ETV Bharat / bharat

ಚಿತ್ರಕೂಟ್​​​ ಜೈಲ್​ ಗ್ಯಾಂಗ್​ವಾರ್​ನಲ್ಲಿ​ ಮೂವರು ಬಲಿ.. ಐವರು ಜೈಲಾಧಿಕಾರಿಗಳು ಅಮಾನತು

author img

By

Published : May 15, 2021, 6:12 AM IST

ಉತ್ತರ ಪ್ರದೇಶದ ಹೈ - ಸೆಕ್ಯುರಿಟಿ ಚಿತ್ರಕೂಟ್​​ ಜೈಲಿನೊಳಗೆ ನಡೆದ ಕೈದಿಗಳ ನಡುವಿನ ಗ್ಯಾಂಗ್​ವಾರ್​ನಲ್ಲಿ ಮೂವರು ಕೈದಿಗಳು ಸಾವನ್ನಪ್ಪಿದ್ದಾರೆ. ಪ್ರಕರಣದಲ್ಲಿ ಇಲಾಖಾ ವಿಚಾರಣೆಯ ನಂತರ ಐವರು ಜೈಲು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಚಿತ್ರಕೂಟ್​​​ ಜೈಲ್​
ಚಿತ್ರಕೂಟ್​​​ ಜೈಲ್​

ಚಿತ್ರಕೂಟ್​ / ಲಕ್ನೋ: ಬಿಎಸ್​​ಪಿ ಶಾಸಕ ಮುಖ್ತಾರ್ ಅನ್ಸಾರಿ ಗ್ಯಾಂಗ್ ಸದಸ್ಯ ಸೇರಿದಂತೆ ಮೂವರು ಕೈದಿಗಳ ಹತ್ಯೆ ಸಂಬಂಧ ಜೈಲು ಅಧೀಕ್ಷಕ ಎಸ್ ಪಿ ತ್ರಿಪಾಠಿ ಮತ್ತು ಜೈಲರ್ ಮಹೇಂದ್ರ ಪಾಲ್ ಸೇರಿದಂತೆ ಐವರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಪ್ರಕರಣದಲ್ಲಿ ಇಲಾಖಾ ವಿಚಾರಣೆಯ ನಂತರ ಅಮಾನತು ಮಾಡಲಾಗಿದೆ. ಉತ್ತರ ಪ್ರದೇಶದ ಹೈ - ಸೆಕ್ಯುರಿಟಿ ಚಿತ್ರಕೂಟ್​​ ಜೈಲಿನೊಳಗೆ ನಡೆದ ಕೈದಿಗಳ ನಡುವಿನ ಗ್ಯಾಂಗ್​ವಾರ್​ನಲ್ಲಿ ಮೂವರು ಕೈದಿಗಳು ಸಾವನ್ನಪ್ಪಿದ್ದಾರೆ.

ಚಿತ್ರಕೂಟ್​ ಜಿಲ್ಲಾ ಜೈಲಿನೊಳಗೆ ಶುಕ್ರವಾರ ಮೂವರು ಕೈದಿಗಳನ್ನು ಗುಂಡಿಕ್ಕಿ ಕೊಂದ ನಂತರ ಜೈಲಿನ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಗ್ಯಾಂಗ್​ಸ್ಟರ್ ಅನ್ಶ್ಯುಲ್ ದೀಕ್ಷಿತ್ ಎಂಬಾತ ಮುಖೀಮ್ ಕಲಾ ಎಂಬ ಕೈದಿಯ ಮೇಲೆ ಗುಂಡುಹಾರಿಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೋರ್ವ ಕೈದಿ ಮಿರಾಜುದ್ದೀನ್ ಕೂಡ ಗುಂಡೇಟಿಗೆ ಬಲಿಯಾಗಿದ್ದಾನೆ. ಘಟನೆ ವೇಳೆ, ಪೊಲೀಸರು ದೀಕ್ಷಿತ್​ಗೆ ಶರಣಾಗುವಂತೆ ಕೇಳಿಕೊಂಡರೂ ನಿರಾಕರಿಸಿದ್ದರಿಂದ ಕೊನೆಗೆ ಪೊಲೀಸರು ದೀಕ್ಷಿತ್​ ಮೇಲೂ ಗುಂಡು ಹಾರಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.