ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಕೊಲಾಬಾದಲ್ಲಿರುವ ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಮನೆಗೆ ಬುಧವಾರ ಭೇಟಿ ನೀಡಿದರು. ಶಿಂಧೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುಮಾರು ಒಂದು ತಿಂಗಳ ನಂತರ ಟಾಟಾ ಸನ್ಸ್‌ನ ಎಮೆರಿಟಸ್ ಅಧ್ಯಕ್ಷ ಟಾಟಾ ಅವರನ್ನು ಭೇಟಿಯಾದರು. ಅಲ್ಲಿ ಶಿಂಧೆ ಅವರು ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳನ್ನು ಹೆಚ್ಚಿಸುವ ಕುರಿತು ಮಾತುಕತೆ ನಡೆಸಿದರು.
ರಾಜ್ಯದ ಉನ್ನತ ಸಾಂವಿಧಾನಿಕ ಹುದ್ದೆಗೆ ಏರಿರುವ ಹೊಸ ಸಿಎಂಗೆ ಕೈಗಾರಿಕೋದ್ಯಮಿ ಶುಭಾಶಯ ಕೋರಿದ್ದು, ಅವರು ತಮ್ಮ ಅಧಿಕಾರಾವಧಿಯಲ್ಲಿ ಯಶಸ್ಸನ್ನು ಕಾಣಲಿ ಎಂದು ಹಾರೈಸಿದ್ದಾರೆಂದು ಶಿಂಧೆ ಅವರ ಕಚೇರಿ ಹೊರಡಿಸಿದ ಹೇಳಿಕೆ ತಿಳಿಸಿದೆ. ಈ ಸಂದರ್ಭದಲ್ಲಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ಶಿಂಧೆ ಅವರು ಶಿವಸೇನಾ ಸಂಸದ ಗಜಾನನ ಕೀರ್ತಿಕರ್, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಮತ್ತು ಹಲವು ವರ್ಷಗಳ ಹಿಂದೆ ರಾಜಕೀಯ ತೊರೆದಿದ್ದ ಉದ್ಧವ್ ಠಾಕ್ರೆ ಅವರ ಸೊಸೆ ಸ್ಮಿತಾ ಠಾಕ್ರೆ ಅವರನ್ನು ಸಹ್ಯಾದ್ರಿ ಅತಿಥಿ ಗೃಹದಲ್ಲಿ ಭೇಟಿ ಮಾಡಿದರು. ಅಲ್ಲದೇ ರಾಜ್ಯದ ಅಭಿವೃದ್ಧಿ ಬಗ್ಗೆಯೂ ಚರ್ಚಿಸಿದರು.
ಇದನ್ನೂ ಓದಿ: ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ: ಭದ್ರತೆಗಾಗಿ ಒಟ್ಟು 22 ಸಾವಿರ ಪೊಲೀಸರ ನಿಯೋಜನೆ