ETV Bharat / bharat

ಮೌಂಟ್ ಎವರೆಸ್ಟ್‌ನ ಬೃಹತ್ ಲಿಥಿಯಂ ನಿಧಿಯ ಮೇಲೆ ಕಣ್ಣಿಟ್ತಾ ಚೀನಾ!? - ಮೌಂಟ್ ಎವರೆಸ್ಟ್ ಬಳಿ ಬೃಹತ್ ಲಿಥಿಯಂ ನಿಕ್ಷೇಪಗಳ ಗಣಿ ಪತ್ತೆ

ಮೌಂಟ್ ಎವರೆಸ್ಟ್ ಬಳಿ ಬೃಹತ್ ಲಿಥಿಯಂ ನಿಕ್ಷೇಪಗಳ ಗಣಿ ಇರುವುದನ್ನು ಚೀನಾ ಪತ್ತೆ ಹಚ್ಚಿದೆ. ಚೀನಾ ಸಂಗ್ರಹಿಸಿದ 59 ಬಂಡೆಗಳ ಮಾದರಿಯಲ್ಲಿ 44ರಲ್ಲಿ ಲಿಥಿಯಂ ಪತ್ತೆಯಾಗಿದೆ..

China eyes Mt Everests huge lithium treasure
ಮೌಂಟ್ ಎವರೆಸ್ಟ್‌ನ ಬೃಹತ್ ಲಿಥಿಯಂ ನಿಧಿಯ ಮೇಲೆ ಕಣ್ಣಿಟ್ತಾ ಚೀನಾ
author img

By

Published : Feb 18, 2022, 6:40 PM IST

ನವದೆಹಲಿ : ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (ಸಿಎಎಸ್) ವಿಶ್ವದ ಅತಿ ಎತ್ತರದ ಶಿಖರದ ಉತ್ತರದಲ್ಲಿರುವ ಟಿಬೆಟಿಯನ್ ಪ್ರದೇಶದಲ್ಲಿ ಸಂಶೋಧನೆ ನಡೆಸಿದ್ದು, 59 ಬಂಡೆಗಳ ಮಾದರಿಯನ್ನು ಸಂಗ್ರಹಿಸಿದೆ. ಇದರಲ್ಲಿ 44 ಬಂಡೆಗಳಲ್ಲಿ ಲಿಥಿಯಂ ಅಂಶ ಹೆಚ್ಚಾಗಿರುವುದು ಕಂಡು ಬಂದಿದೆ.

ಲ್ಯಾಪ್‌ಟಾಪ್‌, ಸೆಲ್ ಫೋನ್‌ಗಳ ಬ್ಯಾಟರಿ, ಗಾಜು, ಪಿಂಗಾಣಿ ಉದ್ಯಮದಲ್ಲಿ ಮತ್ತು ಎಲೆಕ್ಟ್ರಿಕ್ ವಾಹನಗಳ (ಇವಿ) ಬ್ಯಾಟರಿಗಳನ್ನು ತಯಾರಿಸಲು ಲಿಥಿಯಂ ಅನಿವಾರ್ಯವಾಗಿದೆ. ಹಿಮಾಲಯವು ಇಂತಹ ಅಪರೂಪದ ಖಜಿಜ ಸಂಪತ್ತಿನ ಪ್ರಮುಖ ಶೇಖರಣಾ ತಾಣವಾಗಿದೆ ಎಂದು ಅಧ್ಯಯನವು ಸೂಚಿಸಿದೆ.

ಹೊಸ ಜಾಗತಿಕ ಇಂಧನ ಉದ್ಯಮಕ್ಕೆ ಸಂಪನ್ಮೂಲವನ್ನು ಬಳಸಿಕೊಳ್ಳುವ ಪ್ರಯತ್ನದಲ್ಲಿ, ಈ ಆವಿಷ್ಕಾರವು ಚೀನೀಯರ ಆಸಕ್ತಿಯನ್ನು ಹೆಚ್ಚಿಸಿದೆ. ಇತ್ತೀಚೆಗೆ ಸಿಎಎಸ್​​ನ ಅಧ್ಯಯನವು, ಮೌಂಟ್ ಎವರೆಸ್ಟ್ ಪ್ರದೇಶದಲ್ಲಿ ಗಮನಾರ್ಹವಾದ ಹವಾಮಾನ ಬದಲಾವಣೆಯಾಗಿರುವುದನ್ನು ಕಂಡು ಹಿಡಿದಿದೆ. 1961 ರಿಂದ 2018ರವರೆಗಿನ ಹವಾಮಾನ ಅವಲೋಕನಗಳ ಆಧಾರದ ಮೇಲೆ ಈ ಪ್ರದೇಶದಲ್ಲಿ ಪ್ರಸ್ತುತ ಹಿಮನದಿ ಪ್ರದೇಶಗಳು 3,266ಕ್ಕೆ ಕುಗ್ಗಿವೆ ಎನ್ನಲಾಗ್ತಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸ್ಟೀಲ್​ ಪ್ಲಾಂಟ್​ನಲ್ಲಿ ಅನಿಲ ಸೋರಿಕೆಯಾಗಿ ಐವರು ಕಾರ್ಮಿಕರ ದುರ್ಮರಣ

ಲಿಥಿಯಂ ನಿಕ್ಷೇಪದ ಆವಿಷ್ಕಾರದ ಬಗ್ಗೆ ಮೊದಲ ವಿವರವನ್ನು ನವೆಂಬರ್ 2021ರಲ್ಲಿ CAS-ಬೆಂಬಲಿತ ಜರ್ನಲ್ 'ರಾಕ್'ನಲ್ಲಿ ಪ್ರಕಟಿಸಲಾಯಿತು. ಯಾವುದೇ ಲಿಥಿಯಂ ಆಕ್ಸೈಡ್ ಅಂಶವು ಶೇ.0.8ಕ್ಕಿಂತ ಹೆಚ್ಚಿದ್ದರೇ, ಕೈಗಾರಿಕಾ ಮೌಲ್ಯವೆಂದು ಪರಿಗಣಿಸಲ್ಪಟ್ಟಿದ್ದರೂ, ಈ ಅಧ್ಯಯನದಲ್ಲಿ ಲಿಥಿಯಂ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ.

CAS ಸಂಶೋಧನೆಯು ಆಸ್ಟ್ರೇಲಿಯಾದ ಮಿನರಲ್ ಲ್ಯಾಬೊರೇಟರಿ ಮತ್ತು ವುಹಾನ್ ಅಪ್ಪರ್ ಸ್ಪೆಕ್ಟ್ರಾ ಅನಾಲಿಸಿಸ್ ಟೆಕ್ನಾಲಜಿ ಲಿಮಿಟೆಡ್ ನಡೆಸಿದ ಪರೀಕ್ಷೆಗಳಲ್ಲಿ ಮತ್ತಷ್ಟು ದೃಢೀಕರಿಸಲ್ಪಟ್ಟಿದೆ. ಚೈನೀಸ್ ಜರ್ನಲ್ ಆಫ್ ಸೈನ್ಸ್ ಪ್ರಕಾರ, ಲಿಥಿಯಂ ಆಕ್ಸೈಡ್ ಸಂಪನ್ಮೂಲ ಸುಮಾರು 10,12,500 ಟನ್ ಇರಬಹುದು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.