ETV Bharat / bharat

ಹುಟ್ಟಿನಿಂದಲೇ ಈ ಮಗುವಿಗೆ 4 ಕೈ - 4 ಕಾಲು: ಶಸ್ತ್ರಚಿಕಿತ್ಸೆಗಾಗಿ ಬಡ ಪೋಷಕರ ಪರದಾಟ

author img

By

Published : May 28, 2022, 3:53 PM IST

Updated : May 28, 2022, 4:25 PM IST

ಎರಡೂವರೆ ವರ್ಷದ ಹೆಣ್ಣು ಮಗು ಹುಟ್ಟಿನಿಂದಲೇ ತಲಾ ನಾಲ್ಕು ಕೈ - ಕಾಲುಗಳನ್ನು ಹೊಂದಿದೆ. ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಕೂಲಿ ಕಾರ್ಮಿಕ ಪೋಷಕರು ಪರದಾಡುತ್ತಿದ್ದಾರೆ.

child-with-4-hand-4-leg-in-nawada
ಹುಟ್ಟಿನಿಂದಲೇ 4 ಕೈ - 4 ಕಾಲು ಹೊಂದಿರುವ ಹೆಣ್ಣು ಮಗು

ನವಾಡ (ಬಿಹಾರ): ಬಿಹಾರದ ನವಾಡ ಜಿಲ್ಲೆಯಲ್ಲಿ ವಿಚಿತ್ರವಾದ ಮಗುವೊಂದು ಜನಿಸಿದೆ. ನಾಲ್ಕು ಕಾಲು ಮತ್ತು ನಾಲ್ಕು ಕೈಗಳನ್ನು ಹೊಂದಿರುವ ಮಗುವಿನ ಶಸ್ತ್ರಚಿಕಿತ್ಸೆಗಾಗಿ ಪೋಷಕರು ಜಿಲ್ಲಾಡಳಿತದ ಮೊರೆ ಹೋಗಿದ್ಧಾರೆ. ಇದೇ ವೇಳೆ, ಮಗುವನ್ನು ನೋಡಲು ಜನರು ಮುಗಿಬೀಳುತ್ತಿದ್ಧಾರೆ.

ಇಲ್ಲಿನ ಹೇಮಜಾ ಪಂಚಾಯಿತಿ ವ್ಯಾಪ್ತಿಯ ವರ್ಸಲಿಗಂಜ್​ ಪ್ರದೇಶದ ಬಸಂತ್​ ಕುಮಾರ್​ ಮತ್ತು ಉಷಾ ದೇವಿ ಎಂಬುವವರ ದಂಪತಿಯ ಪುತ್ರಿ ಚೌಮುಖಿ ಕುಮಾರಿಗೆ ತಲಾ ನಾಲ್ಕು ಕೈ-ಕಾಲುಗಳ ಇವೆ. ಎರಡೂವರೆ ವರ್ಷದ ಈ ಚೌಮುಖಿ ಹುಟ್ಟಿನಿಂದಲೂ ಹೀಗೆ ಇದ್ದು, ತಂದೆ ಬಸಂತ್​ ಕೂಲಿ ಕಾರ್ಮಿಕ ಆಗಿರುವುದರಿಂದ ಚಿಕಿತ್ಸೆ ಕೊಡಿಸಲು ಪರದಾಡುತ್ತಿದ್ದಾರೆ.

ಹುಟ್ಟಿನಿಂದಲೇ ಈ ಮಗುವಿಗೆ 4 ಕೈ - 4 ಕಾಲು

ಮಗು ಹುಟ್ಟಿದ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ನಮ್ಮಲ್ಲಿ ಹಣದ ಕೊರತೆಯಿಂದ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ನಿರಾಕರಿಸಿದರು ಎಂದು ಬಸಂತ್ ಹೇಳಿದ್ಧಾರೆ. ಹೀಗಾಗಿ ಇದೀಗ ಜಿಲ್ಲಾಡಳಿತದ ನೆರವು ಕೋರಲೆಂದು ಮಗುವಿನ ಸಮೇತವಾಗಿ ಈ ದಂಪತಿ ನವಾಡ ಜಿಲ್ಲಾ ಕೇಂದ್ರಕ್ಕೆ ಬಂದಿದ್ದಾರೆ. ವಿಚಿತ್ರವಾದ ಮಗುವನ್ನು ನೋಡಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಮತ್ತು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಸೆರೆಹಿಡಿದು ಕೊಳ್ಳುತ್ತಿದ್ಧಾರೆ.

ಇದನ್ನೂ ಓದಿ: ಬಿಹಾರದ ಒಂದು ಕಾಲಿನ ಬಾಲಕಿಗೆ ಕೃತಕ ಕಾಲು ಜೋಡಣೆ.. ವಿಕಲ ಚೇತನ ಬಾಲೆಗೆ ಜಿಲ್ಲಾಡಳಿತದ ನೆರವು..

Last Updated : May 28, 2022, 4:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.