ETV Bharat / bharat

ಹವಾಮಾನ ಬಿಕ್ಕಟ್ಟಿನಿಂದ ಅತ್ಯಂತ ಅಪಾಯದಲ್ಲಿದ್ದಾರೆ ಭಾರತದ ಮಕ್ಕಳು : UNICEF REPORT - ದಕ್ಷಿಣ ಏಷ್ಯಾದ ರಾಷ್ಟ್ರಗಳು

ಭಾರತದ ನೆರೆಯ ನೇಪಾಳ 51ನೇ ಮತ್ತು ಶ್ರೀಲಂಕಾ 61ನೇ ಸ್ಥಾನದಲ್ಲಿವೆ. ತುಲನಾತ್ಮಕವಾಗಿ ಕಡಿಮೆ ಅಪಾಯದಲ್ಲಿರುವ ಮಕ್ಕಳು ಇರುವ ದೇಶ ಎನಿಸಿರುವ ಭೂತಾನ್ 111ನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ, ದಕ್ಷಿಣ ಏಷ್ಯಾದ ಲಕ್ಷಾಂತರ ಮಕ್ಕಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ನಾವು ಹೊಂದಿದ್ದೇವೆ..

http://10.10.50.80:6060//finalout3/odisha-nle/thumbnail/21-August-2021/12839218_402_12839218_1629554109060.png
ಯುನಿಸೆಫ್
author img

By

Published : Aug 21, 2021, 9:30 PM IST

ನವದೆಹಲಿ : ಹವಾಮಾನ ಬದಲಾವಣೆಯ ಕಾರಣದಿಂದ ಮಕ್ಕಳು ಅಪಾಯ ಎದುರಿಸುತ್ತಿರುವ ದಕ್ಷಿಣ ಏಷ್ಯಾ ದೇಶಗಳಲ್ಲಿ ಭಾರತ ಕೂಡ ಸೇರಿದೆ ಎಂದು ಯುನಿಸೆಫ್ ವರದಿ ತಿಳಿಸಿದೆ. ಹವಾಮಾನ ವೈಪರೀತ್ಯ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ರಕ್ಷಣೆಗೆ ಬೆದರಿಕೆ ಉಂಟು ಮಾಡುತ್ತಿದೆ ಎಂದು ವರದಿ ತಿಳಿಸಿದೆ.

ಮಕ್ಕಳ ಮೇಲೆ ಕೇಂದ್ರೀಕರಿಸಿದ ಯುನಿಸೆಫ್‌ನ ಮೊದಲ 'ಹವಾಮಾನ ಬಿಕ್ಕಟ್ಟು ಮಕ್ಕಳ ಹಕ್ಕುಗಳ ಬಿಕ್ಕಟ್ಟು: ಮಕ್ಕಳ ಹವಾಮಾನ ಅಪಾಯ ಸೂಚ್ಯಂಕದ ಪರಿಚಯ (ಸಿಸಿಆರ್‌ಐ) ವರದಿಯಲ್ಲಿ ದೇಶಗಳ ಆಧಾರದಲ್ಲಿ ಚಂಡಮಾರುತ ಮತ್ತು ಉಷ್ಣಗಾಳಿಯಂತಹ ಹವಾಮಾನ ಮತ್ತು ಪರಿಸರ ಆಘಾತಗಳಿಗೆ ಮಕ್ಕಳು ಎದುರಾಗುವುದು ಹಾಗೂ ಅಗತ್ಯ ಸೇವೆಗಳನ್ನು ಪಡೆಯುವ ಅವರ ಅವಕಾಶದ ಮೇಲಿನ ಸಮಸ್ಯೆಗಳ ಕುರಿತಾಗಿ ವಿವರಿಸಲಾಗಿದೆ.

ಹವಾಮಾನ ಬಿಕ್ಕಟ್ಟಿನಿಂದ ಮಕ್ಕಳು ಅತೀವ ಅಪಾಯಕ್ಕೆ ಸಿಲುಕಿರುವ ದೇಶಗಳ ಪೈಕಿ ದಕ್ಷಿಣ ಏಷ್ಯಾದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಭಾರತ ಸ್ಥಾನ ಪಡೆದಿವೆ. ಇವು ಕ್ರಮವಾಗಿ 14, 15, 25 ಮತ್ತು 26ನೇ ಸ್ಥಾನದಲ್ಲಿವೆ.

