ETV Bharat / bharat

ಮಕ್ಕಳ ಆರೋಗ್ಯ - ಯೋಗಕ್ಷೇಮದಲ್ಲಿ ಪೌಷ್ಟಿಕ ಆಹಾರಗಳ ಪಾತ್ರ - ಯುಇಎ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಪಾಲುದಾರ

ಪೌಷ್ಟಿಕಾಂಶ ಮತ್ತು ದೈಹಿಕ ಆರೋಗ್ಯದ ನಡುವಿನ ಸಂಬಂಧವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದ್ದರೂ, ಮಕ್ಕಳ ಭಾವನಾತ್ಮಕ ಯೋಗಕ್ಷೇಮದಲ್ಲಿ ಪೌಷ್ಟಿಕಾಂಶವು ಒಂದು ಪಾತ್ರ ವಹಿಸುತ್ತದೆ ಎಂಬ ಬಗ್ಗೆ ಇಲ್ಲಿಯವರೆಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಆದ್ದರಿಂದ, ಶಾಲಾ ಮಕ್ಕಳಲ್ಲಿ ಆಹಾರದ ಆಯ್ಕೆಗಳು ಮತ್ತು ಮಾನಸಿಕ ಯೋಗ ಕ್ಷೇಮದ ನಡುವಿನ ಸಂಬಂಧವನ್ನು ತನಿಖೆ ಮಾಡಲು ಮುಂದಾಗಿದ್ದಾರೆ.

kids health
ಪೌಷ್ಠಿಕ ಆಹಾರಗಳ ಪಾತ್ರ
author img

By

Published : Sep 30, 2021, 10:38 AM IST

ಮಕ್ಕಳು ಮತ್ತು ಯುವಜನರಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಆಧುನಿಕ ಶಾಲಾ ಸಂಸ್ಕೃತಿಯ ಒತ್ತಡಗಳು ಕಡಿಮೆ ಮಾನಸಿಕ ಸ್ವಾಸ್ಥ್ಯದ ಹೆಚ್ಚಳಕ್ಕೆ ಸಂಭವನೀಯ ಕಾರಣಗಳಾಗಿವೆ. ಆರಂಭಿಕ ಜೀವನದಲ್ಲಿ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಪ್ರಾಮುಖ್ಯತೆಯ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆಯಿದೆ. ಏಕೆಂದರೆ ಹದಿಹರೆಯದವರ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಪ್ರೌಢಾವಸ್ಥೆಯಲ್ಲಿ ಮುಂದುವರೆಯುತ್ತವೆ.

ಇದು ಬಡ ಜೀವನದ ಫಲಿತಾಂಶಗಳು ಮತ್ತು ಸಾಧನೆಗೆ ಕಾರಣವಾಗುತ್ತದೆ ಎಂದು ನಾರ್ಫೋಕ್ ಕೌಂಟಿ ಕೌನ್ಸಿಲ್ ಸಹಯೋಗದೊಂದಿಗೆ ಯುಇಎ ಆರೋಗ್ಯ ಮತ್ತು ಸಾಮಾಜಿಕ ಆರೈಕೆ ಪಾಲುದಾರರ ನೇತೃತ್ವದ ಅಧ್ಯಯನ ನಡೆಸಿದ ವರದಿಯಲ್ಲಿ ಉಲ್ಲೇಖವಾಗಿದೆ. ಇದನ್ನು ಪೂರ್ವ ಆಂಗ್ಲಿಯಾ ವಿಶ್ವವಿದ್ಯಾಲಯವು ಪ್ರಕಟಿಸಿದೆ.

ಸಂಶೋಧನಾ ತಂಡವು 50 ಶಾಲೆಗಳ ಸುಮಾರು 9,000 ಮಕ್ಕಳ (7,570 ಮಾಧ್ಯಮಿಕ ಮತ್ತು 1,253 ಪ್ರಾಥಮಿಕ ಶಾಲಾ ಮಕ್ಕಳು)ಆರೋಗ್ಯ ಮತ್ತು ಯೋಗಕ್ಷೇಮ ಸಮೀಕ್ಷೆಯನ್ನು ಮಾಡಿ, ಈ ಡೇಟಾ ಬಿಡುಗಡೆ ಮಾಡಿದೆ.

ಪೌಷ್ಠಿಕಾಂಶ ಮತ್ತು ದೈಹಿಕ ಆರೋಗ್ಯದ ನಡುವಿನ ಸಂಬಂಧವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿದ್ದರೂ, ಮಕ್ಕಳ ಭಾವನಾತ್ಮಕ ಯೋಗಕ್ಷೇಮದಲ್ಲಿ ಪೌಷ್ಟಿಕಾಂಶವು ಒಂದು ಪಾತ್ರವನ್ನು ವಹಿಸುತ್ತದೆ ಎಂಬ ಬಗ್ಗೆ ಇಲ್ಲಿಯವರೆಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಆದ್ದರಿಂದ, ಶಾಲಾ ಮಕ್ಕಳಲ್ಲಿ ಆಹಾರದ ಆಯ್ಕೆಗಳು ಮತ್ತು ಮಾನಸಿಕ ಯೋಗಕ್ಷೇಮದ ನಡುವಿನ ಸಂಬಂಧವನ್ನು ತನಿಖೆ ಮಾಡಲು ಮುಂದಾಗಿದ್ದಾರೆ.

