ನವದೆಹಲಿ: ಅಮೆರಿಕ ಮತ್ತು ಚೀನಾ ನಡುವೆ ಜಾಗತಿಕವಾಗಿ ಒನ್ ಅಪ್ ಮ್ಯಾನ್ಶಿಪ್ಗಾಗಿ ನಡೆಯುತ್ತಿರುವ ಹೋರಾಟ ಮತ್ತೊಂದು ತಿರುವು ಪಡೆದುಕೊಂಡಿದೆ. ‘ಎಲ್ಲಾ ರೀತಿಯಲ್ಲೂ ಮಧ್ಯಮ ಸಮೃದ್ಧಿ - ಮಾನವ ಹಕ್ಕುಗಳಲ್ಲಿ ಚೀನಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ’ ಎಂಬ ಶೀರ್ಷಿಕೆಯಡಿ ಡ್ರ್ಯಾಗನ್ ರಾಷ್ಟ್ರ ಶ್ವೇತಪತ್ರವನ್ನು ಬಿಡುಗಡೆ ಮಾಡಿದ್ದು, ವಿಶ್ವದ ದೊಡ್ಡಣ್ಣನಿಗೆ ಟಾಂಗ್ ನೀಡಿದೆ.
ಈ ಪತ್ರದಲ್ಲಿ ಚೀನಾದ ಸಾಮಾಜಿಕ - ಆರ್ಥಿಕ ಜೀವನದ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಬಣ್ಣಿಸಿದೆ. ಮಾನವ ಹಕ್ಕುಗಳನ್ನು ಸಾಮಾಜಿಕ-ಆರ್ಥಿಕ ನಿಯತಾಂಕಗಳೊಂದಿಗೆ ಲಿಂಕ್ ಮಾಡುವ ಮೂಲಕ ಮಾನವ ಹಕ್ಕುಗಳ ಕಲ್ಪನೆಯನ್ನು ಸೂಕ್ತವಾಗಿಸಲು ಚೀನಾ ಪ್ರಯತ್ನಿಸಿದೆ.
ಚೀನಾದಲ್ಲಿ ಪ್ರಾಚೀನ ಪದವಾದ "ಕ್ಸಿಯೋಕಾಂಗ್" ಅನ್ನು ಆಧರಿಸಿ, ಮಧ್ಯಮ ಸಮೃದ್ಧಿಯ ಸ್ಥಿತಿಯನ್ನು ಉಲ್ಲೇಖಿಸಿ, ಜನರಲ್ಲಿ ಶ್ರೀಮಂತರು- ಬಡವರೆಂದು ಇಲ್ಲ. ಆದರೆ ಬಯಕೆ ಮತ್ತು ಶ್ರಮದಿಂದ ಮುಕ್ತರಾಗಿರುತ್ತಾರೆ ಎಂದು ಶ್ವೇತಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಭಾರತ, ಅಮೆರಿಕ ಖಂಡನೆ
ಚೀನಾದ ಈ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ದಾಖಲೆ ನೀಡುವಂತೆ ಆಗ್ರಹಿಸಿದ್ದಾರೆ. ಟ್ರಂಪ್ ಆಡಳಿತದ ಅವಧಿಯಲ್ಲಿ, ಯುಎಸ್ ಸೆನೆಟ್ ಡಿಸೆಂಬರ್ 21, 2020 ರಂದು, ಟಿಬೆಟಿಯನ್ ನೀತಿ ಮತ್ತು ಬೆಂಬಲ ಕಾಯ್ದೆ (TPSA) ಎಂಬ ಮಸೂದೆಯನ್ನು ಅಂಗೀಕರಿಸಿತು. ಈ ಮೂಲಕ ಟಿಬೆಟ್ಗೆ ಬೆಂಬಲ ನೀಡಿತು.
ಟಿಬೆಟ್ ಮತ್ತು ಕ್ಸಿಂಜಿಯಾಂಗ್, ಅಮೆರಿಕ ಮತ್ತು ಭಾರತದಲ್ಲಿ ಹೆಚ್ಚಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಚೀನಾ ಆರೋಪಿಸಿದೆ. ಟಿಬೆಟಿಯನ್ ಬೌದ್ಧ ಧರ್ಮದ ಅಧ್ಯಾತ್ಮಿಕ ನಾಯಕ ದಲೈಲಾಮಾ ಅವರ ಉತ್ತರಾಧಿಕಾರ ಪ್ರಕ್ರಿಯೆಯಲ್ಲಿ ಚೀನಾ ಸರ್ಕಾರವು ಯಾವುದೇ ಪಾತ್ರವನ್ನು ಹೊಂದಿರಬಾರದು ಎಂದು ನಂಬುತ್ತದೆ. ಇದನ್ನು ಧಾರ್ಮಿಕ ಸ್ವಾತಂತ್ರ್ಯದ ಅತಿರೇಕದ ದುರುಪಯೋಗ ಎಂದು ಭಾವಿಸಿದೆ.