ಮಹಿಳೆಯರು ಹಾಗೂ ಮಕ್ಕಳ ಮೇಲೆ ಸಮಾಜೋ-ಆರ್ಥಿಕವಾಗಿ ಕೆಟ್ಟ ಪರಿಣಾಮಗಳಿಗೆ ಎಡೆಮಾಡಿ ಕೊಡುವ ಪುನರಾವರ್ತಿತ ಪರಿಸರ ಆಘಾತಗಳಾದ ಪ್ರವಾಹ ಮತ್ತು ವಾಯು ಮಾಲಿನ್ಯದಿಂದ ಅತ್ಯಂತ ಹೆಚ್ಚು ಅಪಾಯಕ್ಕೆ ಸಿಲುಕಿರುವ 33 ದೇಶಗಳಲ್ಲಿ ಭಾರತವೂ ಒಂದಾಗಿದೆ. ದಕ್ಷಿಣ ಏಷ್ಯಾದ ಈ ನಾಲ್ಕು ದೇಶಗಳು ಒಳಗೊಂಡಂತೆ 33 ದೇಶಗಳ ಅಂದಾಜು ನೂರು ಕೋಟಿ ಮಕ್ಕಳ ಜೀವ ಅಪಾಯದಲ್ಲಿದೆ ಎಂದು ವರದಿ ಹೇಳಿದೆ.

ಮುಂಬರುವ ವರ್ಷಗಳಲ್ಲಿ 60 ಕೋಟಿಗೂ ಅಧಿಕ ಭಾರತೀಯರು ತೀವ್ರ ನೀರಿನ ಕೊರತೆಗೆ ಒಳಗಾಗಲಿದ್ದಾರೆ. ಅದೇ ವೇಳೆ ಜಾಗತಿಕ ತಾಪಮಾನವು ಶೇ.2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಭಾರತದ ಬಹುತೇಕ ನಗರ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಕೂಡ ಹೆಚ್ಚಲಿದೆ. 2020ರಲ್ಲಿ ಜಗತ್ತಿನ ಅತ್ಯಂತ ಹೆಚ್ಚು ವಾಯುಮಾಲಿನ್ಯ ಉಂಟಾದ 30 ನಗರಗಳಲ್ಲಿ 21 ಭಾರತದ್ದಾಗಿವೆ.

ಭಾರತದ ನೆರೆಯ ನೇಪಾಳ 51ನೇ ಮತ್ತು ಶ್ರೀಲಂಕಾ 61ನೇ ಸ್ಥಾನದಲ್ಲಿವೆ. ತುಲನಾತ್ಮಕವಾಗಿ ಕಡಿಮೆ ಅಪಾಯದಲ್ಲಿರುವ ಮಕ್ಕಳು ಇರುವ ದೇಶ ಎನಿಸಿರುವ ಭೂತಾನ್ 111ನೇ ಸ್ಥಾನದಲ್ಲಿದೆ. ಮೊದಲ ಬಾರಿಗೆ, ದಕ್ಷಿಣ ಏಷ್ಯಾದ ಲಕ್ಷಾಂತರ ಮಕ್ಕಳ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಸ್ಪಷ್ಟ ಸಾಕ್ಷ್ಯಾಧಾರಗಳನ್ನು ನಾವು ಹೊಂದಿದ್ದೇವೆ.

ಬರ, ಪ್ರವಾಹ, ವಾಯು ಮಾಲಿನ್ಯ ಮತ್ತು ನದಿ ಸವೆತದಿಂದ ಈ ಪ್ರದೇಶದಾದ್ಯಂತ ಲಕ್ಷಾಂತರ ಮಕ್ಕಳು ನಿರಾಶ್ರಿತರಾಗಿದ್ದಾರೆ ಮತ್ತು ಯಾವುದೇ ಆರೋಗ್ಯ ರಕ್ಷಣೆ ಮತ್ತು ನೀರಿಲ್ಲದಂತಾಗಿದ್ದಾರೆ ಎಂದು ಯುನಿಸೆಫ್ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಜಾರ್ಜ್ ಲಾರ್ಯಾ-ಅಡ್ಜಿ ಹೇಳಿದರು.

ಹವಾಮಾನ ಬದಲಾವಣೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವು ದಕ್ಷಿಣ ಏಷ್ಯಾದ ಮಕ್ಕಳಿಗೆ ಆತಂಕಕಾರಿ ಬಿಕ್ಕಟ್ಟನ್ನು ಸೃಷ್ಟಿಸಿದೆ. ''ನಾವು ನೀರು, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಲ್ಲಿ ಹೂಡಿಕೆ ಮಾಡಿದರೆ, ಬದಲಾಗುತ್ತಿರುವ ಪರಿಸರ ಮತ್ತು ಹದಗೆಟ್ಟ ವಾತಾವರಣದ ಪರಿಣಾಮಗಳಿಂದ ನಾವು ಮಕ್ಕಳ ಭವಿಷ್ಯವನ್ನು ರಕ್ಷಿಸಬಹುದು ಎಂದು ಲಾರ್ಯ-ಅಡ್ಜಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.