ETV Bharat / bharat

ಒಂದೇ ದಿನದಲ್ಲಿ 12 ರೈಲ್ವೆ ಇಂಜಿನ್‌ಗಳನ್ನು ತಯಾರಿಸಿ ದಾಖಲೆ ಬರೆದ ಸಿಎಲ್​ಡಬ್ಲ್ಯೂ​!

author img

By

Published : Mar 30, 2023, 11:00 PM IST

ಚಿತ್ತರಂಜನ್ ಲೊಕೊಮೊಟಿವ್ ವರ್ಕ್ಸ್ (ಸಿಎಲ್​ಡಬ್ಲ್ಯೂ) ಒಂದೇ ದಿನದಲ್ಲಿ 12 ರೈಲು ಇಂಜಿನ್‌ಗಳನ್ನು ತಯಾರಿಸುವ ಮೂಲಕ ವಿನೂತನ ದಾಖಲೆ ನಿರ್ಮಿಸಿದೆ.

Chittaranjan Locomotive Works
ಚಿತ್ತರಂಜನ್ ಲೊಕೊಮೊಟಿವ್ ವರ್ಕ್ಸ್

ಅಸನ್ಸೋಲ್ (ಪಶ್ಚಿಮ ಬಂಗಾಳ): ಚಿತ್ತರಂಜನ್ ರೈಲ್ವೆ ಇಂಜಿನ್ ಫ್ಯಾಕ್ಟರಿಯಲ್ಲಿ (ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್) ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಚಿತ್ತರಂಜನ್ ಲೊಕೊಮೊಟಿವ್ ವರ್ಕ್ಸ್ (ಸಿಎಲ್​ಡಬ್ಲ್ಯೂ) ಒಂದೇ ದಿನದಲ್ಲಿ 12 ರೈಲು ಇಂಜಿನ್‌ಗಳನ್ನು ತಯಾರಿಸುವ ಮೂಲಕ ವಿನೂತನ ದಾಖಲೆ ನಿರ್ಮಿಸಿದೆ.

ಸಾಧನೆ ಮಾಡಿದ ಎಲ್ಲಾ ಉದ್ಯೋಗಿಗಳ ಅಭಿನಂದನೆ: ಇಡೀ ಘಟಕವು, ಕಾರ್ಮಿಕರಿಂದ ಕಾರ್ಖಾನೆಯ ಜನರಲ್ ಮ್ಯಾನೇಜರ್‌ವರೆಗೆ ಇದ್ದ ಎಲ್ಲಾ ಹಿಂದಿನ ದಾಖಲೆಗಳನ್ನು ಅಳಿಸಿಹಾಕಿ ಹೊಸ ಮೈಲುಗಲ್ಲನ್ನು ನಿರ್ಮಿಸಿರುವುದು ಹೆಮ್ಮೆಪಡುವ ಸಂಗತಿ. ಚಿತ್ತರಂಜನ್ ರೈಲ್ ಇಂಜಿನ್ ಫ್ಯಾಕ್ಟರಿ ಜನರಲ್ ಮ್ಯಾನೇಜರ್ ಸತೀಶ್ ಕುಮಾರ್ ಕಶ್ಯಪ್ ಅವರು ಎಲ್ಲಾ ಉದ್ಯೋಗಿಗಳ ಈ ಬೃಹತ್ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಭಾರತದ ಪಿಸಿ, ಟ್ಯಾಬ್ಲೆಟ್ ಮಾರುಕಟ್ಟೆ ಶೇ 5ರಷ್ಟು ಬೆಳವಣಿಗೆ: 1 ಕೋಟಿ 96 ಲಕ್ಷ ಯುನಿಟ್ ಮಾರಾಟ

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್: ಚಿತ್ತರಂಜನ್ ರೈಲ್ ಇಂಜಿನ್ ಫ್ಯಾಕ್ಟರಿಯು ಲೋಕೋ ರೈಲ್ ಇಂಜಿನ್‌ಗಳ ಉತ್ಪಾದನೆಯಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಎರಡು ಬಾರಿ, ಸಿಎಲ್​ಡಬ್ಲ್ಯೂ ವಿಶ್ವದ ಅತ್ಯುತ್ತಮ ಎಂಜಿನ್ ತಯಾರಕರಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಮಾಡಿದೆ. ಈ ಕಾರ್ಖಾನೆ ತನ್ನ ದಾಖಲೆಗಳನ್ನು ತಾನೇ ಪದೇ ಪದೇ ಮುರಿದಿರುವುದು ಎಲ್ಲರನ್ನೂ ನಿಬ್ಬೆರಗಾಗಿಸುವಂತೆ ಮಾಡಿದೆ.

