ETV Bharat / bharat

ನೆರೆಹೊರೆ ದೇಶದಲ್ಲಿ ಭಾರತದ ಆರ್ಥಿಕ ಯೋಜನೆಗೆ ಡ್ರ್ಯಾಗನ್​ ಅಡ್ಡಗಾಲು: ಮುಂದುವರಿದ ಚೀನಾ ಕುತಂತ್ರ - ಶ್ರೀಕಲಂಕಾ ಪ್ರಧಾನಿ ಮಹೀಂದಾ ರಾಜಪಕ್ಸೆ

ಇತರ ರಾಷ್ಟ್ರಗಳ ಹಿತಾಸಕ್ತಿಗಳನ್ನು ಹಾಳುಮಾಡುವ ಮೂಲಕ ಚೀನಾ ನೆರೆಹೊರೆಯಲ್ಲಿ ಮತ್ತು ಅದರಾಚೆ ತನ್ನ ಹೆಜ್ಜೆಗುರುತುಗಳನ್ನು ಹೇಗೆ ಬೆಳೆಸಿತು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ದ್ವೀಪ ರಾಷ್ಟ್ರದಲ್ಲಿ ಚೀನಾ ಬೃಹತ್ ಬಂದರು ಅಭಿವೃದ್ದಿ ಮತ್ತು ರಸ್ತೆಗಳ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಸಮುದ್ರ ವ್ಯಾಪಾರ ಮಾರ್ಗಗಳ ಮೂಲಕ ಏಷ್ಯಾ, ಯುರೋಪ್ ಮತ್ತು ಅದರಾಚೆ ತನ್ನ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ವಿಸ್ತರಿಸಲು ರಸ್ತೆಗಳ ಸಂಪರ್ಕ ಜಾಲವನ್ನು ರೂಪಿಸುವ ಗುರಿಯನ್ನು ಹೊಂದಿವೆ.

indo china
indo china
author img

By

Published : Feb 6, 2021, 7:57 AM IST

ಹೈದರಾಬಾದ್: ಪೂರ್ವ ಕಂಟೈನರ್ ಟರ್ಮಿನಲ್ (ಇಸಿಟಿ) ಒಪ್ಪಂದದಿಂದ ಹೊರಬರಲು ಶ್ರೀಲಂಕಾ ಸರ್ಕಾರದ ನಿರ್ಧಾರವು ಭಾರತದ ಸಹಯೋಗವನ್ನು ಒಳಗೊಂಡಿರುವ ಯೋಜನೆಗಳನ್ನು ಸ್ಥಗಿತಗೊಳಿಸಲು ಚೀನಾ ಹೇಗೆ ಹವಣಿಸುತ್ತಿದೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆಯಾಗಿದೆ.

ಭಾರತ, ಜಪಾನ್ ಮತ್ತು ಶ್ರೀಲಂಕಾ ನಡುವೆ ಕೊಲಂಬೊ ಬಂದರಿನಲ್ಲಿ ಇಸಿಟಿ ಸ್ಥಾಪಿಸುವ ಸಂಬಂಧ 2018 ರಲ್ಲಿ ಮೈತ್ರಿಪಾಲ ಸಿರಿಸೇನಾ-ರನಿಲ್-ವಿಕ್ರಮಸಿಂಘೆ ಆಡಳಿತದ ಅವಧಿಯಲ್ಲಿ ಒಪ್ಪಂದಕ್ಕೆ ಬರಲಾಗಿತ್ತು. ಮಹೀಂದಾ ರಾಜಪಕ್ಸೆ- ಸಿರಿಸೇನಾ ನೇತೃತ್ವದ ಶ್ರೀಲಂಕಾ ಫ್ರೀಡಂ ಪಾರ್ಟಿ (ಎಸ್‌ಎಲ್‌ಎಫ್‌ಪಿ) ಯಿಂದ ಹೊರಗುಳಿದ ನಂತರ ಈ ಒಪ್ಪಂದಕ್ಕೆ ಬರಲಾಯಿತು. ಎಸ್‌ಎಲ್‌ಎಫ್‌ಪಿಯೊಂದಿಗೆ ಕೈಜೋಡಿಸಿದ ಅಧ್ಯಕ್ಷ ವಿಕ್ರಮಸಿಂಘೆ ಅವರು ಪಾಲುದಾರ ರಾಷ್ಟ್ರಗಳಲ್ಲಿ ಸಹಕಾರ ಒಪ್ಪಂದವಕ್ಕೆ (ಎಂಒಸಿ) ಸಹಿ ಹಾಕಿದ್ದರು.

