ETV Bharat / bharat

ಗರ್ಭದಲ್ಲಿದ್ದಾಗ ಮಗು ದತ್ತು ತೆಗೆದುಕೊಳ್ಳುವಂತಿಲ್ಲ: ಕೋರ್ಟ್​​ ಮಹತ್ವದ ತೀರ್ಪು

ಗರ್ಭದಲ್ಲಿದ್ದ ಮಗುವಿನ ದತ್ತು ಪಡೆಯುವ ಕುರಿತಾಗಿ ಪಂಜಾಬ್ ಮತ್ತು ಹರಿಯಾಣ ಕೋರ್ಟ್​ ಮಹತ್ವದ ಆದೇಶ ನೀಡಿದೆ.

ಗರ್ಭದಲ್ಲಿದ್ದಾಗ ಮಗು ದತ್ತು ತೆಗೆದುಕೊಳ್ಳುವಂತಿಲ್ಲ: ಕೋರ್ಟ್​​ ಮಹತ್ವದ ತೀರ್ಪು
vಗರ್ಭದಲ್ಲಿದ್ದಾಗ ಮಗು ದತ್ತು ತೆಗೆದುಕೊಳ್ಳುವಂತಿಲ್ಲ: ಕೋರ್ಟ್​​ ಮಹತ್ವದ ತೀರ್ಪು
author img

By

Published : Jun 30, 2022, 10:55 PM IST

ಚಂಡೀಗಢ: ಗರ್ಭದಲ್ಲಿರುವ ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿದೆ.

ತನ್ನ ಮಗುವನ್ನು ಹೊಟ್ಟೆಯಲ್ಲಿದ್ದಾಗಲೇ ದತ್ತು ಪಡೆದಿದ್ದನ್ನು ಆಕ್ಷೇಪಿಸಿ ಪಟಿಯಾಲಾದ ಮಹಿಳೆಯೊಬ್ಬರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ಪೀಠ, ಮಗುವನ್ನು ಗರ್ಭದಲ್ಲಿದ್ದಾಗಲೇ ದತ್ತು ಪಡೆಯುವಂತಿಲ್ಲ. ಇದು ಹಿಂದೂ ದತ್ತು ಸ್ವೀಕಾರ ಕಾಯ್ದೆಯ ವಿರುದ್ಧವಾಗಿದೆ ಎಂದು ಹೇಳಿದೆ.

ಈ ಮೊದಲು ಮಹಿಳೆ ಗರ್ಭ ಧರಿಸಿದ್ದಾಗಲೇ ದಂಪತಿಯೊಬ್ಬರು ಮಗುವನ್ನು ದತ್ತು ಪಡೆಯಲು ಕೋರಿದ್ದರು. ಇದಕ್ಕೆ ಸಮ್ಮತಿಸಿದ್ದ ಮಹಿಳೆ, ಬಳಿಕ ನಿರ್ಧಾರ ಬದಲಿಸಿ ಮಗುವನ್ನು ತನಗೆ ವಾಪಸ್​ ನೀಡಬೇಕು ಎಂದು ಕೋರಿದ್ದರು.

ಆದರೆ, ದತ್ತು ಪಡೆದ ದಂಪತಿ ಮಗುವನ್ನು ವಾಪಸ್​ ನೀಡಿರಲಿಲ್ಲ. ಇದರ ವಿರುದ್ಧ ಕೋರ್ಟ್​ ಮೊರೆ ಹೋಗಿದ್ದ ಮಹಿಳೆ ಮಗು ಜನಿಸುವ ಮುನ್ನವೇ ದತ್ತು ಪಡೆಯಲಾಗಿದೆ. ಮಗುವಿನ ನೋಂದಾಯಿತ ಪತ್ರವೂ ಇಲ್ಲ. ಹೀಗಾಗಿ ಮಗುವನ್ನು ತನಗೆ ವಾಪಸ್​ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ವಿಚಾರಣೆಯ ಬಳಿಕ ಮಗುವನ್ನು ವಾಪಸ್​ ನೀಡಲು ದಂಪತಿಗೆ ಕೋರ್ಟ್​ ತಾಕೀತು ಮಾಡಿದೆ. ಅಲ್ಲದೇ, ಇದು ಕಾನೂನುಬಾಹಿರವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಈಸ್‌ ಆಫ್‌ ಡೂಯಿಂಗ್‌ ಬಿಸ್ನೆಸ್‌ ಶ್ರೇಯಾಂಕ ಪಟ್ಟಿಯಲ್ಲಿ ಕರ್ನಾಟಕ ಟಾಪ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.