ETV Bharat / bharat

ಇ-ಪಾಸ್​ಪೋರ್ಟ್ : ಪರಿಶೀಲನೆ ಸುಲಭ - ಜಾಸ್ತಿ ಸುರಕ್ಷತೆ.. ವರ್ಷಾಂತ್ಯ ಜಾರಿ​ - ಇ ಪಾಸ್​ಪೋರ್ಟ್​ ಜಾರಿ ದಿನಾಂಕ

ಚಿಪ್ ಆಧರಿತ ಇ-ಪಾಸ್​ಪೋರ್ಟ್​ ಹೊಸ ಪರಿಕಲ್ಪನೆಯೇನಲ್ಲ. ನೂರಕ್ಕೂ ಹೆಚ್ಚು ದೇಶಗಳಲ್ಲಿ ಈ ರೀತಿಯ ಇ-ಪಾಸ್​ಪೋರ್ಟ್ ಜಾರಿಯಲ್ಲಿವೆ. ಐರ್ಲೆಂಡ್, ಜಿಂಬಾಬ್ವೆ, ಮಲಾವಾಯ್, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮುಂತಾದ ದೇಶಗಳು ಈಗಾಗಲೇ ಇ-ಪಾಸ್​ಪೋರ್ಟ್​ ಜಾರಿಗೊಳಿಸಿವೆ ಎಂದು ಇಂಟರ್​ನ್ಯಾಷನಲ್ ಸಿವಿಲ್ ಏವಿಯೇಶನ್ ಆರ್ಗನೈಸೇಶನ್ ತಿಳಿಸಿದೆ.

e-passports
ಇ-ಪಾಸ್​ಪೋರ್ಟ್
author img

By

Published : Jun 25, 2022, 6:04 PM IST

ಅಂತಾರಾಷ್ಟ್ರೀಯ ಪ್ರಯಾಣವನ್ನು ಇನ್ನಷ್ಟು ಸುಲಭವಾಗಿಸಲು ಹಾಗೂ ಪಾಸ್​ಪೋರ್ಟ್ ಹೊಂದಿರುವವರ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಶೀಘ್ರದಲ್ಲೇ ಇ-ಪಾಸ್​ಪೋರ್ಟ್​ಗಳ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಕಳೆದ ವರ್ಷವೇ ಇ-ಪಾಸ್​ಪೋರ್ಟ್​ ಬಗ್ಗೆ ಕೇಂದ್ರ ಸರ್ಕಾರ ಹೇಳಿತ್ತಾದರೂ, ಈ ವರ್ಷಾಂತ್ಯಕ್ಕೆ ಇ-ಪಾಸ್​ಪೋರ್ಟ್​ ಯೋಜನೆ ಜಾರಿಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.

ಚಿಪ್ ಆಧಾರಿತ ಇ-ಪಾಸ್​ಪೋರ್ಟ್​ ಹೊಸ ಪರಿಕಲ್ಪನೆಯೇನಲ್ಲ. ನೂರಕ್ಕೂ ಹೆಚ್ಚು ದೇಶಗಳಲ್ಲಿ ಈ ರೀತಿಯ ಇ-ಪಾಸ್​ಪೋರ್ಟ್ ಜಾರಿಯಲ್ಲಿವೆ. ಐರ್ಲೆಂಡ್, ಜಿಂಬಾಬ್ವೆ, ಮಲಾವಾಯ್, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮುಂತಾದ ದೇಶಗಳು ಈಗಾಗಲೇ ಇ-ಪಾಸ್​ಪೋರ್ಟ್​ ಜಾರಿಗೊಳಿಸಿವೆ ಎಂದು ಇಂಟರ್​ನ್ಯಾಷನಲ್ ಸಿವಿಲ್ ಏವಿಯೇಶನ್ ಆರ್ಗನೈಸೇಶನ್ ತಿಳಿಸಿದೆ.

ಹಾಗಾದ್ರೆ ಇ-ಪಾಸ್​ಪೋರ್ಟ್​ ಎಂದರೇನು? ಪ್ರಯಾಣಕ್ಕೆ ಇದರಿಂದಾಗುವ ಅನುಕೂಲಗಳೇನು? ಇದೆಷ್ಟು ಸುರಕ್ಷಿತ? ಎಲ್ಲ ಮಾಹಿತಿ ಇಲ್ಲಿದೆ.