ಸಚಿವ ಸಂಪುಟ ಸಭೆಯೊಂದರಲ್ಲಿ, ವಿಕ್ರಮಸಿಂಘೆ ಅವರು ಇಸಿಟಿಯನ್ನು ಮೇಲ್ದರ್ಜೆಗೇರಿಸಲು ವಿದೇಶಿ ಹೂಡಿಕೆ ಒಪ್ಪಂದಕ್ಕೆ ಮುಂದಾದಾಗ, ಅವರ ಮತ್ತು ಸಿರಿಸೇನಾ ಅವರ ನಡುವೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗಿತ್ತು. ಈ ಒಪ್ಪಂದವು ಪ್ರಾಥಮಿಕವಾಗಿ ಈ ಪ್ರದೇಶದಲ್ಲಿನ ಚೀನಾದ ಪ್ರಭಾವವನ್ನು ಕಡಿಮೆ ಮಾಡುವುದು ಮತ್ತು ಯೋಜನೆಯಿಂದ ಶ್ರೀಲಂಕಾಕ್ಕೆ ಹೆಚ್ಚಿನ ಲಾಭವನ್ನು ತಂದುಕೊಡುವ ಗುರಿ ಹೊಂದಲಾಗಿತ್ತು. ಪಾಲುದಾರಿಕೆ ಯಶಸ್ವಿಯಾಗಿದ್ದರೆ, ದೇಶವು ಶೇಕಡಾ 100 ರಷ್ಟು ಮಾಲೀಕತ್ವವನ್ನು ಉಳಿಸಿಕೊಳ್ಳಬಹುದಿತ್ತು ಮತ್ತು ಯೋಜನೆಯಲ್ಲಿ 51 ಪ್ರತಿಶತದಷ್ಟು ಪಾಲುದಾರಿಕೆಯ ಪಾಲು ಮಾಲೀಕರೊಂದಿಗೆ ಉಳಿಯುತ್ತಿತ್ತು. ಚೀನಾ ಮತ್ತು ಶ್ರೀಲಂಕಾವನ್ನು ಒಳಗೊಂಡ ಇತರ ಯೋಜನೆಗಳಲ್ಲಿ, ಏಷ್ಯಾದ ಆರ್ಥಿಕ ದೈತ್ಯ ದೇಶವಾಗಿರುವ ಚೀನಾ ಪ್ರಮುಖ ಪಾಲನ್ನು ಹೊಂದಿದೆ.

