ETV Bharat / bharat

ಫಲಿಸದ 90 ಗಂಟೆಗಳ ಕಾರ್ಯಾಚರಣೆ: ಬದುಕಿ ಬರಲಿಲ್ಲ ಮಗು 'ಪ್ರಹ್ಲಾದ್' - ನಿವಾರಿ ಬೋರ್​ವೆಲ್​ ದುರಂತ

ಮಧ್ಯಪ್ರದೇಶದ ಸೇತುಪುರ ಗ್ರಾಮದಲ್ಲಿ ಅ. 4ರಂದು ಕೊಳವೆ ಬಾವಿಗೆ ಬಿದ್ದಿದ್ದ ಮಗು ವಿಧಿವಶವಾಗಿದೆ. ಸತತ ನಾಲ್ಕು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಅದು ಫಲ ನೀಡಿಲ್ಲ.

child-dead-who-fell-in-borewell-in-niwari
ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ಸಾವು
author img

By

Published : Nov 8, 2020, 7:48 AM IST

ನಿವಾರಿ(ಮಧ್ಯಪ್ರದೇಶ): ಮಧ್ಯಪ್ರದೇಶದ ಪೃಥ್ವಿಪುರ ಪ್ರದೇಶದ ಸೇತುಪುರ ಗ್ರಾಮದ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ಸಾವನ್ನಪ್ಪಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಅ. 4ರಂದು 3 ವರ್ಷದ ಮಗು ಪ್ರಹ್ಲಾದ್​ ತೆರೆದ ಕೊಳವೆಬಾವಿ ಬಿದ್ದಿದ್ದ. ಪ್ರಹ್ಲಾದ್​ ರಕ್ಷಣೆಗೆ ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ಭರದಿಂದ ಸಾಗಿತ್ತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಸೇನೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು.

ಬುಧವಾರ ಬೆಳಗ್ಗೆ ಬೋರ್‌ವೆಲ್‌ನಲ್ಲಿ ಬಿದ್ದ ಮಗುವನ್ನು ಸತತ ಕಾರ್ಯಾಚರಣೆ ಬಳಿಕ ಭಾನುವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಹೊರತೆಗೆಯಲಾಗಿತ್ತು. ನಂತರ ನಿವಾರಿಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವೆಂಬಂತೆ ಸತತ ಕಾರ್ಯಾಚರಣೆ ಫಲಿಸಲಿಲ್ಲ, ಮಗು ಪ್ರಹ್ಲಾದ್​ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಸುಮಾರು 90 ಗಂಟೆಗಳ ಪರಿಶ್ರಮದ ನಂತರ ಸಿಬ್ಬಂದಿ ಮಗುವನ್ನು ಹೊರ ತೆಗೆದಿದ್ದರು. ಮಗು ಪ್ರಹ್ಲಾದ್​ ಬದುಕಿ ಬರಲೆಂದು ಎಲ್ಲೆಡೆ ಪ್ರಾರ್ಥಿಸಲಾಗಿತ್ತು. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಕೂಡ ಮಗುವನ್ನು ರಕ್ಷಣೆ ಮಾಡುವ ವಿಶ್ವಾಸವಿದೆ. ದೇವರು ಮಗುವಿಗೆ ದೀರ್ಘಾಯುಷ್ಯ ನೀಡಲಿ. ಎಲ್ಲರೂ ಮಗುವಿಗಾಗಿ ಪ್ರಾರ್ಥಿಸೋಣ ಎಂದು ಟ್ವೀಟ್​ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.