ನವದೆಹಲಿ: ಇಲ್ಲಿನ ಮುಕುಂದಪುರದ ಸಮತಾ ವಿಹಾರ್ ಪ್ರದೇಶದಲ್ಲಿ ಮಗುವೊಂದು ಆಟವಾಡಲು ಹೋಗಿ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಶುಕ್ರವಾರದಂದು ನಡೆದಿದೆ.
ಬನ್ಶು (13) ಮೃತ ದುರ್ದೈವಿ. ತನ್ನ ಸ್ನೇಹಿತರೊಂದಿಗೆ ನೇಣು ಹಾಕುವ ಆಟ ಆಡಲು ಹೋಗಿ ಬಾಲಕ ಮೃತಪಟ್ಟಿದ್ದಾನೆ. ಅವಘಡದ ಸಂದರ್ಭದಲ್ಲಿ ವಯಸ್ಕರು ಇರಲಿಲ್ಲ ಎಂಬುದು ತಿಳಿದುಬಂದಿದೆ.
ಮಾಹಿತಿಯ ಪ್ರಕಾರ, ಆಟದ ಸಮಯದಲ್ಲಿ ಬನ್ಶು ಕುತ್ತಿಗೆಗೆ ಕುಣಿಕೆ ಸಿಲುಕಿಕೊಂಡಿದೆ. ಆಗ ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದರೂ ವಿಫಲನಾದ. ಸ್ಥಳದಲ್ಲಿದ್ದ ಸಹೋದರ ತಮ್ಮ ತಂದೆಗೆ ವಿಷಯ ತಲುಪಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಬಂದ ಅವರು ಬಾಲಕನನ್ನು ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ರವಾನಿಸಿದರೂ ಪ್ರಯೋಜನವಾಗಲಿಲ್ಲ.
ಭಾಲ್ಸ್ವಾ ಡೈರಿ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಕರ್ಫ್ಯೂ ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಿನ ಕ್ರಮ: ಪೊಲೀಸ್ ಅಧಿಕಾರಿಗಳ ಖಡಕ್ ಎಚ್ಚರಿಕೆ