ಏನಿದು ಇ-ಪಾಸ್​ಪೋರ್ಟ್ : ಇ-ಪಾಸ್​ಪೋರ್ಟ್​ ಗಳು ಇತರ ಸಾಮಾನ್ಯ ಪಾಸ್​ಪೋರ್ಟ್ ಮಾಡುವ ಕೆಲಸವನ್ನೇ ಮಾಡುತ್ತವೆ. ಇವು ನಿಮ್ಮ ಡಿಎಲ್​ನಲ್ಲಿರುವ ಹಾಗೆ ಒಂದು ಚಿಪ್ ಒಳಗೊಂಡಿರುತ್ತವೆ. ಪಾಸ್​ಪೋರ್ಟ್ ಹೊಂದಿರುವವರ ಎಲ್ಲ ಮಾಹಿತಿ ಚಿಪ್​ನಲ್ಲಿರುತ್ತದೆ. ​​ ​

ಇ-ಪಾಸ್​ಪೋರ್ಟ್​ಗಳು ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ (RFID) ಚಿಪ್ ಒಳಗೊಂಡಿರುತ್ತವೆ ಹಾಗೂ ಹಿಂಭಾಗದ ಕವರ್​ನಲ್ಲಿ ಒಳಗಡೆ ಮುಚ್ಚಲ್ಪಟ್ಟ ಎಂಟೆನಾ ಇರುತ್ತದೆ. ಅಧಿಕಾರಿಗಳು ಪ್ರಯಾಣಿಕರ ಮಾಹಿತಿಯನ್ನು ಬಹುಬೇಗನೆ ಪರಿಶೀಲಿಸಲು ಚಿಪ್ ಬಹಳ ಸಹಕಾರಿ. ನಕಲಿ ಪಾಸ್​ಪೋರ್ಟ್​ ತಡೆಗಟ್ಟಲು, ಪಾಸ್​ಪೋರ್ಟ್​ ಸುರಕ್ಷತೆ ಹೆಚ್ಚಿಸಲು ಮತ್ತು ಮಾಹಿತಿಯ ಪುನರಾವರ್ತನೆ ಹಾಗೂ ತಿದ್ದುವಿಕೆಯನ್ನು ತಡೆಗಟ್ಟಲು ಇ-ಪಾಸ್​ಪೋರ್ಟ್ ಜಾರಿಗೊಳಿಸಲಾಗುತ್ತದೆ.

ಇ-ಪಾಸ್​ಪೋರ್ಟ್ ತಂತ್ರಜ್ಞಾನ ತಯಾರಿಸುವವರು ಯಾರು? : ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಇ-ಪಾಸ್​ಪೋರ್ಟ್ ಗಳ ಮೇಲೆ ಈಗಾಗಲೇ ಕೆಲಸ ಮಾಡುತ್ತಿದ್ದು, ವರ್ಷಾಂತ್ಯದ ವೇಳೆಗೆ ಯೋಜನೆ ಪೂರ್ಣವಾಗಲಿದೆ. ಬ್ಯಾಕೆಂಡ್​ನಲ್ಲಿ ಡೇಟಾ ನಿರ್ವಹಣೆ ಮಾಡಲು ವಿದೇಶಾಂಗ ಸಚಿವಾಲಯದ ಸಹಯೋಗದಲ್ಲಿ ಟಿಸಿಎಸ್​ ಹೊಸ ಕಮಾಂಡ್ ಸೆಂಟರ್ ಆರಂಭಿಸಿದೆ.

ಯಾವಾಗ ಸಿಗಬಹುದು ಇ-ಪಾಸ್​ಪೋರ್ಟ್? : ವರ್ಷಾಂತ್ಯಕ್ಕೆ ಇ-ಪಾಸ್​ಪೋರ್ಟ್ ಬರಲಿವೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ನಿಖರ ದಿನಾಂಕವನ್ನು ಈವರೆಗೂ ಪ್ರಕಟಿಸಿಲ್ಲ.

ಈಗ ಪಾಸ್​ಪೋರ್ಟ್ ಹೊಂದಿರುವವರು ಏನು ಮಾಡಬೇಕು?: ಯೋಜನೆ ಜಾರಿಯ ನಂತರ ಈಗಾಗಲೇ ಪಾಸ್​ಪೋರ್ಟ್ ಹೊಂದಿರುವವರು ಇ-ಪಾಸ್​ಪೋರ್ಟ್ ಗೆ ಬದಲಾಯಿಸಿಕೊಳ್ಳಬೇಕಾ, ಅವರ ಪಾಸ್​ಪೋರ್ಟ್ ಅವಧಿ ಮುಗಿಯುವವರೆಗೂ ಸುಮ್ಮನಿರಬೇಕಾ ಅಥವಾ ಏನೂ ಮಾಡದೆ ಸುಮ್ಮನಿರಬೇಕಾ ಎಂಬುದರ ಬಗ್ಗೆ ಸರ್ಕಾರ ಏನನ್ನೂ ಹೇಳಿಲ್ಲ. ಇದರ ಬಗ್ಗೆ ಕಾಯಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.