ನವದೆಹಲಿ : ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಿಂದ 17 ವರ್ಷದ ಯುವಕನನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಪಹರಿಸಿದೆ ಎನ್ನುವ ಬಗ್ಗೆ ತನಗೆ ತಿಳಿದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ. ಆದರೆ, ಪಿಎಲ್‌ಎ ಗಡಿಗಳನ್ನು ನಿಯಂತ್ರಿಸುತ್ತದೆ ಹಾಗೆ ಅಕ್ರಮ ಪ್ರವೇಶವನ್ನು ಭೇದಿಸುತ್ತದೆ ಎಂದು ಇದೇ ವೇಳೆ ಉಲ್ಲೇಖ ಮಾಡಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮಂಗಳವಾರ ಸಿಯುಂಗ್ಲಾ ಪ್ರದೇಶದ ಲುಂಗ್ಟಾ ಜೋರ್ ಪ್ರದೇಶದಿಂದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಮಿರಾಮ್ ಟ್ಯಾರೋನ್ ಎಂದು ಗುರುತಿಸಲಾದ ಹದಿಹರೆಯದವನನ್ನು ಅಪಹರಿಸಲಾಗಿದೆ ಎಂದು ಅರುಣಾಚಲ ಪ್ರದೇಶದ ಸಂಸದ ತಪಿರ್ ಗಾವೊ ಆರೋಪಿಸಿದ್ದರು.
ಆ ವೇಳೆ ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಟ್ಯಾರನ್‌ನ ಸ್ನೇಹಿತ ಜಾನಿ ಯಾಯಿಂಗ್ ಪಿಎಲ್‌ಎಯಿಂದ ಆದ ಅಪಹರಣದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎಂದೂ ಸಹ ಗಾವೊ ಮಾಧ್ಯಮಗಳಿಗೆ ತಿಳಿಸಿದ್ದರು.
ಇದನ್ನೂ ಓದಿ: ಅರುಣಾಚಲ ಪ್ರದೇಶದ ಬಾಲಕ ನಾಪತ್ತೆ ವಿಚಾರ; ತರೋಣ್ ಹುಡುಕಿ ಕೊಡುವಂತೆ ಭಾರತ ಸೇನೆ ಮನವಿ
ಈ ಸಂಬಂಧ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರನ್ನು ಪ್ರಶ್ನಿಸಿದಾಗ ನನಗೆ ಪರಿಸ್ಥಿತಿ ತಿಳಿದಿಲ್ಲ ಎಂದು ಹೇಳಿದ್ದಾರೆ. ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿಯು ಕಾನೂನಿಗೆ ಅನುಸಾರವಾಗಿ ಗಡಿಗಳನ್ನು ನಿಯಂತ್ರಿಸುತ್ತದೆ ಮತ್ತು ಅಕ್ರಮ ಪ್ರವೇಶ ಮತ್ತು ನಿರ್ಗಮನ ಚಟುವಟಿಕೆಗಳನ್ನು ಭೇದಿಸುತ್ತದೆ ಎಂದು ಇದೇ ವೇಳೆ ಹೇಳಿದರು.
ಕಾಣೆಯಾದ ಹುಡುಗನನ್ನು ತಮ್ಮ ಕಡೆಯಿಂದ ಪತ್ತೆಹಚ್ಚಲು ಮತ್ತು ಸ್ಥಾಪಿತ ಪ್ರೋಟೋಕಾಲ್ ಪ್ರಕಾರ ಅವನನ್ನು ಹಿಂದಿರುಗಿಸಲು ಭಾರತೀಯ ಸೇನೆಯು ಪಿಎಲ್‌ಎಯಿಂದ ನೆರವು ಕೋರಿರುವ ಹಿನ್ನೆಲೆ ಚೀನಾದ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಬಂದಿದೆ.