ಮುಂಬೈ: ಚೀನಾ ಕಾನ್ಸುಲೇಟ್ ಜನರಲ್ ಕಾಂಗ್ ಕ್ಸಿಯಾನ್ಹುವಾ ಅವರು ಡಾ.ದ್ವಾರಕಾನಾಥ್ ಕೊಟ್ನಿಸ್ ಅವರ 80ನೇ ಪುಣ್ಯ ಸ್ಮರಣಾರ್ಥ ಅಂಗವಾಗಿ ವಿಶೇಷ ಗೌರವ ಸಲ್ಲಿಸಿದರು. ಭಾರತೀಯ ವೈದ್ಯಕೀಯ ಮಿಷನ್‌ನ ಭಾಗವಾಗಿ ಚೀನಾ ದೇಶದ ಜನರಿಗೆ ಕೊಟ್ನಿಸ್ ಸಲ್ಲಿಸಿದ ಅಪ್ರತಿಮ ಸೇವೆಗೆ ಈ ಗೌರವ ಸಲ್ಲುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಚೀನಾ ಜನರು ಕೊಟ್ನಿಸ್ ಮಾನವೀಯತೆಯನ್ನೂ ಎಂದಿಗೂ ಮರೆಯುವುದಿಲ್ಲ. ದೇಶದ ಫ್ಯಾಸಿಸ್ಟ್ ವಿರೋಧಿ ಯುದ್ಧದ ಅತ್ಯಂತ ಕಷ್ಟಕರ ಸಮಯದಲ್ಲಿ ಚಿಯಾನ್‌ಗೆ ತೆರಳಿದ್ದ ಕೊಟ್ನಿಸ್ ಗಾಯಗೊಂಡವರನ್ನು ರಕ್ಷಿಸಿ ಚಿಕಿತ್ಸೆ ನೀಡಿ, ಅದೆಷ್ಟೋ ಜೀವಗಳನ್ನು ಕಾಪಾಡಿದ್ದರು ಎಂದು ಅವರು ಕೊಂಡಾಡಿದರು.
ಇದನ್ನೂ ಓದಿ : ವಿಶ್ವದಾದ್ಯಂತ ಪಸರಿಸುತ್ತಿರುವ ಚೀನಿ ಹಳೆಯ ಚಿಕಿತ್ಸಾ ಪದ್ಧತಿ