ಅಲಿಗಢ(ಉತ್ತರ ಪ್ರದೇಶ): ದೇಶದಲ್ಲಿ ತಾಲಿಬಾನಿ ಶಿಕ್ಷಾ ಪದ್ಧತಿಗಳಿವೆ ಎಂಬುದಕ್ಕೆ ವೈರಲ್ ವಿಡಿಯೋವೊಂದು ಸಾಕ್ಷಿ ಒದಗಿಸುತ್ತಿದೆ. ಅಲಿಗಢದ ಸಾಸನಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತಲೀಮುಲ್ ಕುರಾನ್ ಮದರಸಾದಲ್ಲಿ ಬಾಲಕರನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಲಡಿಯಾ ಪ್ರದೇಶದಲ್ಲಿರುವ ಮದರಸಾವನ್ನು ಮೌಲಾನಾ ಫಹೀಮುದ್ದೀನ್ ಎಂಬಾತ ನಡೆಸುತ್ತಿದ್ದಾನೆ. ಮಕ್ಕಳನ್ನು ದೇಣಿಗೆ ಹೆಸರಲ್ಲಿ ಭಿಕ್ಷೆ ಬೇಡುವಂತೆ ಕಳುಹಿಸಿ, ಕಡಿಮೆ ಹಣ ತಂದವರಿಗೆ ಈ ರೀತಿಯ ಶಿಕ್ಷೆ ನೀಡಲಾಗುತ್ತದೆ ಎಂಬ ಅನುಮಾನ ವ್ಯಕ್ತವಾಗಿದೆ.
ಸ್ಥಳೀಯರಾದ ಮೊಹಮದ್ ರಿಜ್ವಾನ್ ಮತ್ತು ಆತನ ಸ್ನೇಹಿತ ವಸೀಂ ಇಬ್ಬರೂ ಕೂಡಾ ಈ ಕೃತ್ಯವನ್ನು ಕಂಡು ಫಹೀಮುದ್ದೀನ್ ಅನ್ನು ಪ್ರಶ್ನಿಸಲು ಮದರಸಾಗೆ ತೆರಳಿದಾಗ ಅವರ ಮೇಲೆ ಫಹೀಮುದ್ದೀನ್ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ಚೀನಾ ಕುತಂತ್ರ: ಗಡಿ ಮೇಲೆ ಅಧಿಪತ್ಯಕ್ಕೆ ಕ್ಸಿಯೋಕಾಂಗ್ ಗ್ರಾಮ ಯೋಜನೆ!
ಈಗ ರಿಜ್ವಾನ್ ಮತ್ತು ವಸೀಂ ಇಬ್ಬರೂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮದರಸಾವನ್ನೂ ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿಡಿಯೋವನ್ನು ಪರಿಶೀಲಿಸಿ, ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಸೂಚನೆ: ವೈರಲ್ ಆದ ವಿಡಿಯೋ ಸತ್ಯಾಸತ್ಯತೆಗೆ ಈಟಿವಿ ಭಾರತ ಜವಾಬ್ದಾರಿಯಾಗಿರುವುದಿಲ್ಲ.