ETV Bharat / bharat

ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಚೀನಾ : ಅಧ್ಯಯನ ವರದಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯ - ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ ಸಂಸ್ಥೆ- ತಂತ್ರಜ್ಞಾನ,ವೈಜ್ಞಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಚೀನಾ

chinese-dominance-in-science-technology-sector
ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಚೀನಾ : ಅಧ್ಯಯನ ವರದಿ
author img

By

Published : Mar 9, 2023, 10:58 PM IST

ಬೀಜಿಂಗ್( ಚೀನಾ) : ತಂತ್ರಜ್ಞಾನ ಒಂದು ದೇಶ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತಂತ್ರಜ್ಞಾನ ಬೆಳದಂತೆ ದೇಶಗಳಿಗೆ ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇಂದು ಪ್ರತಿಯೊಂದು ಕ್ಷೇತ್ರವು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ಎಲ್ಲ ದೇಶಗಳು ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ.

ಒಂದು ಕಾಲದಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಭಿವೃದ್ಧಿಯ ಓಟದಲ್ಲಿ ಅಮೇರಿಕಾ, ಜರ್ಮನಿ, ಬ್ರಿಟನ್​ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮುಂಚೂಣಿಯಲ್ಲಿದ್ದವು. ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಉನ್ನತ ತಂತ್ರಜ್ಞಾನಗಳ ಅಭಿವೃಧ್ದಿಯಲ್ಲಿ ಚೀನಾ ಜಗತ್ತಿನಲ್ಲೇ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಥಿಂಕ್ ಟ್ಯಾಂಕ್ ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ ಸಂಸ್ಥೆಯು ಒಂದು ವರ್ಷದ ಅಧ್ಯಯನದ ನಂತರ ಈ ತೀರ್ಮಾನಕ್ಕೆ ಬಂದಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯ : ಈ ಅಧ್ಯಯನದ ಪ್ರಕಾರ, ಈ ಸಂಸ್ಥೆಯು ಸುಮಾರು 44 ಜಾಗತಿಕ ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ನಡೆಸಿದೆ. ಪ್ರಸ್ತುತ ಜಗತ್ತನ್ನು ಸುಧಾರಿಸುವಲ್ಲಿ ಈ ತಂತ್ರಜ್ಞಾನಗಳು ಬಹಳ ಪರಿಣಾಮಕಾರಿಯಾಗಿರುವವು ಎಂದು ಸಂಸ್ಥೆ ಹೇಳಿದೆ. ಈ ಸಂಸ್ಥೆಯ ಅಧ್ಯಯನದ ಪ್ರಕಾರ, ಈ 44 ತಂತ್ರಜ್ಞಾನಗಳಲ್ಲಿ ಚೀನಾ 37 ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿದೆ. ಈ ತಂತ್ರಜ್ಞಾನಗಳು ಎಲೆಕ್ಟ್ರಿಕ್ ಬ್ಯಾಟರಿಗಳು, ಹೈಪರ್‌ಸಾನಿಕ್ಸ್, ಸುಧಾರಿತ ರೇಡಿಯೊ ಫ್ರೀಕ್ವೆನ್ಸಿ ಸಂವಹನ ಸೇವೆಗಳಾದ 5G ಮತ್ತು 6G ಗಳನ್ನು ಒಳಗೊಂಡಿದೆ ಎಂದು ಸಂಸ್ಥೆ ಹೇಳಿದೆ.

ಅಧ್ಯಯನದ ವರದಿ ಪ್ರಕಾರ, ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಉನ್ನತ ತಂತ್ರಜ್ಞಾನ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂದು ಅರ್ಥವಲ್ಲ. ಬದಲಿಗೆ ಈ ದೇಶಗಳು ಪ್ರಪಂಚದಾದ್ಯಂತ ಇರುವ ಪ್ರತಿಭೆಗಳನ್ನು ಆಕರ್ಷಿಸಿ ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. ಇದಕ್ಕಾಗಿ ಸಾಕಷ್ಟು ಹಣವನ್ನು ಹೂಡಿಕೆ ಮಾಡುತ್ತಿದೆ ಎಂದು ಹೇಳಿದೆ. ಇದರ ಹೊರತಾಗಿಯೂ, ಈ ಎಲ್ಲಾ ದೇಶಗಳು ಚೀನಾಕ್ಕಿಂತ ಹಿಂದುಳಿದಿವೆ ಎಂದು ಅದು ಅಭಿಪ್ರಾಯಪಟ್ಟಿದೆ.

