ್ಲೆಯ ಧಮಂಡಾ ಗ್ರಾಮದಲ್ಲಿ ಭಾನುವಾರ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮಣ್ಣಿನ ಮಗನಾದ, ಹೆಲಿಕಾಪ್ಟರ್ ಅವಘಡದಲ್ಲಿ ನಿಧನರಾದ ಜಿತೇಂದ್ರ ಕುಮಾರ್ ವರ್ಮಾ ಅವರ ಕುಟುಂಬಸ್ಥರಿಗೆ ಪರಿಹಾರವಾಗಿ 1 ಕೋಟಿ ರೂಪಾಯಿ ಹಾಗೂ ಅವರ ಪತ್ನಿ ಹಾಗೂ ಪುತ್ರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.
-
अमर शहीद जितेंद्र कुमार जी धामंदा ही नहीं, बल्कि मध्यप्रदेश और पूरे देश के गौरव हैं। मैं इस पुण्य धरा और उनके माता-पिता, पत्नी को प्रणाम करता हूं। https://t.co/VeLbn1v6Kx pic.twitter.com/8oCadMOlq5
— Shivraj Singh Chouhan (@ChouhanShivraj) December 12, 2021 " class="align-text-top noRightClick twitterSection" data="
">अमर शहीद जितेंद्र कुमार जी धामंदा ही नहीं, बल्कि मध्यप्रदेश और पूरे देश के गौरव हैं। मैं इस पुण्य धरा और उनके माता-पिता, पत्नी को प्रणाम करता हूं। https://t.co/VeLbn1v6Kx pic.twitter.com/8oCadMOlq5
— Shivraj Singh Chouhan (@ChouhanShivraj) December 12, 2021अमर शहीद जितेंद्र कुमार जी धामंदा ही नहीं, बल्कि मध्यप्रदेश और पूरे देश के गौरव हैं। मैं इस पुण्य धरा और उनके माता-पिता, पत्नी को प्रणाम करता हूं। https://t.co/VeLbn1v6Kx pic.twitter.com/8oCadMOlq5
— Shivraj Singh Chouhan (@ChouhanShivraj) December 12, 2021
ಇದಲ್ಲದೇ, ವರ್ಮಾ ಅವರ ಹುಟ್ಟೂರಾದ ಧಮಂಡಾದಲ್ಲಿ ವೀರಪುತ್ರನ ಸ್ಮಾರಕ ನಿರ್ಮಾಣ ಮಾಡಲಾಗುವುದು. ಕಾಲೇಜೊಂದಕ್ಕೆ ಜಿತೇಂದ್ರ ಕುಮಾರ್ ವರ್ಮಾರ ಹೆಸರಿಡಲಾಗುವುದು ಎಂದು ಅವರು ಇದೇ ವೇಳೆ ಘೋಷಿಸಿದ್ದಾರೆ.
ಇದನ್ನೂ ಓದಿ: 70 ವರ್ಷದಲ್ಲಿ ಕಾಂಗ್ರೆಸ್ ಕಟ್ಟಿದ್ದನ್ನು ಬಿಜೆಪಿ 7 ವರ್ಷದಲ್ಲಿ ಮಾರ್ತಿದೆ: ಪ್ರಿಯಾಂಕಾ ಗಾಂಧಿ
ಜಿತೇಂದ್ರ ಕುಮಾರ್ ವರ್ಮಾ ಅವರು ಭಾರತೀಯ ಮೂರು ಸೇನಾಪಡೆಗಳ ಮುಖ್ಯಸ್ಥರಾಗಿದ್ದ (ಸಿಡಿಎಸ್) ಬಿಪಿನ್ ರಾವತ್ ಅವರ ಭದ್ರತಾ ತಂಡದಲ್ಲಿ ಒಬ್ಬರಾಗಿದ್ದರು.