ಇದನ್ನೂ ಓದಿ: IRCTC ಇ-ವ್ಯಾಲೆಟ್ ಬಳಕೆ ಗೊತ್ತೇ?: ಫೀಚರ್​, ಹಣ ಜಮೆ- ಸಂಪೂರ್ಣ ಮಾಹಿತಿ

ವಿಶ್ವದಲ್ಲೇ ವಿನೂತನ ದಾಖಲೆ: ಚಿತ್ತರಂಜನ್ ರೈಲ್ವೆ ಫ್ಯಾಕ್ಟರಿಯು ಮಾರ್ಚ್ 28ರ ಮಂಗಳವಾರದಂದು ಒಂದೇ ಕೆಲಸದ ದಿನದಲ್ಲಿ ಹತ್ತಾರು ರೈಲ್ವೆ ಇಂಜಿನ್‌ಗಳನ್ನು ತಯಾರಿಸಿತು. ಒಂದೇ ದಿನದಲ್ಲಿ ಇಷ್ಟು ಇಂಜಿನ್‌ಗಳನ್ನು ತಯಾರಿಸುವ ಸವಾಲನ್ನು ಸ್ವೀಕರಿಸಲು ಕಾರ್ಖಾನೆಯ ನುರಿತ ಕಾರ್ಮಿಕರು ಬಳಕೆ ಮಾಡಿಕೊಳ್ಳಗಿದೆ. ಈ ರೀತಿಯ ಕಾರ್ಯವನ್ನು ವಿಶ್ವದ ಯಾವುದೇ ಕಂಪನಿ ಮಾಡಿಲ್ಲ. ಅವಿರತ ಪ್ರಯತ್ನದ ಫಲವಾಗಿ 12 ರೈಲ್ವೆ ಇಂಜಿನ್‌ಗಳನ್ನು ಸಿದ್ಧಪಡಿಸುವ ಮೂಲಕ ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದೊಂದು ವಿಶಿಷ್ಟ ಸಾಧನೆಯಾಗಿದೆ. ಈ ಕಾರ್ಯವು ಇಡೀ ವಿಶ್ವದಲ್ಲೇ ವಿನೂತನ ದಾಖಲೆಯನ್ನು ಸೃಷ್ಟಿ ಮಾಡಿದೆ ಎಂದು ಕಾರ್ಖಾನೆಯ ಅಧಿಕಾರಿಗಳು ಹೇಳಿದ್ದಾರೆ. ಕಾರ್ಖಾನೆಯ ನುರಿತ ಕೆಲಸಗಾರರು ಅಸಾಧ್ಯವಾದುದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ ಎಂದು ಅವರು ತಿಳಿಸಿದರು.

ಈಗಾಗಲೇ 400 ಎಂಜಿನ್‌ಗಳನ್ನು ತಯಾರಿಸಿದ ಸಿಎಲ್​ಡಬ್ಲ್ಯೂ: ಚಿತ್ತರಂಜನ್ ರೈಲ್ವೆ ಇಂಜಿನ್ ಫ್ಯಾಕ್ಟರಿ ವತಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಕಾರ್ಖಾನೆಯ ಜನರಲ್ ಮ್ಯಾನೇಜರ್ ಸತೀಶ್ ಕುಮಾರ್ ಕಶ್ಯಪ್ ಅವರು ಅಗಾಧ ಯಶಸ್ಸಿಗೆ ಕಾರ್ಮಿಕರನ್ನು ಅಭಿನಂದಿಸಿದ್ದಾರೆ. ‘ಕಚ್ಚಾ ಸಾಮಗ್ರಿ ಪೂರೈಕೆಯ ನಿರಂತರ ಕೊರತೆಯ ನಡುವೆಯೂ ಈ ಕಾರ್ಖಾನೆಯ ಭವಿಷ್ಯ ಉಜ್ವಲವಾಗಿದೆ. ಎಲ್ಲಾ ಹಂತದ ಕಾರ್ಮಿಕರು ಮತ್ತು ಅಧಿಕಾರಿಗಳು ತೋರಿದ ಸಾಮರ್ಥ್ಯದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ" ಎಂದು ಕಶ್ಯಪ್ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ. ಚಿತ್ತರಂಜನ್ ರೈಲ್ವೆ ಇಂಜಿನ್ ಫ್ಯಾಕ್ಟರಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ 400 ಎಂಜಿನ್‌ಗಳನ್ನು ತಯಾರಿಸಿದೆ. ಈ ಹಿಂದೆ ಈ ಕಾರ್ಖಾನೆಯು ಒಂದು ಆರ್ಥಿಕ ವರ್ಷದಲ್ಲಿ 431 ರೈಲ್ವೆ ಇಂಜಿನ್‌ಗಳನ್ನು ತಯಾರಿಸಿ ದಾಖಲೆ ನಿರ್ಮಿಸಿತ್ತು.

ಇದನ್ನೂ ಓದಿ: ದೇವಸ್ಥಾನದಲ್ಲಿ ಬಾವಿಗೆ ಭಕ್ತರು ಬಿದ್ದ ಪ್ರಕರಣ: ಮೃತರ ಸಂಖ್ಯೆ 13ಕ್ಕೆ ಏರಿಕೆ, ನಾಲ್ವರ ನೇತ್ರದಾನಕ್ಕೆ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.