ಆದಾಗ್ಯೂ, ರಾಜಪಕ್ಸೆ ಸಹೋದರರು ಇಸಿಟಿಯಲ್ಲಿನ ತ್ರಿಪಕ್ಷೀಯ ಒಪ್ಪಂದದ ವಿರುದ್ಧ ನಿರಂತರ ಅಭಿಯಾನವನ್ನು ನಡೆಸಿದರು, ಇದು ಯೋಜನೆಯ ಕುರಿತು ಜನಾಭಿಪ್ರಾಯ ರೂಪುಗೊಂಡಿದಲ್ಲದೆ, ರಾಜಪಕ್ಷೆ ನೇತೃತ್ವದ ಎಸ್ ಎಲ್ ಎಫ್​ ಸಿ ಪಕ್ಷಕ್ಕೆ 2020ರ ಸಾರ್ವತ್ರಿಕ ಚುನಾವಣೆಯಲ್ಲಿ ವಿರೋಧಿಗಳ ವಿರುದ್ದ ಮುನ್ನಡೆ ಸಾಧಿಸಲು ಕಾರಣವಾಯಿತು. ಕೊಲಂಬೊ ಬಂದರಿನಲ್ಲಿ ಇಸಿಟಿ ಒಪ್ಪಂದವನ್ನು ವಿರೋಧಿಸಲು ಇದು ಆಂದೋಲನ, ಬಂದರು ಕಾರ್ಮಿಕ ಸಂಘಟನೆಗಳನ್ನು ಮತ್ತಷ್ಟು ಪ್ರಚೋದಿಸಿತು. ಇದು ರಾಜಪಕ್ಸೆ ಚುನಾವಣಾ ಪ್ರಚಾರದ ಭಾಗವಾಯಿತು ಮತ್ತು ಅವರು ಇಸಿಟಿ ಒಪ್ಪಂದವನ್ನು ರದ್ದುಗೊಳಿಸುವುದಾಗಿ ಆಂದೋಲನ ನಿರತ ಕಾರ್ಮಿಕರಿಗೆ ಭರವಸೆ ನೀಡಿದರು. ರಾಜ್ಯಪಕ್ಸೆ ಅಧಿಕಾರಕ್ಕೆ ಬಂದ ನಂತರ ದ್ವೀಪ ರಾಷ್ಟ್ರದಲ್ಲಿ ಭಾರತದ ಜತೆಗಿನ ದ್ವಿಪಕ್ಷೀಯ ಒಪ್ಪಂದಗಳು ಬದಲಾಗುತ್ತವೆ ಎಂಬುದು ಸಾಕಷ್ಟು ಸ್ಪಷ್ಟವಾಯಿತು.

ಕೊಲಂಬೊ ಇಂಟರ್ನ್ಯಾಷನಲ್ ಕಂಟೇನರ್ ಟರ್ಮಿನಲ್​ಗೆ ಇಸಿಟಿ ಯೋಜನೆ ಬಹಳ ಹತ್ತಿರದಲ್ಲಿರುವುದರಿಂದ ಚೀನಾದ ಕೆಂಗಣ್ಣಿಗೆ ಗುರಿಯಾಯಿತು. ಅಲ್ಲಿ ಚೀನಾ ಶ್ರೀಲಂಕಾದೊಂದಿಗೆ ಪಾಲುದಾರಿಕೆ ಹೊಂದಿದೆ ಮತ್ತು 1.4 ಬಿಲಿಯನ್ ಡಾಲರ್ ಯೋಜನೆಯಲ್ಲಿ ಗರಿಷ್ಠ 84 ಪ್ರತಿಶತದಷ್ಟು ಪಾಲನ್ನು ಈ ಯೋಜನೆಯಲ್ಲಿ ಹೊಂದಿದೆ.

ಇತರ ರಾಷ್ಟ್ರಗಳ ಹಿತಾಸಕ್ತಿಗಳನ್ನು ಹಾಳುಮಾಡುವ ಮೂಲಕ ಚೀನಾ ನೆರೆಹೊರೆಯಲ್ಲಿ ಮತ್ತು ಅದರಾಚೆ ತನ್ನ ಹೆಜ್ಜೆಗುರುತುಗಳನ್ನು ಹೇಗೆ ಬೆಳೆಸಿತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ದ್ವೀಪ ರಾಷ್ಟ್ರದಲ್ಲಿ ಚೀನಾ ಬೃಹತ್ ಬಂದರು ಅಭಿವೃದ್ದಿ ಮತ್ತು ರಸ್ತೆಗಳ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಸಮುದ್ರ ವ್ಯಾಪಾರ ಮಾರ್ಗಗಳ ಮೂಲಕ ಏಷ್ಯಾ, ಯುರೋಪ್ ಮತ್ತು ಅದರಾಚೆ ತನ್ನ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ವಿಸ್ತರಿಸಲು ರಸ್ತೆಗಳ ಸಂಪರ್ಕ ಜಾಲವನ್ನು ರೂಪಿಸುವ ಗುರಿಯನ್ನು ಹೊಂದಿವೆ.

