ETV Bharat / bharat

ಬಾಡಿಗೆ ತಾಯ್ತನದ ಮಂಡಳಿ​ ರಚಿಸುವಂತೆ ಕೋರಿ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ರು ಮಕ್ಕಳಿಲ್ಲದ ದಂಪತಿ - ಬಾಡಿಗೆ ತಾಯ್ತನದ ಮಂಡಳಿ

ಮಹಿಳೆ ಡಯಾಬಿಟೀಸ್​ನಿಂದ ಬಳಲುತ್ತಿದ್ದು, ಚಿಕ್ಕ ವಯಸ್ಸಿನಲ್ಲೇ ಇನ್ನಿತರ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಮಗುವಿಗಾಗಿ ಅನೇಕ ಫರ್ಟಿಲಿಟಿ ಕ್ಲಿನಿಕ್ ಮತ್ತು ತಜ್ಞರನ್ನು ಭೇಟಿಯಾದರೂ ಯಾವುದೇ ಪ್ರಯೋಜನ ಪಡೆಯಲಿಲ್ಲ.

ಜಿಲ್ಲಾ ಬಾಡಿಗೆ ತಾಯ್ತನದ ಮಂಡಳಿ​ ರಚಿಸುವಂತೆ ಕೋರಿ ಬಾಂಬೆ ಹೈ ಕೋರ್ಟ್​ ಮೆಟ್ಟಿಲೇರಿದ ಮಕ್ಕಳಿಲ್ಲದ ದಂಪತಿ

author img

By

Published : Nov 29, 2022, 4:49 PM IST

ಮುಂಬೈ(ಮಹಾರಾಷ್ಟ್ರ): ಸರೊಗಸಿ ಕಾಯ್ದೆ 2021, ಅನುಸಾರ ಜಿಲ್ಲೆಗಳಲ್ಲಿ ಬಾಡಿಗೆ ತಾಯ್ತನದ ಮಂಡಳಿ (ಸರೊಗಸಿ ಬೋರ್ಡ್​​) ಸ್ಥಾಪನೆಗೆ ಮತ್ತು ಮುಂಬೈನಲ್ಲಿ ಬಂಜೆತನ ಚಿಕಿತ್ಸಾಲಯಗಳ ನೋಂದಣಿ ಪ್ರಕ್ರಿಯೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ದಂಪತಿ ಬಾಂಬೆ ಹೈಕೋರ್ಟ್​ ಮೊರೆ ಹೋಗಿದ್ದಾರೆ.

ನ್ಯಾ. ಎಸ್ ​ವಿ ಗಂಗಾಪುರ್ವಾಲ ನೇತೃತ್ವದ ಪೀಠ ಈ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದ್ದು, ಡಿಸೆಂಬರ್​ 12ರಂದು ಅರ್ಜಿ ವಿಚಾರಣೆ ನಡೆಸಲಿದೆ.

ಅರ್ಜಿ ಸಲ್ಲಿಸಿದ ದಂಪತಿಗಳಿಬ್ಬರಿಗೆ 40 ವರ್ಷ ತುಂಬಿದ್ದು, 2016ರಲ್ಲಿ ಅವರು ಮದುವೆಯಾಗಿದ್ದಾರೆ. ಮಹಿಳೆ ಡಯಾಬಿಟೀಸ್​ನಿಂದ ಬಳಲುತ್ತಿದ್ದು, ಚಿಕ್ಕ ವಯಸ್ಸಿನಲ್ಲೇ ಇನ್ನಿತರ ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಮಗುವಿಗಾಗಿ ಅನೇಕ ಬಂಜೆತನ ನಿವಾರಣೆ ಕ್ಲಿನಿಕ್​ ಮತ್ತು ತಜ್ಞರನ್ನು ಭೇಟಿಯಾದರೂ ಯಾವುದೇ ಪ್ರಯೋಜನ ಪಡೆಯಲಿಲ್ಲ. ಈ ಹಿನ್ನೆಲೆ ದಂಪತಿಯು ಬಾಡಿಗೆ ತಾಯ್ತನದ ಮೊರೆ ಹೋಗಿದ್ದಾರೆ. ಆದರೆ, ಇದುವರೆಗೂ ಯಾವುದೇ ಕ್ಲಿನಿಕ್​ಗಳು ಈ ಸರೊಗಸಿ ದಾಖಲಾತಿ ಹೊಂದಿಲ್ಲ ಎಂಬುದು ತಿಳಿದು ಬಂದಿದೆ.

ಮುಂಬೈನಲ್ಲಿ ಯಾವುದೇ ಕ್ಲಿನಿಕ್​ಗೆ ಸರೋಗಸಿ ನಿಯಮದ ಅನುಸಾರ ದಾಖಲಾತಿ ಹೊಂದಿಲ್ಲ. ಈ ಹಿನ್ನೆಲೆ ಈ ಸರೊಗಸಿ ಅರ್ಜಿಯನ್ನು ಯಾವುದೇ ಕ್ಲಿನಿಕ್​ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ. ಜಿಲ್ಲಾ ಬಾಡಿಗೆ ತಾಯ್ತನದ ಮಂಡಳಿ ಕೂಡ ಜಾರಿ ಇರುವ ಕಾಯ್ದೆ ಅಡಿ ಯಾವುದೇ ಅವಕಾಶ ನೀಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅರ್ಜಿದಾರರು ಸಹಾಯಕ ಸಂತಾನೋತ್ಪತ್ತಿ ತಂತ್ರಗಳು (ART) ಕಾರ್ಯವಿಧಾನಗಳಿಗೆ ಒಳಗಾಗುವುದನ್ನು ನಿಷೇಧಿಸುವುದು ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಸೂಚಿಸಲಾದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿರುತ್ತದೆ ಎಂದು ಅರ್ಜಿ ತಿಳಿಸಿದೆ.

ಇದನ್ನೂ ಓದಿ: ಲಿವ್ ಇನ್ ರಿಲೇಶನ್‌ಶಿಪ್: ಹಿಂಸಾಚಾರಕ್ಕೆ ಈಶಾನ್ಯ ಭಾಗದ ಯುವತಿಯರೇ ಹೆಚ್ಚು ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.