ಸಂಶೋಧನೆ ವೇಳೆ ಕಂಡು ಬಂದ ಅಂಶವೇನು?

ಯುಇಎ ನ ನಾರ್ವಿಚ್ ಮೆಡಿಕಲ್ ಸ್ಕೂಲಿನ ಡಾ. ರಿಚರ್ಡ್ ಹೇಹೋ ಈ ಬಗ್ಗೆ ಮಾತನಾಡಿದ್ದು, "ಐದರಲ್ಲಿ ಒಂದಕ್ಕಿಂತ ಹೆಚ್ಚು ಪ್ರೌಢಶಾಲಾ ಮಕ್ಕಳು ಮತ್ತು 10 ಪ್ರಾಥಮಿಕ ಮಕ್ಕಳಲ್ಲಿ ಒಬ್ಬರು ಬೆಳಗಿನ ಉಪಾಹಾರ ಸೇವಿಸಲಿಲ್ಲ. ಮತ್ತು 10 ಪ್ರೌಢ ಶಾಲಾ ಮಕ್ಕಳಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಊಟವನ್ನು ಸೇವಿಸಲಿಲ್ಲ.

ಈ ಸಂದರ್ಭದಲ್ಲಿ ತಂಡವು ಪೌಷ್ಠಿಕಾಂಶದ ಅಂಶಗಳು ಮತ್ತು ಮಾನಸಿಕ ಯೋಗಕ್ಷೇಮದ ನಡುವಿನ ಸಂಬಂಧವನ್ನು ನೋಡಿದೆ. ಬಾಲ್ಯದ ಪ್ರತಿಕೂಲ ಅನುಭವಗಳು ಮತ್ತು ಮನೆಯ ಸನ್ನಿವೇಶಗಳಂತಹ ಪರಿಣಾಮ ಬೀರುವ ಇತರ ಅಂಶಗಳನ್ನು ಗಣನೆಗೆ ತೆಗೆದುಕೊಂಡಿತು.

ಸಾಂಪ್ರದಾಯಿಕ ಉಪಹಾರ vs ಪಾನೀಯ ಸೇವನೆ

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ತಿನ್ನುವ ಉಪಹಾರ ಮತ್ತು ಊಟದ ವಿಧಗಳು ಸಹ ಯೋಗಕ್ಷೇಮದೊಂದಿಗೆ ಗಮನಾರ್ಹವಾಗಿ ಸಂಬಂಧಿಸಿವೆ. ಸಾಂಪ್ರದಾಯಿಕ ಉಪಹಾರವನ್ನು ಸೇವಿಸಿದ ಮಕ್ಕಳು ಕೇವಲ ತಿಂಡಿ ಅಥವಾ ಪಾನೀಯ ಸೇವಿಸುವವರಿಗಿಂತ ಉತ್ತಮ ಯೋಗಕ್ಷೇಮ ಹೊಂದಿದ್ದರು. ಆದರೆ ಉಪಹಾರಕ್ಕಾಗಿ ಎನರ್ಜಿ ಡ್ರಿಂಕ್ಸ್ ಸೇವಿಸಿದ ಮಾಧ್ಯಮಿಕ ಶಾಲಾ ಮಕ್ಕಳು ವಿಶೇಷವಾಗಿ ಕಡಿಮೆ ಮಾನಸಿಕ ಯೋಗಕ್ಷೇಮದ ಅಂಕಗಳನ್ನು ಹೊಂದಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಯಾವುದೇ ಉಪಹಾರ ಸೇವಿಸದ ಮಕ್ಕಳಿಗಿಂತಲೂ ಕಡಿಮೆ ಆರೋಗ್ಯ ಕ್ಷೇಮ ಹೊಂದಿದ್ದರು ಎನ್ನುವುದು ಇನ್ನೂ ಆಘಾತಕಾರಿ ವಿಷಯ.

ಕೆಲ ಆಘಾತಕಾರಿ ಅಂಶಗಳೂ ಬಯಲು

ಮಾಹಿತಿ ಪ್ರಕಾರ, 30 ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಸುಮಾರು 21 ಮಂದಿ ಸಾಂಪ್ರದಾಯಿಕ ರೀತಿಯ ಉಪಹಾರ ಸೇವಿಸುತ್ತಾರೆ. ಕನಿಷ್ಠ ನಾಲ್ವರು ಬೆಳಗ್ಗೆ ತರಗತಿಗಳನ್ನು ಪ್ರಾರಂಭಿಸುವ ಮೊದಲು ಏನನ್ನು ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ. ಅದೇ ರೀತಿ, ಕನಿಷ್ಠ ಮೂರು ವಿದ್ಯಾರ್ಥಿಗಳು ಮಧ್ಯಾಹ್ನದ ತರಗತಿಯಲ್ಲಿ ಊಟವನ್ನೇ ಮಾಡದಿರುವ ಅಂಶ ಕಂಡು ಬಂದಿದೆ. ಇದು ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ಷಮತೆ ಮಾತ್ರವಲ್ಲದೇ ದೈಹಿಕ ಬೆಳವಣಿಗೆ ಹಾಗೂ ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.