ಇನ್ನು ಜಾಗತಿಕ ಆರ್ಥಿಕ ಶಕ್ತಿಯಾಗುವ ದಿಕ್ಕಿನಲ್ಲಿ ಮೂಲಸೌಕರ್ಯ ಮತ್ತು ಆರ್ಥಿಕ ವ್ಯವಹಾರವನ್ನು ಮಾತ್ರ ಹೆಚ್ಚಿಸುವುದಲ್ಲ. ಬದಲಾಗಿ ತಮ್ಮ ಪ್ರತಿಭೆಯನ್ನು ಇನ್ನಷ್ಟು ಉನ್ನತಗೊಳಿಸಲು ಹಾಗೂ ಅವರ ಶೈಕ್ಷಣಿಕ ಸ್ಥಿತಿ ಮತ್ತು ವ್ಯವಸ್ಥೆಯನ್ನು ಸುಧಾರಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ಚೀನಾ ಮನಗಂಡಿದೆ. ಇದರಿಂದಾಗಿ ಇಂದು ಚೀನಾ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಜಗತ್ತಿನಲ್ಲೇ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾದಂತಹ ಪಾಶ್ಚಿಮಾತ್ಯ ದೇಶಗಳು ಚೀನಾದ ಶಕ್ತಿಯನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿವೆ ಎಂದು ಹೇಳಿದೆ.

ದೀರ್ಘಕಾಲೀನ ನೀತಿಗಳ ಅನುಷ್ಠಾನದಿಂದ ಚೀನಾ ಯಶಸ್ಸು : ಈ ವರದಿಯ ಪ್ರಕಾರ, ಚೀನಾವು ತನ್ನ ಪ್ರತಿಭೆ ಮತ್ತು ಜ್ಞಾನಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ. ಚೀನಾದ ಈ ಯಶಸ್ಸಿನ ಹಿಂದೆ ಅದರ ದೀರ್ಘಕಾಲೀನ ನೀತಿಗಳು ಮತ್ತು ಅದರ ಅತ್ಯುತ್ತಮ ಅನುಷ್ಠಾನವೇ ಕಾರಣ. ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅವರ ಹಿಂದಿನ ನಾಯಕರು ಸಂಶೋಧನೆ ಮತ್ತು ವೈಜ್ಞಾನಿಕ ಪ್ರಗತಿಗೆ ಹೆಚ್ಚಿನ ಶ್ರಮವಹಿಸಿದ್ದಾರೆ ಎಂದಿದೆ.

ಅಂಕಿ ಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ವಿಶ್ವದ ಹೆಚ್ಚು ಪರಿಣಾಮಕಾರಿ ಸಂಶೋಧನಾ ಪ್ರಬಂಧಗಳಲ್ಲಿ ಚೀನಾವು ಶೇ. 48.49 ಪಾಲು ಹೊಂದಿದೆ. ಈ ವರದಿಯಲ್ಲಿ ಭಾರತದ ತಾಂತ್ರಿಕ ಸಾಮರ್ಥ್ಯವನ್ನೂ ಉಲ್ಲೇಖಿಸಲಾಗಿದೆ. 44 ತಂತ್ರಜ್ಞಾನಗಳ ಪಟ್ಟಿಯಲ್ಲಿ ನಾಲ್ಕರಲ್ಲಿ ಭಾರತವು ಅಗ್ರಗಣ್ಯ ಐದು ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ 15 ತಂತ್ರಜ್ಞಾನಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದೆ. ಸ್ಮಾರ್ಟ್ ವಸ್ತುಗಳು, ಸಂಯೋಜಿತ ವಸ್ತುಗಳು, ಯಂತ್ರ ಪ್ರಕ್ರಿಯೆಗಳು ಮತ್ತು ಜೈವಿಕ ಇಂಧನಗಳಲ್ಲಿ ಚೀನಾವು ಪ್ರಥಮ ಸ್ಥಾನದಲ್ಲಿದ್ದು, ಭಾರತವು ಎರಡನೇ ಸ್ಥಾನದಲ್ಲಿದೆ. ನ್ಯಾನೊಸ್ಕೇಲ್ ವಸ್ತುಗಳು, ಲೇಪನಗಳನ್ನು ಒಳಗೊಂಡಂತೆ ಇತರ 15 ತಂತ್ರಜ್ಞಾನದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ : ಕ್ಯಾಲಿಫೋರ್ನಿಯಾದಿಂದ ಬೆಂಗಳೂರಿಗೆ ಬಂದಿಳಿದ ನಿಸಾರ್ ಉಪಗ್ರಹ

For All Latest Updates

TAGGED:

tech news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.