ಚೀನಾ ತನ್ನ ಉದ್ದೇಶಗಳನ್ನು ಈಡೇರಿಸಿಕೊಳ್ಳಬೇಕು ಮತ್ತು ಅದನ್ನು ಯಾರೂ ಪ್ರಶ್ನಿಸಬಾರದು ಎಂದು ಬಯಸುತ್ತದೆ. ಭಾರತದ ಗಾತ್ರ ಮತ್ತು ಭೌಗೋಳಿಕ ರಾಜಕೀಯ ಸ್ಥಾನಮಾನವನ್ನು ಪರಿಗಣಿಸಿದರೆ, ಇದು ನವದೆಹಲಿಯು ಪೂರ್ವನಿಯೋಜಿತವಾಗಿ ಚೀನಾದ ವಿಸ್ತರಣಾ ನೀತಿಗೆ ಸಮರ್ಥ ಸವಾಲಾನ್ನು ಒಡ್ಡುತ್ತದೆ. ಅದಕ್ಕಾಗಿಯೇ ಚೀನಾ ಭಾರತವನ್ನು ಎಲ್ಲೆಡೆ ಭೇಟಿಯಾಡುತ್ತದೆ ಮತ್ತು ರಾಷ್ಟ್ರವನ್ನು ಆರ್ಥಿಕವಾಗಿ ಹಿಮ್ಮೆಟ್ಟಿಸಲು ಭಾರತ ಕೈಗೆತ್ತಿಕೊಂಡಿರುವ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಹಳಿ ತಪ್ಪಿಸಲು ಪ್ರಯತ್ನಿಸುತ್ತದೆ.

ಇಸಿಟಿ ಯೋಜನೆಯನ್ನು ಹೊರತುಪಡಿಸಿದರೆ, ಭಾರತವನ್ನು ತನ್ನ ನಿರ್ಮಾಣ ಸಂಸ್ಥೆಯಾದ ಐಆರ್ಕಾನ್ ಮೂಲಕ ನಿರ್ಮಿಸಲು ಉದ್ದೇಶಿಸಿದ್ದ ಚಬಹಾರ್-ಜಹೇದಾನ್ ರೈಲು ಸಂಪರ್ಕ ಯೋಜನೆಯಿಂದ ಭಾರತವನ್ನು ಹೊರಗಿಡಲು ಚೀನಾ ರಹಸ್ಯವಾಗಿ ಇರಾನಿನ ನಾಯಕರನ್ನು ಭೇಟಿಯಾದ ನಂತರ ರದ್ದಾಯಿತು. ಆದಾಗ್ಯೂ, ಶ್ರೀಲಂಕಾದಂತೆ ನಡೆದುಕೊಳ್ಳದೆ, ಇರಾನ್ ಭಾರತದ ಯೋಜನೆಯನ್ನು ಸಂಪೂರ್ಣವಾಗಿ ರದ್ದುಮಾಡಿಲ್ಲ. ವಾಸ್ತವವಾಗಿ, ಚಾಬಹಾರ್ ಬಂದರಿನಲ್ಲಿ ಭಾರತದ ಚಟುವಟಿಕೆಯು ವಿಶೇಷವಾಗಿ ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ನಿರ್ಗಮಿಸಿದ ನಂತರ ಚುರುಕುಗೊಂಡಿದೆ.

ವಿಭಜನೆಯ ರಾಜಕೀಯ ಲಾಭ ಪಡೆದ ಚೀನಾ:

