ನವದೆಹಲಿ: ಸುಮಾರು 1,800 ಕೋಟಿ ರೂ. ವೆಚ್ಚದ 44 ವಂದೇ ಭಾರತ್ ರೈಲುಗಳ ನಿರ್ಮಾಣಕ್ಕೆ, ಚೀನಾ ಕಂಪನಿ ಒಕ್ಕೂಟ ಮತ್ತು ಭಾರತೀಯ ಸಂಸ್ಥೆಯೊಂದನ್ನು ಬಿಡ್ ಕರೆಯಲು ಅನರ್ಹ ಎಂದು ಭಾರತೀಯ ರೈಲ್ವೆ ಘೋಷಿಸಿದೆ.
ಚೀನಾ ಕಂಪನಿ ಅನರ್ಹಗೊಳಿಸಿದ ನಂತರ ಇದೀಗ ಭೆಲ್ ಮತ್ತು ಮೇಧಾ ಸರ್ವೋ ಡ್ರೈವ್ ಎಂಬ ಎರಡು ಕಂಪನಿಗಳು ಬಿಡ್ಗೆ ಮಾನ್ಯ ಪಡೆದಿವೆ. ಇದೇ ರೀತಿಯ ಮೊದಲ ಎರಡು ರೈಲುಗಳ ಉತ್ಪಾದನೆಗೆ ಗುತ್ತಿಗೆ ಪಡೆದಿದ್ದ ಮೇಧಾ ಕಂಪನಿಯೂ ಅತ್ಯಂತ ಕಡಿಮೆ ಬಿಡ್ನನ್ನು ಕರೆದಿತ್ತು ಎಂದು ಮೂಲಗಳು ತಿಳಿಸಿವೆ.
ಓದಿ:ಟಿಲಿಕಾಂ ಉದ್ಯಮಕ್ಕೆ ವರವಾಗಿ ಆರ್ಥಿಕತೆಗೆ ಪೆಡಂಭೂತವಾದ ಕೊರೊನಾ ವೈರಸ್!
ಈ ಟೆಂಡರ್‌ಗೆ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್, ಭಾರತ್ ಇಂಡಸ್ಟ್ರೀಸ್, ಎಲೆಕ್ಟ್ರೋವೇವ್ಸ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ಎಂಇಡಿಎಚ್‌ಎ ಸರ್ವೊ ಡ್ರೈವ್ಸ್ ಲಿಮಿಟೆಡ್ ಸೇರಿ ಇನ್ನೂ ಕೆಲವು ಕಂಪನಿಗಳು ಬಿಡ್ ಸಲ್ಲಿಸಿವೆ.
ರೈಲ್ವೆ ಟೆಂಡರ್‌ಗಳನ್ನು ಮೌಲ್ಯಮಾಪನ ಮಾಡಲು ಮತ್ತು ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳಲು ಸುಮಾರು ನಾಲ್ಕು ವಾರಗಳನ್ನು ರೈಲ್ವೆ ಇಲಾಖೆ ತೆಗೆದುಕೊಂಡಿದೆ.