2011 ರಲ್ಲಿ, ಲಾಸಾದಲ್ಲಿ ಚಿನ್ನದ ಕಲಶದಿಂದ ಚೀಟಿ ಎತ್ತುವ ಮೂಲಕ ಮುಂದಿನ ದಲೈಲಾಮಾ ಅವರನ್ನು ಅನುಮೋದಿಸುವ ಮತ್ತು ನೇಮಿಸುವ ಏಕೈಕ ಹಕ್ಕನ್ನು ಚೀನಾ ಹೇಳಿಕೊಂಡಿತ್ತು.
ಇತ್ತೀಚೆಗೆ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್, ಜುಲೈ 28 ರಂದು ಭಾರತಕ್ಕೆ ಭೇಟಿ ನೀಡಿದ್ದಾಗ ದೆಹಲಿಯ ದಲೈಲಾಮಾ ಬ್ಯೂರೋದ ನಿರ್ದೇಶಕ ಕಾಸೂರ್ ಎನ್‌ಗೊಡುಪ್ ಡೊಂಗ್‌ಚುಂಗ್ ಅವರನ್ನು ಭೇಟಿಯಾಗಿದ್ದರು. ಚೀನಾ ಸರ್ಕಾರದ ಕಿರುಕುಳಕ್ಕೆ ಹೆದರಿ ತಮ್ಮ ತಾಯ್ನಾಡನ್ನು ತೊರೆದ ಟಿಬೆಟಿಯನ್ನರಿಗೆ ಭಾರತ ಮುಖ್ಯ ನೆಲೆಯಾಗಿದೆ.
ಧರ್ಮ ಮತ್ತು ಭಾಷೆ
ಅದು ಡಿಸೆಂಬರ್ 1979 ರಲ್ಲಿ, ಡೆಂಗ್ ಕ್ಸಿಯಾಪಿಂಗ್ 'ಕ್ಸಿಯೋಕಾಂಗ್' ಸಮಾಜವನ್ನು ನಿರ್ಮಿಸಿದರು. ಜುಲೈ 1, 2021 ರಂದು, ಸಿಪಿಸಿ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಚೀನಾ ಎಲ್ಲ ರೀತಿಯಲ್ಲೂ "ಮಧ್ಯಮ ಸಮೃದ್ಧ ಸಮಾಜವನ್ನು" ನಿರ್ಮಿಸಿದೆ ಎಂದು ಘೋಷಿಸಿದರು.
ಚೀನೀ ಸರ್ಕಾರವು ಎಲ್ಲ ಧಾರ್ಮಿಕ ಗುಂಪುಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಮತ್ತು ಕಾನೂನಿನೊಳಗೆ ಧಾರ್ಮಿಕ ಚಟುವಟಿಕೆಗಳನ್ನು ನಡೆಸಬೇಕು ಎಂಬ ತತ್ವವನ್ನು ಎತ್ತಿಹಿಡಿಯುತ್ತದೆ. ಇದು ರಾಜ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಗಳನ್ನು ಒಳಗೊಂಡ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುತ್ತದೆ, ಆದರೆ, ಧರ್ಮಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
ಚೀನಾ ಧಾರ್ಮಿಕ ಉಗ್ರವಾದ ಮತ್ತು ಧರ್ಮದ ನೆಪದಲ್ಲಿ ವರ್ತಿಸುವ ಪಂಥಗಳಿಗಾಗಿ ಹೋರಾಡುತ್ತದೆ. ಧಾರ್ಮಿಕ ಚಟುವಟಿಕೆಗಳಿಗಾಗಿ 1,44,000 ನೋಂದಾಯಿತ ತಾಣಗಳನ್ನು ಹೊಂದಿದೆ. 92 ಧಾರ್ಮಿಕ ಅಕಾಡೆಮಿಗಳು, ಬೌದ್ಧಧರ್ಮ, ಟಾವೊ ತತ್ತ್ವ, ಇಸ್ಲಾಂ, ಕ್ಯಾಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಮತ್ತು ಇತರ ಧರ್ಮಗಳನ್ನು ನಂಬಿರುವ ಸುಮಾರು 200 ಮಿಲಿಯನ್ ನಾಗರಿಕರು ಇಲ್ಲಿ ವಾಸಿಸುತ್ತಿದ್ದಾರೆ.
ವಿರೋಧಾಭಾಸ?
ಶ್ವೇತಪತ್ರದಲ್ಲಿ ಪ್ರಸ್ತುತಪಡಿಸಲಾಗಿರುವ ಇತ್ತೀಚಿನ ನಿಲುವು, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಕಾನೂನು ವ್ಯವಹಾರಗಳ ಸಮಿತಿಯ ನಿರ್ದೇಶಕರಾದ ಶೆನ್ ಚುಂಗ್ಯಾವ್ ಅವರು 2021 ರ ಜನವರಿ 20 ರಂದು ಘೋಷಿಸಿದ ವಿಷಯಕ್ಕೆ ವಿರುದ್ಧವಾಗಿದೆ.