ರಾಜಪಕ್ಸೆ ಸಹೋದರರು ಹೊಸ ರಾಜಕೀಯ ಪಕ್ಷ ಶ್ರೀಲಂಕಾ ಪೊಡುಜಾನ ಪೆರಮುನಾ (ಎಸ್‌ಎಲ್‌ಪಿಪಿ ಅಥವಾ ಪೀಪಲ್ಸ್ ಫ್ರಂಟ್) ಹುಟ್ಟು ಹಾಕಿದ ಮೇಲೆ ಬೌದ್ಧ-ಸಿಂಹಳಿ ಜನಾಂಗದಲ್ಲಿ ತಮ್ಮ ನೆಲೆಗಟ್ಟನ್ನು ಗಟ್ಟಿಗೊಳಿಸಿಕೊಂಡರು. ಹೊಸ ಪೀಪಲ್ಸ್ ಫ್ರಂಟ್ ದ್ವೀಪ ರಾಷ್ಟ್ರದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಶ್ರೀಲಂಕಾ ಫ್ರೀಡಮ್ ಪಾರ್ಟಿ (ಎಸ್‌ಎಲ್‌ಎಫ್‌ಪಿ) ಮತ್ತು ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್‌ಪಿ) ಗಳ ರಾಜಕೀಯ ಭೂಪಟವನ್ನು ಧೂಳಿಪಟ ಮಾಡಿದೆ. ಮಹಿಂದಾ ರಾಜಪಕ್ಸೆ ಅವರು ಎಸ್‌ಎಲ್‌ಪಿಎಫ್ ಬೆಂಬಲದೊಂದಿಗೆ ಶ್ರೀಲಂಕಾದ ಪ್ರಧಾನ ಮಂತ್ರಿಯಾಗಿದ್ದಾಗಲೇ ರಾಜಪಕ್ಸೆ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ಚೀನಾದ ಆಶೀರ್ವಾದದೊಂದಿಗೆ ತಮ್ಮದೇ ಪಕ್ಷವನ್ನು ಪ್ರಾರಂಭಿಸುವ ಬಗ್ಗೆ ವಿವೇಕದಿಂದ ಯೋಚಿಸಿದವರು ಅವರ ಕಿರಿಯ ಸಹೋದರ.

ಇಲ್ಲದಿದ್ದರೆ, ಮಹಿಂದಾ ಅವರು ಯುದ್ಧ ಅಪರಾಧಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಕಂಬಿ ಎಣಿಸಬೇಕಿತ್ತು. ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರಗಳನ್ನು ಹಿಂಪಡೆಯುವ ಮೂಲಕ ರಾಜಪಕ್ಸೆ ಮತ್ತು ಅವರು ಸಹೋದರರು ಚೀನಾದಿಂದ ಲಾಭ ಪಡೆಯುತ್ತಿದ್ದಾರೆ. ಏಕೆಂದರೆ ಹಿಂದಿನ ಸರ್ಕಾರದ ನಿರ್ಧಾರಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಚೀನಾ ನಂಬಿತ್ತು. ಶ್ರೀಲಂಕಾಗೆ ಭಾರತವನ್ನು ಯಾವುದೇ ಕಾರ್ಯತಂತ್ರದ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದು ಅಷ್ಟೇನೂ ಸಾಧ್ಯವಿಲ್ಲ, ಆದ್ದರಿಂದ ಈ ಪ್ರದೇಶದಲ್ಲಿ ಕೆಲವು ಪರ್ಯಾಯ ಪಾಲುದಾರರನ್ನು ಕಂಡುಹಿಡಿಯುವುದು ಅದಕ್ಕೆ ಅಗತ್ಯವಾಗಿದೆ. ವಾಸ್ತವವಾಗಿ, ಇಸಿಟಿ ಯೋಜನೆಯನ್ನು ಬಿಟ್ಟುಕೊಡುವುದು ಭಾರತಕ್ಕೆ ಸೂಕ್ತವಾದ ನಿರ್ಧಾರವಲ್ಲ. ಕೊಲಂಬೊ ಬಂದರಿನಲ್ಲಿ ಸ್ಥಗಿತಗೊಂಡಿರುವ ಯೋಜನೆಯ ಕುರಿತು ಮಾತುಕತೆ ಮುಂದುವರಿಯಬೇಕು, ಇದು ಭಾರತದ ಕಾರ್ಯಸೂಚಿಯನ್ನು ಮುನ್ನೆಲೆಗೆ ತರುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.